Hashtagintro

ದೊಡ್ಡ ಬಜೆಟ್​​ನಲ್ಲಿ ನಿರ್ಮಾಣವಾದ ಮೊದಲ ಎಐ ಸಿನಿಮಾ ಫ್ಲಾಪ್; ಕೇವಲ 1 ಕೋಟಿ ರೂ. ಕಲೆಕ್ಷನ್

ದೊಡ್ಡ ಬಜೆಟ್​​ನಲ್ಲಿ ನಿರ್ಮಾಣವಾದ ಮೊದಲ ಎಐ ಸಿನಿಮಾ ಫ್ಲಾಪ್; ಕೇವಲ 1 ಕೋಟಿ ರೂ. ಕಲೆಕ್ಷನ್

ಬಾಕ್ಸ್ ಆಫೀಸ್ ಗಳಿಕೆಯ ಲೆಕ್ಕಾಚಾರಗಳು ಯಾವಾಗಲೂ ಅನಿರೀಕ್ಷಿತವಾಗಿರುತ್ತವೆ. ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡ ನಟರಿಲ್ಲದ ಚಿತ್ರವೊಂದು ಭಾರೀ ಯಶಸ್ಸು ಗಳಿಸಬಹುದು. ಅದೇ ಸಮಯದಲ್ಲಿ ಕೋಟಿ ಕೋಟಿ ವೆಚ್ಚದ ಸೂಪರ್‌ಸ್ಟಾರ್‌ಗಳ ಚಿತ್ರಗಳು ಹೀನಾಯವಾಗಿ ಸೋಲಬಹುದು. ಇಂತಹ ಹಲವು ಉದಾಹರಣೆಗಳನ್ನು ಚಿತ್ರರಂಗ ಈ ಹಿಂದೆ ಸಾಕಷ್ಟು ಬಾರಿ ಕಂಡಿದೆ.

ಚೀನಾದಲ್ಲಿ ಇತ್ತೀಚೆಗೆ ತೆರೆಕಂಡ ‘ಸಾನ್‌ಕ್ಸಿಂಗ್‌ಡುಯಿ: ಫ್ಯೂಚರ್ ಪಾಸ್ಟ್’ ಚಿತ್ರಕ್ಕೂ ಇದೇ ಸ್ಥಿತಿ ಬಂದೊದಗಿದೆ. ಬೋನಾ ಫಿಲ್ಮ್ ಗ್ರೂಪ್ ಸಂಸ್ಥೆಯು ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಿತ್ತು. ಕಳೆದ ಅಕ್ಟೋಬರ್ 23 ರಂದು ಈ ಚಿತ್ರವು ಚೀನಾದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಮೊದಲ ಆರು ದಿನಗಳಲ್ಲಿ ಈ ಚಿತ್ರ ಗಳಿಸಿದ್ದು ಕೇವಲ 1.5 ಕೋಟಿ ರೂಪಾಯಿ ಮಾತ್ರ.

ಈ ಚಿತ್ರದ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟ ಅಂಶವೆಂದರೆ ಇದನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಲಾಗಿತ್ತು. ನಿರ್ದೇಶಕ ಯುವೆ ಮಿಂಗ್ ಅವರ ಈ ವಿನೂತನ ಪ್ರಯೋಗಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರೀ ಬಂಡವಾಳ ಹೂಡಿದ್ದ ನಿರ್ಮಾಣ ಸಂಸ್ಥೆಗೆ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಸೆ ಎದುರಾಗಿದೆ.

ಮತ್ತೊಂದೆಡೆ ಆರಂಭದಲ್ಲಿ ಪ್ರೇಕ್ಷಕರಿಂದ ತೀವ್ರ ಗೇಲಿಗೊಳಗಾಗಿದ್ದ ‘ನ್ಯೂ ಲೈ’ ಎಂಬ ಚೀನೀ ಸಿನಿಮಾ ಅದ್ಭುತ ಸಾಧನೆ ಮಾಡಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ತುಣುಕುಗಳು ವೈರಲ್ ಆಗಿದ್ದು ಚಿತ್ರದ ಅದೃಷ್ಟವನ್ನೇ ಬದಲಾಯಿಸಿತು.

ಇದನ್ನೂ ಓದಿ: ಅನಿರುದ್ಧ್-ಕಾವ್ಯಾ ಮಾರನ್ ವಿವಾಹಕ್ಕೆ ವಿಶೇಷ ಥೀಮ್; ವಿವರಿಸಿದ ಡಿಸೈನರ್ ರಂಜಿನಿ

ಸಾಮಾಜಿಕ ಜಾಲತಾಣದ ವೈರಲ್ ವೀಡಿಯೊಗಳನ್ನು ನೋಡಿ ಜನರು ಚಿತ್ರಮಂದಿರಗಳತ್ತ ಹರಿದುಬಂದರು. ಈ ಮೂಲಕ ಅತ್ಯಂತ ಕಡಿಮೆ ನಿರೀಕ್ಷೆ ಹೊಂದಿದ್ದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ಸಂಚಲನ ಮೂಡಿಸಿತು. ತಂತ್ರಜ್ಞಾನಕ್ಕಿಂತಲೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಕಥಾಹಂದರವೇ ಗೆಲುವಿನ ಸೂತ್ರ ಎಂಬುದನ್ನು ಈ ಎರಡು ಸಿನಿಮಾಗಳು ಸಾಬೀತುಪಡಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language