Hashtagintro

‘ದಕ್ಷಿಣ ಚಿತ್ರರಂಗ ನನಗೆ ಮರುಹುಟ್ಟು ಕೊಟ್ಟಿದೆ’; ಆಶಿಷ್ ವಿದ್ಯಾರ್ಥಿ

‘ದಕ್ಷಿಣ ಚಿತ್ರರಂಗ ನನಗೆ ಮರುಹುಟ್ಟು ಕೊಟ್ಟಿದೆ’; ಆಶಿಷ್ ವಿದ್ಯಾರ್ಥಿ

ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೋಷಕ ಹಾಗೂ ಖಳನಟನ ಪಾತ್ರಗಳ ಮೂಲಕ ಮನೆಮಾತಾಗಿರುವ ಹಿರಿಯ ನಟ ಆಶಿಷ್ ವಿದ್ಯಾರ್ಥಿ, ತಮ್ಮ ನಟನಾ ಪಯಣ ಹಾಗೂ ದಕ್ಷಿಣ ಭಾರತೀಯ ಸಿನಿಮಾರಂಗ ತಮಗೆ ನೀಡಿದ ಬೆಂಬಲದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಅವರು ದಕ್ಷಿಣ ಚಿತ್ರರಂಗಕ್ಕೆ ಧನ್ಯವಾದ ಹೇಳಿದ್ದಾರೆ.

ಸಿನಿಮಾ ರಂಗದಲ್ಲಿಅವರಿಗೆ ಅವಕಾಶಗಳೇ ಇರಲಿಲ್ಲ. ಸಿನಿಮಾ ರಂಗದವರು ತಮ್ಮ ಫೋನ್ ಕರೆಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಜನರು ನಿಮ್ಮನ್ನು ಗುರುತಿಸಿದರೂ ಫೋನ್ ಎತ್ತದೇ ಇದ್ದಾಗ ಆಗುವ ಅನುಭವ ವಿಚಿತ್ರವಾಗಿರುತ್ತದೆ. ನೀವು ಹಿಂದೆ ನಟಿಸುತ್ತಿದ್ದಿರಲ್ಲವೇ ಎಂದು ಕೆಲವರು ಕೇಳುತ್ತಾರೆ. ಆದರೆ ನಾನು ಈಗಲೂ ನಟಿಸುತ್ತಿದ್ದೇನೆ, ಭಾಷೆ ಬೇರೆಯಾಗಿರಬಹುದು ಆದರೆ ನಾನು ನಟನೇ ಎಂದು ಅವರಿಗೆ ತಿಳಿಸುತ್ತಿದ್ದ ದಿನ ಇತ್ತು’ ಎಂದು ಆಶಿಷ್ ವಿದ್ಯಾರ್ಥಿ ಹೇಳಿದ್ದಾರೆ.

ದಕ್ಷಿಣ ಭಾರತದ ಚಲನಚಿತ್ರರಂಗ ತಮಗೆ ನೀಡಿದ ಮರು ಜೀವದ ಬಗ್ಗೆ ಕೃತಜ್ಞತೆ ಸಲ್ಲಿಸಿದ ಅವರು, ‘ದಕ್ಷಿಣ ಭಾರತೀಯ ಚಿತ್ರರಂಗ ನನಗೆ ಜೀವಿಸಲು ಹೊಸ ಕಾರಣ ನೀಡಿತು. ಜೀವನದಲ್ಲಿ ಮನ್ನಣೆ ಕೊಟ್ಟಿತು. ಇಂದು ನಾನು ಜೀವಂತವಾಗಿದ್ದೇನೆ ಎಂದರೆ ಅದಕ್ಕೆ ದಕ್ಷಿಣದ ಚಿತ್ರರಂಗವೇ ಕಾರಣ’ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Ashish Vidyarthi (@ashishvidyarthi1)

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 11 ಭಾಷೆಗಳಲ್ಲಿ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವುದಾಗಿ ಹೇಳಿರುವ ಅವರು, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಳೆದ 11 ವರ್ಷಗಳು ತಮ್ಮ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿದವು ಎಂದು ತಿಳಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದ ಸಮಯದಲ್ಲೂ ದಕ್ಷಿಣ ಭಾರತದ ಚಿತ್ರರಂಗ ತಮ್ಮನ್ನು ಕೈಹಿಡಿದು ಬೆಳೆಸಿತು ಎಂದು ಆಶಿಷ್ ವಿದ್ಯಾರ್ಥಿ ಭಾವುಕರಾಗಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ: ನಟ ಆಶಿಷ್ ವಿದ್ಯಾರ್ಥಿ, ರೂಪಾಲಿ ದಂಪತಿ ಪರಿಸ್ಥಿತಿ ಹೇಗಿದೆ?

ಇತ್ತೀಚೆಗೆ ಕೆಲ ಕಲಾವಿದರು ದಕ್ಷಿಣದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಉದಾಹರಣೆ ಇದೆ. ಆದರೆ, ಆಶಿಷ್ ಆಡಿದ ಮಾತುಗಳಿಂದ ದಕ್ಷಿಣ ಚಿತ್ರರಂಗದ ಅಸಲಿ ಘನತೆ ರಿವೀಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language