Hashtagintro

ಟೋಲ್ ಪ್ಲಾಜಾ ಸಮೀಪದ ನಿವಾಸಿಗಳ ಗಮನಕ್ಕೆ: ಬಿಗ್ ರಿಲೀಫ್‌ ನೀಡಿದ ಕೇಂದ್ರ ಸರ್ಕಾರ; ನ.1ರಿಂದ ಬರಲಿದೆ ಹೊಸ ನಿಯಮ

ಟೋಲ್ ಪ್ಲಾಜಾ ಸಮೀಪದ ನಿವಾಸಿಗಳ ಗಮನಕ್ಕೆ: ಬಿಗ್ ರಿಲೀಫ್‌ ನೀಡಿದ ಕೇಂದ್ರ ಸರ್ಕಾರ; ನ.1ರಿಂದ ಬರಲಿದೆ ಹೊಸ ನಿಯಮ

ದೆಹಲಿ, ಅ,28: ರಾಷ್ಟ್ರೀಯ ಹೆದ್ದಾರಿಗಳ (National Highways) ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ನಿವಾಸಿಗಳು ಹಾಗೂ ಸ್ಥಳೀಯ ಖಾಸಗಿ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಅತ್ಯಂತ ಮಹತ್ವದ ಆರ್ಥಿಕ ವಿನಾಯಿತಿ ಘೋಷಿಸಿದೆ. ಟೋಲ್ ಪ್ಲಾಜಾಗಳ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ಖಾಸಗಿ ವಾಹನ ಮಾಲೀಕರಿಗಾಗಿ ರಿಯಾಯಿತಿ ದರದ ‘ವಾರ್ಷಿಕ ಸ್ಥಳೀಯ ಫಾಸ್ಟಾಗ್ ಪಾಸ್’ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಕೇಂದ್ರ ಸರ್ಕಾರವು ಈ ತಿದ್ದುಪಡಿಯನ್ನು ‘ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹಣೆ) (ಐದನೇ ತಿದ್ದುಪಡಿ) ನಿಯಮಗಳು, 2026’ರ ಅಡಿಯಲ್ಲಿ ಅಕ್ಟೋಬರ್ 26 ರಂದು ಅಧಿಕೃತವಾಗಿ ಜಾರಿಗೆ ತಂದಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಈ ಹೊಸ ನಿಯಮಗಳು 2026ರ ನವೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.

ವಾರ್ಷಿಕ ಪಾಸ್ ದರ ಎಷ್ಟು?

ಟೋಲ್ ಪ್ಲಾಜಾ ಸ್ಥಾಪಿತವಾಗಿರುವ ಸ್ಥಳದ ಆಧಾರದ ಮೇಲೆ ಕೇಂದ್ರ ಸರ್ಕಾರ ಎರಡು ಮಾದರಿಯ ವಾರ್ಷಿಕ ಶುಲ್ಕಗಳನ್ನು ನಿಗದಿಪಡಿಸಿದೆ. ನಗರಸಭೆ ಅಥವಾ ಪುರಸಭೆ/ಸ್ಥಳೀಯ ಪಟ್ಟಣದ ಗಡಿಯಿಂದ ಹೊರಗಿರುವ ಗ್ರಾಮೀಣ ಭಾಗದ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಶುಲ್ಕವಾಗಿ 1,500 ರೂ ನಿಗದಿ ಮಾಡಲಾಗಿದೆ. ನಗರಸಭೆ ಅಥವಾ ಪುರಸಭೆಯ ಗಡಿಯ ಒಳಗಿರುವ ನಗರ ವ್ಯಾಪ್ತಿಯ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಶುಲ್ಕವಾಗಿ 3 ಸಾವಿರ ರೂ ನಿಗದಿ ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದಿನನಿತ್ಯ ಟೋಲ್ ದಾಟುವ ಸ್ಥಳೀಯರು ಈವರೆಗೆ ತಿಂಗಳಿಗೆ 360 ರೂ. ರಂತೆ ವಾರ್ಷಿಕ ಸುಮಾರು 4,320 ರೂ. ಪಾವತಿಸುತ್ತಿದ್ದರು, ಹೊಸ ಯೋಜನೆಯಿಂದಾಗಿ ವಾರ್ಷಿಕ ಕನಿಷ್ಠ 2,820 ರೂ. ರಷ್ಟು ಹಣ ಉಳಿತಾಯವಾಗಲಿದೆ.

ಇದಕ್ಕೆ ಬೇಕಾಗಿರುವ ಅರ್ಹತೆ ಮತ್ತು ಷರತ್ತುಗಳು:

ಅರ್ಜಿದಾರರು ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು ಹಾಗೂ ಸೂಕ್ತ ವಿಳಾಸ ಪುರಾವೆ ಹೊಂದಿರಬೇಕು.

ಈ ರಿಯಾಯಿತಿ ಸೌಲಭ್ಯ ಕೇವಲ ವಾಣಿಜ್ಯೇತರ ಕಾರು, ಜೀಪ್ ಅಥವಾ ವ್ಯಾನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ವಾಹನದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ಸಿಂಧುವಾದ ಫಾಸ್ಟಾಗ್ ಇರಬೇಕು.

ಈ ಪಾಸ್ ಪಡೆದ ನಿರ್ದಿಷ್ಟ ಟೋಲ್ ಪ್ಲಾಜಾದಲ್ಲಿ ಮಾತ್ರ ಅನ್ವಯಿಸುತ್ತದೆ. ಇದು ದೇಶಾದ್ಯಂತ ಬಳಸಬಹುದಾದ ಸಾರ್ವತ್ರಿಕ ರಾಷ್ಟ್ರೀಯ ಪಾಸ್ ಅಲ್ಲ.

ಇದನ್ನೂ ಓದಿ: ಮೊಬೈಲ್ ಪಿಎಲ್​ಐ ಯಶಸ್ಸು ಎಷ್ಟು? ಸಬ್ಸಿಡಿ ಕೊಟ್ಟಿದ್ದು 19,000 ಕೋಟಿ ರೂ, ಸರ್ಕಾರಕ್ಕೆ ಆದಾಯ ಸಿಕ್ಕಿದ್ದು 3.25 ಲಕ್ಷ ಕೋಟಿ ರೂ

ಅನ್ವಯವಾಗದ ಮಾರ್ಗಗಳು

ನಿರ್ದಿಷ್ಟ ಮಾದರಿಯ ಶುಲ್ಕ ಸಂಗ್ರಹ ವ್ಯವಸ್ಥೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳು ಅಥವಾ ಎಕ್ಸ್‌ಪ್ರೆಸ್‌ವೇಗಳಲ್ಲಿ ಈ ಪಾಸ್‌ ಸಿಗುವುದಿಲ್ಲ. ಸ್ಥಳೀಯರ ಸಂಚಾರಕ್ಕೆ ಈಗಾಗಲೇ ಉಚಿತ ಸರ್ವೀಸ್ ರಸ್ತೆ ಅಥವಾ ಪರ್ಯಾಯ ರಸ್ತೆ ಲಭ್ಯವಿರುವ ಟೋಲ್ ಪ್ಲಾಜಾಗಳಲ್ಲಿ ಈ ಸೌಲಭ್ಯ ನೀಡುವುದಿಲ್ಲ.

ವಾಣಿಜ್ಯ ಸುದ್ದಿಗಳನ್ನು ಓದಲ ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language