Hashtagintro

‘ನಮ್ಮ ಬಾಸ್ ಬೇಕು’: ಜೆನ್ಸೆನ್ ಹುವಾಂಗ್ ಪರ ನಿಂತ ಎನ್​ವಿಡಿಯಾದ 1,600ಕ್ಕೂ ಹೆಚ್ಚು ಉದ್ಯೋಗಿಗಳು

‘ನಮ್ಮ ಬಾಸ್ ಬೇಕು’: ಜೆನ್ಸೆನ್ ಹುವಾಂಗ್ ಪರ ನಿಂತ ಎನ್​ವಿಡಿಯಾದ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಕ್ಯಾಲಿಫೋರ್ನಿಯಾ, ನವೆಂಬರ್ 13: ಅನೈತಿಕ ಸಂಬಂಧದ ವಿವಾದದ ಕಾರಣದಿಂದ ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ (Jensen Huang) ನಿರ್ಗಮಿಸಿದ ಬೆನ್ನಲ್ಲೇ, ಕಂಪನಿಯ 1,600 ಕ್ಕೂ ಹೆಚ್ಚು ನೌಕರರು ಒಗ್ಗೂಡಿ “ಬ್ರಿಂಗ್ ಬ್ಯಾಕ್ ದಿ ಬಾಸ್” (Bring Back The Boss) ಅಭಿಯಾನದ ಮೂಲಕ ಅವರ ಪರ ಬ್ಯಾಟ್ ಬೀಸಿದ್ದಾರೆ.

ನೌಕರರು ಜೆನ್ಸನ್ ಹುವಾಂಗ್ ಅವರ ನಾಯಕತ್ವವನ್ನು ಕೊಂಡಾಡಿದ್ದು, ಕಂಪನಿಯ ಯಶಸ್ಸಿನಲ್ಲಿ ಅವರ ಪಾತ್ರವೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಜೆನ್ಸನ್ ರಾಜೀನಾಮೆ ಕೊಡುವ ಮುನ್ನವೇ ಒಬ್ಬ ಹಿರಿಯ ಎಂಜಿನಿಯರ್ ಉದ್ಯೋಗಿ ಆಂತರಿಕ ಸಂವಹನ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಜೆನ್ಸನ್ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಉದ್ಯೋಗಿಗಳ ಅಭಿಪ್ರಾಯಗಳನ್ನೂ ಕೇಳಿ ಎಂದು ಅವರು ಬರೆದಿದ್ದರು. ಅದಕ್ಕೆ 1,600ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿ ಜೆನ್ಸೆನ್ ಹುವಾಂಗ್​ಗೆ ಬೆಂಬಲ ನೀಡಿದ್ದಾರೆ. ಅವರನ್ನು ಉಳಿಸಿಕೊಳ್ಳುವಂತೆ ಎನ್​ವಿಡಿಯಾದ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ರಾಜೀನಾಮೆ: ಮಧ್ಯಂತರ ಸಿಇಒ ಆಗಿ ಕೊಲೆಟ್ ಕ್ರೆಸ್ ನೇಮಕ

ಜೆನ್ಸೆನ್ ಹುವಾಂಗ್ ಅವರು ಎನ್​ವಿಡಿಯಾದ ಸಂಸ್ಥಾಪಕರು. ಅವರಿದ್ದುದರಿಂದಲೇ ಎನ್​ವಿಡಿಯಾ ಅಸ್ತಿತ್ವ ಕಂಡುಕೊಂಡಿದ್ದು. ಅವರಿಲ್ಲದ ಎನ್​ವಿಡಿಯಾವನ್ನು ಊಹಿಸಲೂ ಆಗುವುದಿಲ್ಲ ಎಂದು ಹಲವರು ವಾದಿಸಿದ್ದಾರೆ.

‘ಮನುಷ್ಯರು ತಪ್ಪು ಮಾಡುವುದು ಸಹಜ. ಜೆನ್ಸೆನ್ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಎರಡನೇ ಅವಕಾಶ ಕೊಡಬೇಕು’ ಎಂದಿದ್ದಾರೆ.

ಒಬ್ಬ ಉದ್ಯೋಗಿಯಂತೂ, ‘ಅಮೆರಿಕದ ಭವಿಷ್ಯಕ್ಕೆ ನೆರವಾದ ಈ ವ್ಯಕ್ತಿಯನ್ನು ಅಮೆರಿಕ ತಿರಸ್ಕರಿಸಿದರೆ ಅವರನ್ನು ಹೊಂದುವ ಯೋಗ್ಯತೆ ಈ ವಿಶ್ವಕ್ಕೆ ಇರುವುದಿಲ್ಲ’ ಎಂದು ಹೇಳಿದ್ದಾರೆ.

ದಿಢೀರ್ ಬೆಳವಣಿಗೆಯಿಂದ ಎನ್‌ವಿಡಿಯಾ ಕಂಪನಿಯ ಆಡಳಿತ ಮಂಡಳಿಯಲ್ಲಿ ಹಾಗೂ ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಗೊಂದಲಗಳ ನಡುವೆ, ಉದ್ಯೋಗಿಗಳು ಈ ರೀತಿ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ತಂತ್ರಜ್ಞಾನ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಎನ್‌ವಿಡಿಯಾ ಹುದ್ದೆ ಉಳಿಸಿಕೊಳ್ಳಲು ಹೋರಾಡುವಂತೆ ಜೆನ್ಸನ್ ಹುವಾಂಗ್‌ಗೆ ಟ್ರಂಪ್ ಕರೆ, ಆದರೂ ಸಿಇಒ ಸ್ಥಾನಕ್ಕೆ ರಾಜೀನಾಮೆ

ಜೆನ್ಸೆನ್ ಹುವಾಂಗ್ ವಿವಾದವೇನು?

ಎನ್​ವಿಡಿಯಾ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರು ಶಂಕಿತ ಚೀನೀ ಗೂಢಚಾರಿಣಿ ಎನ್ನಲಾದ ಮಹಿಳಾ ಉದ್ಯಮಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಪ್ರಮುಖ ಆರೋಪ. ಹಾಗೆಯೇ, ಎನ್​ವಿಡಿಯಾದಲ್ಲಿ ಒಂದು ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿರುವ ಮಹಿಳಾ ಉದ್ಯೋಗಿಯೊಂದಿಗೂ ಅಫೇರ್ ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ನಿನ್ನೆ ಬಂದ ಮತ್ತೊಂದು ವರದಿ ಪ್ರಕಾರ, ಎನ್​ವಿಡಿಯಾದಲ್ಲೇ ಇನ್ನೊಬ್ಬ ಮಹಿಳಾ ಉದ್ಯೋಗಿ ಜೊತೆ ಜೆನ್ಸೆನ್ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language