Hashtagintro

‘ನನ್ನ ಡಿಕ್ಷನರಿಯಲ್ಲಿ ಭಯ ಎಂಬ ಪದವೇ ಇಲ್ಲ’: ಟೀಕೆಗಳಿಗೆ ಗಂಭೀರ್ ಖಡಕ್ ಉತ್ತರ

‘ನನ್ನ ಡಿಕ್ಷನರಿಯಲ್ಲಿ ಭಯ ಎಂಬ ಪದವೇ ಇಲ್ಲ’: ಟೀಕೆಗಳಿಗೆ ಗಂಭೀರ್ ಖಡಕ್ ಉತ್ತರ

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದೆ. ಸರಣಿಯನ್ನು 3-2 ಅಂತರದಿಂದ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇದೀಗ ಏಕದಿನ ಸರಣಿ ಆರಂಭವಾಗಲು ಇನ್ನೂ ನಾಲ್ಕು ದಿನಗಳಿದ್ದು, ಆಕ್ಲೆಂಡ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಏಕದಿನ ಸರಣಿ ಆರಂಭಕ್ಕೂ ಮುನ್ನ ಮಾತನಾಡಿರುವ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಪತ್ರಕರ್ತರ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.

ಭಯ ಎಂಬ ಪದಕ್ಕೆ ಜಾಗವಿಲ್ಲ

ಮೂರು ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಮತ್ತು ಅದರ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಯನ್ನು ಮುಖ್ಯ ಕೋಚ್ ಗೌತಮ್ ಗಂಭೀರ್​ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಂಭೀರ್, ‘ನಾನು ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ. ಕೆಲವೊಮ್ಮೆ ಇದು ಕಷ್ಟವಾಗುತ್ತದೆ. ನಾನೂ ಒಬ್ಬ ಮನುಷ್ಯ. ಆದರೆ ಈ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಅದೇ ನನ್ನ ಕೆಲಸ. ನನ್ನ ಡಿಕ್ಷನರಿಯಲ್ಲಾಗಲಿ, ಡೈರೆಕ್ಟರಿಯಲ್ಲಾಗಲಿ (ಡರ್) ಭಯ ಎಂಬ ಪದಕ್ಕೆ ಜಾಗವಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಇದೇ ವೇಳೆ ಟಿ20 ಸರಣಿಯಲ್ಲಿ ಆಟಗಾರರು ತೋರಿದ ಪ್ರದರ್ಶನ ಮತ್ತು ಒತ್ತಡ ನಿಭಾಯಿಸಿದ ರೀತಿಯನ್ನು ಶ್ಲಾಘಿಸಿದ ಗಂಭೀರ್, ‘15 ಗಂಟೆಗಳ ವಿಮಾನ ಪ್ರಯಾಣದ ಬಳಿಕ ಕೇವಲ ಒಂದು ಅಭ್ಯಾಸದ ಅವಧಿ ಪಡೆದು ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದು ಶ್ಲಾಘನೀಯ. ನಮ್ಮ ಆಟಗಾರರು ಒತ್ತಡವನ್ನು ನಿಭಾಯಿಸಿದ ರೀತಿ ನಿಜಕ್ಕೂ ಮೆಚ್ಚುವಂತದ್ದು’ ಎಂದು ಅವರು ಹೇಳಿದ್ದಾರೆ.

ಅಭ್ಯಾಸಕ್ಕೆ ಸಮಯ ಬೇಕು; ಗಂಭೀರ್

ಭಾರತ ತಂಡದ ವೇಳಾಪಟ್ಟಿಯ ಬಗ್ಗೆ ಮಾತ್ರ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ಟಿ20 ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ಬಂದಿಳಿದ ಭಾರತ ತಂಡಕ್ಕೆ ಕೇವಲ ಒಂದು ಅಭ್ಯಾಸದ ಅವಧಿ ಮಾತ್ರ ಸಿಕ್ಕಿತ್ತು. ಟೆಸ್ಟ್ ಸರಣಿಗೂ ಇದೇ ರೀತಿಯ ಒತ್ತಡದ ವೇಳಾಪಟ್ಟಿ ಎದುರಾಗುವ ಸಾಧ್ಯತೆಯಿದೆ. ನವೆಂಬರ್ 15ರಂದು ಟೌರಂಗಾದಲ್ಲಿ ಐದನೇ ಏಕದಿನ ಪಂದ್ಯ ನಡೆಯಲಿದ್ದು, ಇದಾದ ಕೇವಲ ನಾಲ್ಕು ದಿನಗಳ ಬಳಿಕ ಅಂದರೆ ನವೆಂಬರ್ 19ರಂದು ವೆಲ್ಲಿಂಗ್ಟನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಈ ಬಗ್ಗೆ ಮಾತನಾಡಿರುವ ಗಂಭೀರ್, ‘ವೇಳಾಪಟ್ಟಿ ಸಿದ್ಧಪಡಿಸುವ ಕೆಲಸ ಬಿಸಿಸಿಐ ಮಟ್ಟದಲ್ಲಿ ನಡೆಯುತ್ತದೆ. ಯಾವ ಪಂದ್ಯಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬುದು ಮುಖ್ಯ. ದೇಶದ ಪರ ಆಡುವ ಪ್ರತಿಯೊಂದು ಪಂದ್ಯವೂ ಮಹತ್ವದ್ದೇ. ಆದರೆ ಟೆಸ್ಟ್ ಕ್ರಿಕೆಟ್‌ನಂತಹ ಕೆಂಪು ಚೆಂಡಿನ ಪಂದ್ಯಕ್ಕೆ ಕೇವಲ ಮೂರು ದಿನಗಳ ಸಿದ್ಧತೆ ಸಾಕಾಗುವುದಿಲ್ಲ. ಕನಿಷ್ಠ 8ರಿಂದ 9 ದಿನಗಳ ಕಾಲಾವಕಾಶ ಸಿಕ್ಕರೆ ಉತ್ತಮ’ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಹೆಡ್ ಕೋಚ್ ಹುದ್ದೆಗೆ ಗುಡ್‌ಬೈ ಹೇಳ್ತಾರಾ ಗಂಭೀರ್? 4 ಫ್ರಾಂಚೈಸಿಗಳಿಂದ ಭರ್ಜರಿ ಆಫರ್

ಟಿ20 ಸರಣಿಯ ವೇಳಾಪಟ್ಟಿಯ ಬಗ್ಗೆಯೂ ಅವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮುಗಿಸಿ ಬಂದ ಭಾರತ ತಂಡಕ್ಕೆ ನ್ಯೂಜಿಲೆಂಡ್ ಪರಿಸರಕ್ಕೆ ಹೊಂದಿಕೊಳ್ಳಲು ಕೇವಲ ಒಂದು ದಿನದ ಸಮಯವಿತ್ತು. ಅಲ್ಲದೆ, ತಂಡದ ಬಹುತೇಕ ಆಟಗಾರರಿಗೆ ಈ ಹಿಂದೆ ನ್ಯೂಜಿಲೆಂಡ್‌ನಲ್ಲಿ ಆಡಿದ ಅನುಭವವೂ ಇರಲಿಲ್ಲ. ಅಲ್ಲಿನ ಹವಾಮಾನ, ಮೈದಾನದ ಅಳತೆ ಮತ್ತು ಆಟದ ಪರಿಸ್ಥಿತಿಗಳು ಭಾರತಕ್ಕಿಂತ ವಿಭಿನ್ನವಾಗಿವೆ ಎಂದು ಗಂಭೀರ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language