Hashtagintro

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ

ನವದೆಹಲಿ, ನವೆಂಬರ್ 5: ನವೀಕರಣ ಇಂಧನ ವಲಯದಲ್ಲಿ ಭಾರತವು ವಿಶ್ವದ ಪ್ರಮುಖ ಶಕ್ತಿಯಾಗಿ ಸ್ಥಾಪಿತವಾಗಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ. ರಾಷ್ಟ್ರರಾಜಧಾನಿ ನಗರಿಯ ಭಾರತ್ ಮಂಟಪಂನಲ್ಲಿ ನಡೆದ ‘ಭಾರತ್ ರಿನ್ಯೂವಬಲ್ ಎನರ್ಜಿ ಸಮ್ಮಿಟ್ & ಎಕ್ಸ್‌ಪೋ 2026’ (BRES 2026) ಸಮಾರೋಪ ಸಮಾರಂಭದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭಾರತವು ತನ್ನ ಮೊದಲ 100 GW ನವೀಕರಣ ಇಂಧನ ಸಾಮರ್ಥ್ಯವನ್ನು ಸಾಧಿಸಲು ದಶಕಗಳನ್ನೇ ತೆಗೆದುಕೊಂಡಿತ್ತು. ಆದರೆ ಮುಂದಿನ 100 GW ಅನ್ನು 7 ವರ್ಷಗಳಲ್ಲಿ ಹಾಗೂ ನಂತರದ ಮೂರನೇ 100 GW ಮೈಲಿಗಲ್ಲನ್ನು ಕೇವಲ ಎರಡು ವರ್ಷಗಳಲ್ಲಿ (2024 ರಿಂದ 2026ರ ನಡುವೆ) ಸಾಧಿಸುವ ಮೂಲಕ ಇಂಧನ ವಿಸ್ತರಣೆಯ ವೇಗವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ: 2014ಕ್ಕೆ ಮುಂಚಿನ ವೇಗ ಇದ್ದಿದ್ದರೆ ಪುಣೆಯಂಥ ನಗರಗಳಿಗೆ ಮೆಟ್ರೋ ಬರಲು ದಶಕಗಳೇ ಆಗುತ್ತಿತ್ತು: ಪ್ರಧಾನಿ ಟಾಂಟ್

ನವೀಕರಣ ಇಂಧನ ಸಾಮರ್ಥ್ಯ: 800 GW ನೂತನ ಗುರಿ

ದೇಶವು ತನ್ನ ನವೀಕರಿಸಬಹುದಾದ ಇಂಧನ ತಯಾರಿಕಾ ಸಾಮರ್ಥ್ಯದ ಗುರಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಮುಂಬರುವ 2030-35ರ ವೇಳೆಗೆ ಒಟ್ಟು 800 GW ಶುದ್ಧ ಇಂಧನ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಈ ಹಿಂದೆ ಇದು 500 GW ಆಗಿತ್ತು. ನಿಗದಿತ 500 GW ಮೈಲಿಗಲ್ಲನ್ನು ನಿರೀಕ್ಷಿತ ಅವಧಿಗೂ ಮುಂಚೆಯೇ ತಲುಪುವ ವಿಶ್ವಾಸವನ್ನು ಸಚಿವ ಪ್ರಲ್ಹಾದ್ ಜೋಷಿ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಶೃಂಗಸಭೆಯ ಯಶಸ್ಸು: ನಾಲ್ಕು ದಿನಗಳ ಕಾಲ ನಡೆದ BRES 2026 ಸಮ್ಮೇಳನದಲ್ಲಿ ವಿಶ್ವದಾದ್ಯಂತದ ನೀತಿ ನಿರೂಪಕರು, ಹೂಡಿಕೆದಾರರು ಮತ್ತು ಉದ್ಯಮದ ದಿಗ್ಗಜರು ಭಾಗವಹಿಸಿದ್ದರು. 75,000ಕ್ಕೂ ಹೆಚ್ಚು ಸಂದರ್ಶಕರು, 8 ಪಾಲುದಾರ ದೇಶಗಳು ಮತ್ತು 32 ಅಂತಾರಾಷ್ಟ್ರೀಯ ಸಚಿವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಇದು ಭಾರತದ ಹಸಿರು ಇಂಧನ ಬದ್ಧತೆಗೆ ಜಾಗತಿಕ ಮನ್ನಣೆ ದೊರೆತಿರುವುದನ್ನು ತೋರಿಸುತ್ತದೆ.

BRES 2026 ಎಂಬುದು ಭಾರತದಲ್ಲಿ ಈವರೆಗೆ ನಡೆದ ಅತಿದೊಡ್ಡ ನವೀಕರಣ ಇಂಧನ ಕಾರ್ಯಕ್ರಮವಾಗಿದೆ ಎನ್ನುವ ಮಾಹಿತಿಯನ್ನು ಜೋಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಶಕ್ತಿ ಸಂಗ್ರಹಣೆ, ವಿಸ್ತಾರ್, ಖನಿಜ ಸಂಸ್ಕರಣೆ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ

ಹಸಿರು ಇಂಧನ ವಲಯಕ್ಕೆ 400 ಬಿಲಿಯನ್ ಡಾಲರ್ ಹೂಡಿಕೆ ಹರಿವು: ಜೋಷಿ

‘ಭಾರತದಲ್ಲಿ ಹಸಿರು ಇಂಧನ ಹಾಗೂ ಸಂಬಂಧಿತ ಕಾರ್ಯಗಳಿಗೆ 400 ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಲು ಹೂಡಿಕೆದಾರರು ನಿರ್ಧರಿಸಿದ್ದಾರೆ. ಆದರೆ, ಎಲ್ಲೆಲ್ಲಿ ಹೂಡಿಕೆ ಆಗಬೇಕು ಎಂಬುದನ್ನು ಅವಲೋಕಿಸಲಾಗುತ್ತಿದೆ. ವಿವಿಧ ಕಂಪನಿಗಳು, ಹೂಡಿಕೆದಾರರು, ಫಂಡ್ ಮ್ಯಾನೇಜರ್​ಗಳೊಂದಿಗೆ ನಡೆದ ದುಂಡುಮೇಜಿನ ಸಭೆಯಲ್ಲಿ ದೇಶ ಮತ್ತು ವಿದೇಶಗಳಿಂದ ಹೂಡಿಕೆಗೆ ಆಸಕ್ತಿ ಮೂಡಿ ಬಂದಿದೆ’ ಎಂದು ನಿನ್ನೆ ಬುಧವಾರ ಪ್ರಲ್ಹಾದ್ ಜೋಷಿ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language