Hashtagintro

ಟಾಲಿವುಡ್​​ ಬಗ್ಗೆ ಟೀಕೆ, ರಾಧಿಕಾ ಆಪ್ಟೆಗೆ ನಟಿ ಪಾಯಲ್ ಕ್ಲಾಸ್

ಟಾಲಿವುಡ್​​ ಬಗ್ಗೆ ಟೀಕೆ, ರಾಧಿಕಾ ಆಪ್ಟೆಗೆ ನಟಿ ಪಾಯಲ್ ಕ್ಲಾಸ್

ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ವಿಶೇಷವಾಗಿ ತೆಲುಗು ಚಿತ್ರರಂಗದ ಬಗ್ಗೆ ಮಾಡಿರುವ ನೆಗಟಿವ್ ಕಮೆಂಟ್​​ಗಳಿಗೆ ತೆಲುಗು ಚಿತ್ರರಂಗ ತೀಕ್ಷಣವಾಗಿ ಪ್ರತಿಕ್ರಿಯಿಸಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಧಿಕಾ ಆಪ್ಟೆ, ತಾವು ನಟಿಸಿದ್ದ ತೆಲುಗು ಸಿನಿಮಾ ಒಂದರ ಬಗ್ಗೆ ವ್ಯಂಗ್ಯ ಮಾಡಿದ್ದರು. ನಂದಮೂರಿ ಬಾಲಕೃಷ್ಣ ಅವರ ಹೆಸರು ಹೇಳದೆ ಅವರು ಟೀಕೆ ಮಾಡಿದ್ದರು. ಅಲ್ಲದೆ, ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯರ ಬಣ್ಣದ ಬಗ್ಗೆ ಹೆಚ್ಚು ಆಸಕ್ತಿ ಎಂದೆಲ್ಲ ವಿಮರ್ಶೆ ಮಾಡಿದ್ದರು. ಇದೀಗ ರಾಧಿಕಾ ಹೇಳಿಕೆಗೆ ತೀವ್ರ ವಿರೋಧವನ್ನು ನಟಿ ಪಾಯಲ್ ವ್ಯಕ್ತಪಡಿಸಿದ್ದು, ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ಆರ್ ಎಕ್ಸ್ 100’ ಸಿನಿಮಾ ಮೂಲಕ ತೆಲುಗು ಸಿನಿಮಾನಲ್ಲಿ ನಟನೆ ಆರಂಭಿಸಿದ ಪಾಯಲ್ ರಜಪೂತ್, ಇದೀಗ ರಾಧಿಕಾ ಆಪ್ಟೆ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟಾಲಿವುಡ್​​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತೆಲುಗು ಚಿತ್ರರಂಗ ತನಗೆ ಸಾಕಷ್ಟು ಹೆಸರನ್ನು, ಗುರುತನ್ನು ಮತ್ತು ಭದ್ರತೆಯನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ. ವೃತ್ತಿಜೀವನ ನೀಡಿದ ಚಿತ್ರರಂಗದ ಬಗ್ಗೆ ಇಂತಹ ಅನುಚಿತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ. ‘ತೆಲುಗು ಚಿತ್ರರಂಗವು ಅತ್ಯಂತ ಶಿಸ್ತಿನಿಂದ ಕೂಡಿದೆ. ಇಲ್ಲಿ ನಟ-ನಟಿಯರನ್ನು ಬಹಳ ಗೌರವಿಸಲಾಗುತ್ತದೆ. ನಮಗೆ ಒಳ್ಳೆಯ ಜೀವನವನ್ನು, ಭವಿಷ್ಯವನ್ನು ನೀಡಿದ ಇಂಡಸ್ಟ್ರಿ ಬಗ್ಗೆ ಮನಬಂದಂತೆ ಮಾತನಾಡೋದು ಸರಿಯಾದ ಪದ್ಧತಿಯಲ್ಲ’ ಎಂದು ಪಾಯಲ್ ರಜಪೂತ್ ಕೌಂಟರ್ ಕೊಟ್ಟಿದ್ದಾರೆ.

ಇದನ್ನೂ ಓದಿ:ನಿಂತೇ ಹೋಯ್ತು ಫಹಾದ್ ಫಾಸಿಲ್ ನಟಿಸಲಿದ್ದ ಮೊದಲ ಬಾಲಿವುಡ್ ಸಿನಿಮಾ

‘ನಾನೊಬ್ಬ ಹೆಮ್ಮೆಯ ತೆಲುಗು ನಟಿಯಾಗಿ ಟಾಲಿವುಡ್‌ನಲ್ಲಿ ಮುಂದುವರಿಯುತ್ತಿದ್ದೇನೆ. ಇಲ್ಲಿನ ಪ್ರೇಕ್ಷಕರು ತೋರಿಸುವ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ. ನಾನು ತೆಲುಗು ನಟಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ನಿಮಗೆ ಹೆಸರು, ಖ್ಯಾತಿ, ಸ್ಟಾರ್‌ಡಮ್ ತಂದುಕೊಟ್ಟ ಚಲನಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡುವುದು. ವರ್ಷಗಳ ನಂತರ ಹೀಗೆ ಆರೋಪ ಮಾಡುವುದು ಧೈರ್ಯ ಎನಿಸಿಕೊಳ್ಳುವುದಿಲ್ಲ. ನಿಮ್ಮ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದ ಇಡೀ ಇಂಡಸ್ಟ್ರಿ ಮೇಲೆ ಹೀಗೆ ಟೀಕೆ ಮಾಡುವುದು ನಿಮ್ಮಲ್ಲಿರುವ ಅಸಹನೆ ಮತ್ತು ಅಸೂಯೆಗೆ ನಿದರ್ಶನವಾಗಿದೆ. ಇಂದು ನಾನು ಈ ಮಟ್ಟದಲ್ಲಿದ್ದೇನೆ ಎಂದರೆ ಅದಕ್ಕೆ ಕಾರಣ ಟಾಲಿವುಡ್. ಕಷ್ಟದ ಕಾಲದಲ್ಲಿ ನನಗೆ ಬೆಂಬಲವಾಗಿ ನಿಂತ ಈ ಇಂಡಸ್ಟ್ರಿಗೆ ನಾನು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ಅವರು ತಮ್ಮ ‘ಅಕ್ಕ’ ವೆಬ್ ಸರಣಿಯ ಪ್ರಚಾರ ಸಂದರ್ಭದಲ್ಲಿ ಮಾತನಾಡಿ, ‘ನಾನು ದಕ್ಷಿಣದ ಸಿನಿಮಾ ಒಂದರಲ್ಲಿ ನಟಿಸಿದ್ದೆ. ಆ ಸಿನಿಮಾನಲ್ಲಿ ನನ್ನ ಪಾತ್ರ ನನ್ನ ಮೆಟರ್ನಲ್ ಅಂಕಲ್ (ಮಾಮ)ನನ್ನೇ ಮದುವೆ ಆಗುತ್ತದೆ. ಆ ಸಿನಿಮಾನಲ್ಲಿ ನಾನು ನನಗಿಂತಲೂ ಬಹಳ ವಯಸ್ಸಾದ ನಾಯಕನೊಟ್ಟಿಗೆ ರೊಮ್ಯಾನ್ಸ್ ಮಾಡಬೇಕಿತ್ತು. ಅದೆಲ್ಲ ನನಗೆ ಬಹಳ ಕಷ್ಟ ತಂದಿತ್ತು. ಆದರೆ ಸಹಿಸಿಕೊಂಡು ಮಾಡಿದ್ದೆ’ ಎಂದಿದ್ದರು. ಅಲ್ಲದೆ, ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯರ ಬಣ್ಣದ ಬಗ್ಗೆ ವಿಶೇಷ ಮೋಹ ಇದೆ ಹಾಗಾಗಿ ನಾನು ದಕ್ಷಿಣದ ಜೊತೆಗೆ ಅಂತರ ಕಾಯ್ದುಕೊಂಡೆ’ ಎಂದಿದ್ದರು.

ರಾಧಿಕಾ ಆಪ್ಟೆ ಅವರ ಈ ಹೇಳಿಕೆಗಳ ಬಗ್ಗೆ ಅವರಿಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ನಟಿ ಪಾಯಲ್ ಸಹ ಟಾಂಗ್ ಕೊಟ್ಟಿದ್ದಾರೆ ಅಲ್ಲದೆ, ತೆಲುಗು ಚಿತ್ರರಂಗಕ್ಕೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language