
ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜಿಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದೆ. ಈ ಬಾರಿ ಹರಾಜಿಗೆ ಒಟ್ಟು 146 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಫ್ರಾಂಚೈಸಿಗಳ ಬಳಿ ಖಾಲಿ ಇರೋದು ಕೇವಲ 27 ಸ್ಲಾಟ್ಗಳು ಮಾತ್ರ. ಹೀಗಾಗಿ, ತಮಗೆ ಬೇಕಾದ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆಯಿದೆ.
ಹರಾಜಿಗೆ ಹೆಸರು ಕೊಟ್ಟಿರುವ 146 ಆಟಗಾರ್ತಿಯರಲ್ಲಿ 119 ಮಂದಿ ಭಾರತೀಯರು ಹಾಗೂ 27 ಮಂದಿ ವಿದೇಶಿ ಆಟಗಾರ್ತಿಯರು ಇದ್ದಾರೆ. ಭಾರತೀಯ ಆಟಗಾರ್ತಿಯರ ಪೈಕಿ 22 ಮಂದಿ ಕ್ಯಾಪ್ಡ್ ಆಟಗಾರ್ತಿಯರಾದ್ರೆ, 97 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ. ಇನ್ನು ವಿದೇಶಿ ಆಟಗಾರ್ತಿಯರಲ್ಲಿ 14 ಮಂದಿ ಕ್ಯಾಪ್ಡ್ ಹಾಗೂ 13 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರು ಸೇರಿದ್ದಾರೆ. ವಿದೇಶಿ ಆಟಗಾರ್ತಿಯರ ಪಟ್ಟಿಯಲ್ಲಿ ಅಸೋಸಿಯೇಟ್ ರಾಷ್ಟ್ರಗಳಿಗೆ ಸೇರಿದ ಆರು ಆಟಗಾರ್ತಿಯರೂ ಸ್ಥಾನ ಪಡೆದಿದ್ದಾರೆ.
News
#TATAWPLAuction 2027 Player List announced!
The player auction will see 146 players competing for 27 available slots
Kochi
October 28, 5.30 PM IST
More details | #TATAWPL
https://t.co/GKfyOO1Kar
— Women’s Premier League (WPL) (@wplt20) October 19, 2026
ಭಾರತೀಯ ಆಟಗಾರ್ತಿಯರಿಗೆ 20 ಸ್ಲಾಟ್ಗಳು
WPL 2027ರ ಹರಾಜಿನಲ್ಲಿ ಒಟ್ಟು 27 ಸ್ಲಾಟ್ಗಳು ಖಾಲಿ ಇವೆ. ಈ ಪೈಕಿ 20 ಸ್ಲಾಟ್ಗಳು ಭಾರತೀಯ ಆಟಗಾರ್ತಿಯರಿಗೆ ಮೀಸಲಾಗಿದ್ರೆ, ಉಳಿದ ಏಳು ಸ್ಲಾಟ್ಗಳನ್ನು ವಿದೇಶಿ ಆಟಗಾರ್ತಿಯರು ತುಂಬಲಿದ್ದಾರೆ. ಲಭ್ಯವಿರೋ ಸ್ಲಾಟ್ಗಳಿಗಿಂತ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರುವ ಆಟಗಾರ್ತಿಯರ ಸಂಖ್ಯೆ ಹೆಚ್ಚಾಗಿರುವುದರಿಂದ ಫ್ರಾಂಚೈಸಿಗಳು ಸಾಕಷ್ಟು ಲೆಕ್ಕಾಚಾರ ಹಾಕಿಕೊಂಡೇ ಬಿಡ್ ಮಾಡಬೇಕಿದೆ. ಅದರಲ್ಲೂ 97 ಅನ್‌ಕ್ಯಾಪ್ಡ್ ಭಾರತೀಯ ಆಟಗಾರ್ತಿಯರು ಹರಾಜಿನಲ್ಲಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತಾ ಅನ್ನೋ ಕುತೂಹಲವೂ ಹೆಚ್ಚಾಗಿದೆ. ಇನ್ನು 22 ಕ್ಯಾಪ್ಡ್ ಭಾರತೀಯ ಆಟಗಾರ್ತಿಯರೂ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಈ ಮೂವರಿಗೆ ಗರಿಷ್ಠ ಮೂಲ ಬೆಲೆ
ಈ ಬಾರಿಯ ಹರಾಜಿನಲ್ಲಿ ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಹಾಗೂ ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಗರಿಷ್ಠ ಮೂಲ ಬೆಲೆಯಾದ 50 ಲಕ್ಷ ರೂಪಾಯಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನು ಭಾರತೀಯ ಆಟಗಾರ್ತಿಯರಾದ ಜಿ. ಕಮಲಿನಿ ಹಾಗೂ ಕಿರಣ್ ನವ್ಗಿರೆ, ವಿದೇಶಿ ಆಟಗಾರ್ತಿಯರಾದ ಹೀದರ್ ಗ್ರಹಾಂ ಮತ್ತು ಜೆಸ್ ಜೊನಾಸೆನ್ ತಲಾ 40 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿ ಕೊಡಲಿದ್ದಾರೆ.
WPL 2026: 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ
ಇವರಲ್ಲದೆ, ಒಟ್ಟು 30 ಆಟಗಾರ್ತಿಯರು ತಲಾ 30 ಲಕ್ಷ ರೂಪಾಯಿ ಮೂಲ ಬೆಲೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ, ಈ ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳು ಎಷ್ಟು ಆಸಕ್ತಿ ತೋರಿಸುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ. ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಆರಂಭವಾಗಲಿದೆ. ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ತಂಡಗಳ ಅಗತ್ಯಕ್ಕೆ ತಕ್ಕಂತೆ ಆಟಗಾರ್ತಿಯರಿಗಾಗಿ ಬಿಡ್ ಮಾಡಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports

News 
Kochi
October 28, 5.30 PM IST
More details | #TATAWPL