Hashtagintro

ಟೈಗರ್ ಶ್ರಾಫ್ ಮೇಲೆ ದಾಳಿ: ಕೇವಲ ₹36,000 ಹಣಕ್ಕಾಗಿ ಕೊಲೆ ಮಾಡಲು ಬಂದಿದ್ದ ಪಾತಕಿಗಳು

ಟೈಗರ್ ಶ್ರಾಫ್ ಮೇಲೆ ದಾಳಿ: ಕೇವಲ ₹36,000 ಹಣಕ್ಕಾಗಿ ಕೊಲೆ ಮಾಡಲು ಬಂದಿದ್ದ ಪಾತಕಿಗಳು

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಟೈಗರ್ ಶ್ರಾಫ್ ಗಾಯಗೊಂಡಿದ್ದಾರೆ. ಅವರ ಡ್ರೈವರ್ ಹಾಗೂ ಪಾದಚಾರಿಯೊಬ್ಬರು ಸಹ ಗಾಯಗೊಂಡಿದ್ದಾರೆ. ಟೈಗರ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ ಅವರ ಡ್ರೈವರ್​ ಹಾಗೂ ಪಾದಚಾರಿಯೊಬ್ಬ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಲ್ಲಿ ಇಬ್ಬರ ವಯಸ್ಸು 18 ಒಬ್ಬನ ವಯಸ್ಸು 23 ಆಗಿದೆ. ಈ ಆರೋಪಿಗಳು ಕ್ಷುಲ್ಲಕ ಹಣಕ್ಕೆ ಬಾಲಿವುಡ್ ನಟನನ್ನು ಕೊಲ್ಲಲು ಮುಂದಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಭೂಗತ ಪಾತಕಿ ಬಿಷ್ಣೋಯಿ ಗ್ಯಾಂಗಿನ ಸದಸ್ಯ ಅನಿಲ್ ಪಂಡಿತ್ ಎಂಬಾತನಿಂದ ಸುಪಾರಿ ಪಡೆದು ಈ ಮೂವರು ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ್ದರು. ಇವರು ಮಾತ್ರವೇ ಅಲ್ಲದೆ, ಇನ್ನೂ ನಾಲ್ವರನ್ನು ಪೊಲೀಸರು ನಿನ್ನೆ ಬಂಧಿಸಿದ್ದು, ಒಟ್ಟು ಏಳು ಮಂದಿ ಈ ಪ್ರಕರಣದಲ್ಲಿ ಈ ವರೆಗೆ ಬಂಧನಕ್ಕೆ ಒಳಗಾದಂತಾಗಿದೆ. ಇವರೆಲ್ಲ ತೀರ ಕ್ಷುಲ್ಲಕ ಮೊತ್ತದ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅದರಲ್ಲೂ ಬಾಲಿವುಡ್​​ನಲ್ಲಿ ಸೆಲೆಬ್ರಿಟಿ ಎನಿಸಿಕೊಂಡಿರುವ ವ್ಯಕ್ತಿಯನ್ನು ಕೊಲ್ಲಲು ಮುಂದಾಗಿದ್ದರು.

ಪೊಲೀಸರ ತನಿಖೆಯ ಪ್ರಕಾರ ಹಣದ ಆಮಿಷ ಹಾಗೂ ವಿದೇಶದಲ್ಲಿ ಉದ್ಯೋಗದ ಆಮಿಷಕ್ಕೆ ಒಳಗಾಗಿ ಯುವಕರು ಬಂದೂಕು ಹಿಡಿದು ಕೊಲ್ಲಲು ಮುಂದಾಗಿದ್ದರು. ಇವರಿಗೆ ಸುಪಾರಿ ಕೊಟ್ಟಿದ್ದ ಅನಿಲ್ ಪಂಡಿತ್, ಮುಖ್ಯ ಶೂಟರ್ ಆಗಿದ್ದ ಹೃತಿಕ್ ಎಂಬಾತನಿಗೆ ಕೇವಲ 36 ಸಾವಿರ ರೂಪಾಯಿಗೆ ಡೀಲ್ ಒಪ್ಪಿಸಿದ್ದನಂತೆ. ಇನ್ನುಳಿದ ಶೂಟರ್​​ಗಳಿಗೆ ಇನ್ನೂ ಕಡಿಮೆ ಮೊತ್ತ ಸಿಗುತ್ತಿತ್ತು. ಮೊದಲಿಗೆ ಅಡ್ವಾನ್ಸ್ ರೂಪದಲ್ಲಿ ಎಲ್ಲರಿಗೂ ಸೇರಿ 50 ಸಾವಿರ ರೂಪಾಯಿ ಹಣ ನೀಡಲಾಗಿತ್ತು. ಆ ಹಣವನ್ನೂ ಸಹ ಒಮ್ಮೆಲೆ ಅಲ್ಲದೆ, ಒಮ್ಮೆ ಐದು ಸಾವಿರ ಮತ್ತೊಂದು ದಿನ 10 ಸಾವಿರ ಹೀಗೆ ಕಂತುಗಳಲ್ಲಿ ಹಣ ಪಾವತಿಸಲಾಗಿತ್ತು. ತಮಗೆ ನೀಡಲಾಗಿದ್ದ ಅಡ್ವಾನ್ಸ್ ಹಣದಲ್ಲಿ 25 ಸಾವಿರ ರೂಪಾಯಿಗೆ ಪಲ್ಸರ್ ಬೈಕ್ ಖರೀದಿ ಮಾಡಿದ್ದ ಮೂವರು ಇನ್ನುಳಿದ ಹಣವನ್ನು ವಸತಿ, ಊಟ, ಪ್ರಯಾಣ ಇನ್ನಿತರೆಗಳಿಗೆ ಖರ್ಚು ಮಾಡಿದ್ದರು.

ಇದನ್ನೂ ಓದಿ:ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಎಐ ವಿಡಿಯೋ, ಸುಳ್ಳು ಮಾಹಿತಿ ವಿರುದ್ಧ ಎಚ್ಚರಿಕೆ

ಹಣದ ಜೊತೆಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ವಿದೇಶದಲ್ಲಿಯೇ ಇರಲು ವ್ಯವಸ್ಥೆ ಮಾಡಿಕೊಡುವುದಾಗಿ ಅನಿಲ್ ಪಂಡಿತ್ ಭರವಸೆ ನೀಡಿದ್ದನಂತೆ. ಬಡ ಕುಟುಂಬದವರಾದ ಯುವಕರು ಆತನ ಮಾತು ನಂಬಿ ಟೈಗರ್ ಶ್ರಾಫ್ ಅನ್ನು ಕೊಲ್ಲಲು ಮುಂದಾಗಿದ್ದಾರೆ. ಈಗ ಮೂವರೂ ಪೊಲೀಸರ ಅತಿಥಿ ಆಗಿದ್ದಾರೆ.

ಅವರು ಮಾತ್ರವೇ ಅಲ್ಲದೆ ಇನ್ನೂ ನಾಲ್ವರನ್ನು ಪೊಲೀಸರು ಬಂದಿಸಿದ್ದಾರೆ. ಅವರ ವಯಸ್ಸೂ ಸಹ 23 ದಾಟಿಲ್ಲ. ನಿನ್ನೆ ಬಂಧಿಸಿದ ನಾಲ್ವರಲ್ಲಿ ಇಬ್ಬರು ಯುವತಿಯರು ಸಹ ಇದ್ದು ಒಬ್ಬ ಯುವತಿಯ ವಯಸ್ಸು 19 ಮತ್ತೊಬ್ಬ ಯುವತಿಯ ವಯಸ್ಸು 21. ಬಂಧಿತರಲ್ಲಿ ಬಹುತೇಕರು ಉತ್ತರ ಪ್ರದೇಶ, ಹರಿಯಾಣ ಹಾಗೂ ಬಿಹಾರ ಮೂಲದವರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language