Hashtagintro

ನಿಮ್ಮ ಟೂತ್‌ಬ್ರಷ್ ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು? ಹಲ್ಲುಗಳ ಆರೋಗ್ಯಕ್ಕಾಗಿ ಈ ವಿಷಯಗಳನ್ನು ತಿಳಿಯಿರಿ!

ನಿಮ್ಮ ಟೂತ್‌ಬ್ರಷ್ ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಬೇಕು? ಹಲ್ಲುಗಳ ಆರೋಗ್ಯಕ್ಕಾಗಿ ಈ ವಿಷಯಗಳನ್ನು ತಿಳಿಯಿರಿ!

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಎರಡು ಬಾರಿ ಹಲ್ಲುಜ್ಜುವುದು ಎಷ್ಟು ಮುಖ್ಯವೋ, ಬಳಸುವ ಟೂತ್‌ಬ್ರಷ್ ಅನ್ನು ಸರಿಯಾದ ಸಮಯಕ್ಕೆ ಬದಲಾಯಿಸುವುದೂ ಅಷ್ಟೇ ಮುಖ್ಯ. ಹಳೆಯದಾದ ಅಥವಾ ಸವೆದ ಬ್ರಷ್ ಬಳಸಿ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿರುವ ಪ್ಲಾಕ್ ಮತ್ತು ಆಹಾರದ ಕಣಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಾಗದಿರಬಹುದು. ಹಾಗಾದರೆ ಟೂತ್‌ಬ್ರಷ್ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿ 3ರಿಂದ 4 ತಿಂಗಳಿಗೊಮ್ಮೆ ಬದಲಾಯಿಸಿ

ಅಮೆರಿಕನ್ ಡೆಂಟಲ್ ಅಸೋಸಿಯೇಷನ್ (ADA) ಶಿಫಾರಸಿನ ಪ್ರಕಾರ, ಸಾಮಾನ್ಯವಾಗಿ ಪ್ರತಿ ಮೂರುರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್‌ಬ್ರಷ್ ಬದಲಾಯಿಸುವುದು ಉತ್ತಮ. ಈ ನಿಯಮ ಸಾಮಾನ್ಯ ಮತ್ತು ಎಲೆಕ್ಟ್ರಿಕ್ ಟೂತ್‌ಬ್ರಷ್‌ಗಳಿಗೂ ಅನ್ವಯಿಸುತ್ತದೆ. ಎಲೆಕ್ಟ್ರಿಕ್ ಬ್ರಷ್ ಬಳಸುವವರು ಸಂಪೂರ್ಣ ಸಾಧನವನ್ನು ಬದಲಾಯಿಸುವ ಅಗತ್ಯವಿಲ್ಲ. ಅದರ ಬ್ರಷ್ ಹೆಡ್ ಬದಲಾಯಿಸಿದರೆ ಸಾಕು. ಕಾಲ ಕಳೆದಂತೆ ಬ್ರಷ್‌ನಲ್ಲಿರುವ ನಾರುಗಳು ಸವೆದು, ಬಾಗಿಕೊಂಡು ತಮ್ಮ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.

ಟೂತ್‌ಬ್ರಷ್ ಬದಲಾಯಿಸಬೇಕೆಂದು ಸೂಚಿಸುವ ಲಕ್ಷಣಗಳು

  • ಬ್ರಷ್‌ನ ನಾರುಗಳು ಪಕ್ಕಕ್ಕೆ ಬಾಗಿಕೊಂಡಿದ್ದರೆ ಅಥವಾ ಹರಡಿಕೊಂಡಿದ್ದರೆ ಬದಲಾಯಿಸಿ.
  • ಬ್ರಷ್‌ನ ನಾರುಗಳು ಮುರಿಯುತ್ತಿದ್ದರೆ ಅಥವಾ ಉದುರುತ್ತಿದ್ದರೆ ಹೊಸ ಬ್ರಷ್ ಬಳಸಿ.
  • ಹಲ್ಲುಜ್ಜಿದರೂ ಹಲ್ಲುಗಳು ಸರಿಯಾಗಿ ಸ್ವಚ್ಛವಾಗದ ಅನುಭವವಾಗುತ್ತಿದ್ದರೆ ಬ್ರಷ್ ಪರಿಶೀಲಿಸಿ.
  • ಮೂರುರಿಂದ ನಾಲ್ಕು ತಿಂಗಳು ಪೂರ್ಣಗೊಳ್ಳುವ ಮೊದಲೇ ಬ್ರಷ್ ಸವೆದಿದ್ದರೂ ಬದಲಾಯಿಸುವುದು ಉತ್ತಮ.

ಇದನ್ನೂ ಓದಿ: ಚಳಿಗಾಲದಲ್ಲಿ ಸೀತಾಫಲ ತಿನ್ನುತ್ತಿದ್ದೀರಾ? ಹೃದಯದಿಂದ ರೋಗನಿರೋಧಕ ಶಕ್ತಿವರೆಗೆ ಹಲವು ಪ್ರಯೋಜನಗಳು!

ಟೂತ್‌ಬ್ರಷ್ ಬಳಸುವಾಗ ಈ ಜಾಗ್ರತೆ ಇರಲಿ

ಹಲ್ಲುಗಳ ಆರೋಗ್ಯಕ್ಕಾಗಿ ದಿನಕ್ಕೆ ಎರಡು ಬಾರಿ ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಸಿ ಕನಿಷ್ಠ ಎರಡು ನಿಮಿಷ ಹಲ್ಲುಜ್ಜಬೇಕು. ಹಲ್ಲುಜ್ಜಿದ ನಂತರ ಬ್ರಷ್ ಅನ್ನು ಸ್ವಚ್ಛ ನೀರಿನಿಂದ ತೊಳೆದು, ನೇರವಾಗಿ ನಿಲ್ಲಿಸಿ ಗಾಳಿ ಆಡುವ ಸ್ಥಳದಲ್ಲಿ ಒಣಗಲು ಬಿಡಬೇಕು.

ಟೂತ್‌ಬ್ರಷ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಬ್ರಷ್‌ಗಳನ್ನು ಒಂದಕ್ಕೊಂದು ತಾಗದಂತೆ ಪ್ರತ್ಯೇಕವಾಗಿ ಇಡುವುದು ಉತ್ತಮ. ಅನಾರೋಗ್ಯದ ನಂತರ ಪ್ರತಿಯೊಬ್ಬರೂ ಕಡ್ಡಾಯವಾಗಿ ಬ್ರಷ್ ಬದಲಾಯಿಸಬೇಕೆಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಆಧಾರವಿಲ್ಲ. ಆದರೆ ಬ್ರಷ್ ಹಾಳಾಗಿದ್ದರೆ ಬದಲಾಯಿಸಬಹುದು. ಸರಿಯಾದ ಸಮಯಕ್ಕೆ ಟೂತ್‌ಬ್ರಷ್ ಬದಲಾಯಿಸುವುದು ಮತ್ತು ಪ್ರತಿದಿನ ಸರಿಯಾದ ವಿಧಾನದಲ್ಲಿ ಹಲ್ಲುಜ್ಜುವುದು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Health

Read full article on TV9 Kannada Health

Leave a Comment

Your email address will not be published. Required fields are marked *

समाचार की भाषा चुनें / Choose News Language