
ಬೆಂಗಳೂರು, ನವೆಂಬರ್ 04: ನಾನು ಮತ್ತೆ ಸಚಿವನಾಗುತ್ತೇನೆಂಬ ಭರವಸೆ ಇದೆ ಎಂದು ಬಿ.ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಅಧಿವೇಶನದ ಒಳಗೆ ಬಾಕಿ ಸ್ಥಾನ ತುಂಬ ಬಹುದು. ಅದೆಲ್ಲ ಸಿಎಂ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಮರಳಿ ತನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದ್ದು, ಆ ಕುರಿತು ಕೊನೆಯವರೆಗೂ ಪ್ರಾರ್ಥನೆ ಮತ್ತು ಪ್ರಯತ್ನವನ್ನು ಮಾಡುತ್ತೇನೆ ಎಂದವರು ತಿಳಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ಈ ಹಿಂದೆ ರಾಜೀನಾಮೆ ಸಲ್ಲಿಸಿದ್ದರು. ಹೈಕಮಾಂಡ್ ಭೇಟಿಯಾಗಿ ಬೆಂಗಳೂರಿಗೆ ವಾಪಸಾದ ಬೆನ್ನಲ್ಲೇ ಹುದ್ದೆ ತೊರೆದಿದ್ದರು. ಹಗರಣ ಸಂಬಂಧ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮಳೆಗಾದ ವಿಧಾನ ಮಂಡಲ ಅಧಿವೇಶನದ ವೇಳೆ ತೀವ್ರ ಹೋರಾಟ ನಡೆಸಿದ್ದ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
