Hashtagintro

ಧೋನಿ ಚೇಷ್ಟೆಗೆ ಹೈರಾಣಾದ ಸಾಕ್ಷಿ; ವಿಡಿಯೋ ವೈರಲ್

ಧೋನಿ ಚೇಷ್ಟೆಗೆ ಹೈರಾಣಾದ ಸಾಕ್ಷಿ; ವಿಡಿಯೋ ವೈರಲ್

ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಮೊದಲು ಪ್ರೀತಿಯಲ್ಲಿ ಬಿದ್ದು, ಆ ನಂತರ ವಿವಾಹವಾದರು ಎಂಬ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಆದರೆ, ಇವರಿಬ್ಬರ ನಡುವಿನ ಪ್ರೀತಿ ಇಂದಿಗೂ ಅದೇ ತಾಜಾತನದೊಂದಿಗೆ ಹೇಗೆ ಉಳಿದಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿಯಾಗಿದೆ. ಇನ್ನು, ಈ ವಿಡಿಯೋದಲ್ಲಿ ಅಂಥದ್ದೇನು ವಿಶೇಷ ಎಂದು ನೀವು ಕೇಳಬಹುದು. ವಿಶೇಷವಂತೂ ಇದ್ದೇ ಇದೆ ಬಿಡಿ! ಯಾಕೆಂದರೆ, ಈ ವಿಡಿಯೋದಲ್ಲಿ ಧೋನಿ ಮತ್ತು ಸಾಕ್ಷಿ ನಡುವಿನ ಐಸ್‌ಕ್ರೀಮ್ ಪ್ರೀತಿ ಹಾಗೂ ಮುದ್ದಾದ ತುಂಟಾಟ ಎಲ್ಲರ ಗಮನ ಸೆಳೆಯುತ್ತಿದೆ.

ಧೋನಿ ಚೇಷ್ಟೆಗೆ ಹೈರಾಣಾದ ಸಾಕ್ಷಿ

ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನ ಗೆಲ್ಲುತ್ತಿರುವ ಈ ವಿಡಿಯೋ ಯಾವುದೋ ಕಾರ್ಯಕ್ರಮದ ಸಂದರ್ಭದಲ್ಲಿ ಚಿತ್ರೀಕರಿಸಿರುವುದಾಗಿದೆ. ಆದರೆ, ಧೋನಿ ಮತ್ತು ಸಾಕ್ಷಿ ಭಾಗವಹಿಸಿದ್ದ ಆ ಕಾರ್ಯಕ್ರಮ ಎಲ್ಲಿ ನಡೆದಿತ್ತು? ಈ ವಿಡಿಯೋ ಯಾವ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ? ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ, ಈ ವಿಡಿಯೋದಲ್ಲಿರುವ ಮುದ್ದಾದ ಕ್ಷಣಗಳೇ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಧೋನಿ ಮತ್ತು ಸಾಕ್ಷಿ ನಡುವಿನ ಪ್ರೀತಿ, ಆತ್ಮೀಯತೆ ಹಾಗೂ ತುಂಟಾಟವನ್ನು ಕಂಡು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

ವಿಡಿಯೋದಲ್ಲಿ ಕಾಣಿಸುವಂತೆ, ಧೋನಿ ತಮ್ಮ ಪತ್ನಿ ಸಾಕ್ಷಿಗೆ ಐಸ್‌ಕ್ರೀಮ್ ತಿನ್ನಲು ನೀಡುತ್ತಾರೆ. ಸಾಕ್ಷಿ ಅದನ್ನು ತಿನ್ನಲು ಮುಂದಾಗುತ್ತಿದ್ದಂತೆ, ಧೋನಿ ಐಸ್‌ಕ್ರೀಮ್ ತುಂಬಿದ ಚಮಚವನ್ನು ಅವರ ಬಾಯಿಯ ಬಳಿಯಿಂದ ಹಿಂದಕ್ಕೆ ಎಳೆದುಕೊಂಡು ತಾವೇ ತಿನ್ನುತ್ತಾರೆ. ಪತ್ನಿಯೊಂದಿಗೆ ಧೋನಿ ಹೀಗೆ ಪ್ರೀತಿಯಿಂದ ತುಂಟಾಟ ಮಾಡುತ್ತಾರೆ ಎಂದು ಸಾಕ್ಷಿ ಕೂಡ ನಿರೀಕ್ಷಿಸಿರಲಿಲ್ಲವೇನೋ. ಆದರೆ, ತಮ್ಮ ವಿಭಿನ್ನ ನಡೆಗಳಿಂದ ಅಚ್ಚರಿ ಮೂಡಿಸುವುದು ಧೋನಿಯ ವಿಶೇಷತೆಗಳಲ್ಲಿ ಒಂದು.

ಸಾಕ್ಷಿಗೆ ಐಸ್‌ಕ್ರೀಮ್ ತಿನ್ನಿಸಿ ಪ್ರೀತಿ ತೋರಿದ ಧೋನಿ

ಸಾಕ್ಷಿಯೊಂದಿಗೆ ಹೀಗೆ ತುಂಟಾಟ ಮಾಡಿದ ಬಳಿಕ ಧೋನಿ ಜೋರಾಗಿ ನಗುತ್ತಾರೆ. ಆದರೆ, ಅಷ್ಟಕ್ಕೇ ಅವರ ಆಟ ಮುಗಿಯುವುದಿಲ್ಲ. ನಂತರ ತಮ್ಮ ಕೈಯಿಂದಲೇ ಸಾಕ್ಷಿಗೆ ಮತ್ತೆ ಐಸ್‌ಕ್ರೀಮ್ ತಿನ್ನಿಸುತ್ತಾರೆ. ಮೊದಲ ಬಾರಿ ಐಸ್‌ಕ್ರೀಮ್ ತಿನ್ನಲು ಮುಂದಾದಾಗ ಧೋನಿ ಚಮಚವನ್ನು ಹಿಂದಕ್ಕೆ ಎಳೆದಿದ್ದರಿಂದ ಸಾಕ್ಷಿ ಎರಡನೇ ಬಾರಿ ಐಸ್‌ಕ್ರೀಮ್ ತಿನ್ನಲು ನಿರಾಕರಿಸುತ್ತಾರೆ. ಸಾಕ್ಷಿಯ ಈ ವರ್ತನೆಯೂ ಸಹಜವೇ ಬಿಡಿ. ಆದರೆ, ಧೋನಿ ಪ್ರೀತಿಯಿಂದ ಮನವೊಲಿಸಿದಾಗ ಯಾರು ತಾನೇ ಬೇಡ ಎನ್ನಲು ಸಾಧ್ಯ? ಪತ್ನಿಯನ್ನು ಪ್ರೀತಿಯಿಂದ ಸಮಾಧಾನಪಡಿಸಿದ ಧೋನಿ, ಕೊನೆಗೆ ತಮ್ಮ ಕೈಯಿಂದಲೇ ಸಾಕ್ಷಿಗೆ ಐಸ್‌ಕ್ರೀಮ್ ತಿನ್ನಿಸುತ್ತಾರೆ.

ಧೋನಿ ಮತ್ತು ಸಾಕ್ಷಿ ನಡುವಿನ ಈ ಮುದ್ದಾದ ಕ್ಷಣಗಳು ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿವೆ. ವರ್ಷಗಳು ಕಳೆದರೂ ದಂಪತಿಯ ನಡುವಿನ ಪ್ರೀತಿ, ಆತ್ಮೀಯತೆ ಮತ್ತು ತುಂಟಾಟ ಅದೇ ರೀತಿ ಮುಂದುವರಿದಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language