Hashtagintro

ಪಾಕ್ ಪ್ಲೇಯರ್ಸ್​ಗೆ ಭಾರೀ ಮುಖಭಂಗ: ಟೂರ್ನಿಯಿಂದ 6 ಆಟಗಾರರು ಔಟ್!

ಪಾಕ್ ಪ್ಲೇಯರ್ಸ್​ಗೆ ಭಾರೀ ಮುಖಭಂಗ: ಟೂರ್ನಿಯಿಂದ 6 ಆಟಗಾರರು ಔಟ್!

ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ‘ಬಿಗ್ ಬ್ಯಾಷ್ ಲೀಗ್‘ ಡ್ರಾಫ್ಟ್‌ನಲ್ಲಿ ಪಾಕಿಸ್ತಾನ್ ಕ್ರಿಕೆಟ್‌ಗೆ ಭಾರಿ ಆಘಾತ ಎದುರಾಗಿದೆ. ವಿಶ್ವದರ್ಜೆಯ ಬ್ಯಾಟರ್‌ಗಳು ಹಾಗೂ ಬೌಲರ್‌ಗಳನ್ನು ಹೊಂದಿದ್ದರೂ, ಮುಂಬರುವ ಸೀಸನ್‌ನ ಡ್ರಾಫ್ಟ್‌ನಲ್ಲಿ ಪಾಕಿಸ್ತಾನದ ಆರು ಪ್ರಮುಖ ಆಟಗಾರರನ್ನು ಆಸ್ಟ್ರೇಲಿಯಾದ ಯಾವುದೇ ಫ್ರಾಂಚೈಸಿಗಳು ಖರೀದಿಸದೆ ಕಡೆಗಣಿಸಿವೆ. ಆದರೆ, ಸ್ಟಾರ್ ವೇಗಿ ಹಾರಿಸ್ ರೌಫ್ ಮಾತ್ರ ಅದೃಷ್ಟವಶಾತ್ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಬಿಎಲ್‌ನಿಂದ ಹೊರಬಿದ್ದ ಪಾಕ್ ಆಟಗಾರರು:

ಕಳೆದ ಸೀಸನ್​ನಲ್ಲಿ ಪಾಕಿಸ್ತಾನದ ಒಟ್ಟು 7 ಆಟಗಾರರು ಬಿಗ್ ಬ್ಯಾಷ್ ಲೀಗ್​ನಲ್ಲಿ ಕಾಣಿಸಿಕೊಂಡಿದ್ದರು. ಇವರಲ್ಲಿ 6 ಮಂದಿಯನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ ಎಂಬುದೇ ಅಚ್ಚರಿ.

  • ಬಾಬರ್ ಆಝಂ: ಬಿಗ್ ಬ್ಯಾಷ್ ಲೀಗ್​ನ 15ನೇ ಸೀಸನ್​ನಲ್ಲಿ  ಆರಂಭಿಕನಾಗಿ ಕಾಣಿಸಿಕೊಂಡಿದ್ದ ಬಾಬರ್ ಆಝಂ ಅವರನ್ನು ಈ ಬಾರಿ ಸಿಡ್ನಿ ಸಿಕ್ಸರ್ಸ್ ಕೈ ಬಿಟ್ಟಿದೆ. ಇದಾಗ್ಯೂ ಬೇರೆ ಯಾವುದೇ ಫ್ರಾಂಚೈಸಿ ಬಾಬರ್ ಖರೀದಿಗೆ ಆಸಕ್ತಿ ತೋರಿಲ್ಲ.
  • ಶಾಹೀನ್ ಶಾ ಅಫ್ರಿದಿ: ಎಡಗೈ ವೇಗದ ಬೌಲಿಂಗ್ ಅಸ್ತ್ರ ಶಾಹೀನ್ ಅಫ್ರಿದಿ ಅವರು ಕಳೆದ ಬಾರಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಈ ಬಾರಿ ಯಾವುದೇ ಫ್ರಾಂಚೈಸಿ ಪಾಕ್ ವೇಗಿಯ ಖರೀದಿಗೆ ಮುಂದಾಗಿಲ್ಲ.
  • ಮೊಹಮ್ಮದ್ ರಿಝ್ವಾನ್: ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಮೇಲೆಯೂ ಫ್ರಾಂಚೈಸಿಗಳು ಒಲವು ತೋರಲಿಲ್ಲ. ಕಳೆದ ಸೀಸನ್​ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಕಣಕ್ಕಿಳಿದಿದ್ದ ರಿಝ್ವಾನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು.
  • ಶಾದಬ್ ಖಾನ್: ಬಿಬಿಎಲ್‌ನಲ್ಲಿ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿದ್ದ ಶಾದಬ್ ಖಾನ್ ಕಳೆದ ಬಾರಿ ಹೋಬಾರ್ಟ್ ಹರಿಕೇನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ.
  • ಝಮಾನ್ ಖಾನ್: ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಝಮಾನ್ ಖಾನ್ ಕಳೆದ ಸೀಸನ್‌ನಲ್ಲಿ ಸಿಡ್ನಿ ಥಂಡರ್  ಪರ ಆಡಿದ್ದರು. ಆದರೆ ಈ ಬಾರಿ ಝಮಾನ್ ಖಾನ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಲ್ಲ.
  • ಹಸನ್ ಅಲಿ: ಅನುಭವಿ ವೇಗಿ ಹಸನ್ ಅಲಿ ಕಳೆದ ಬಾರಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದಲ್ಲಿದ್ದರು. ಆದರೆ ಈ ಬಾರಿ ರೆನೆಗೇಡ್ಸ್ ಪಡೆಯಿಂದ ಹೊರಬಿದ್ದಿರುವ ಹಸನ್ ಅಲಿಯ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ.

ಹಾರಿಸ್ ರೌಫ್‌ಗೆ ಒಲಿದ ಅದೃಷ್ಟ!

ಪಾಕಿಸ್ತಾನದ ಇಡೀ ಕ್ರಿಕೆಟ್ ವಲಯದಲ್ಲಿ ಬಿಬಿಎಲ್ ಒಪ್ಪಂದ ಪಡೆದ ಏಕೈಕ ಆಟಗಾರನೆಂದರೆ ಅದು ವೇಗಿ ಹಾರಿಸ್ ರೌಫ್. ಕಳೆದ 5 ಸೀಸನ್‌ಗಳಿಂದ ಮೆಲ್ಬೋರ್ನ್ ಸ್ಟಾರ್ಸ್ ಪರ ಕಣಕ್ಕಿಳಿದಿದ್ದ ರೌಫ್  ಈ ಬಾರಿ ಹೊಸ ತಂಡವನ್ನು ಸೇರಿಕೊಂಡಿದ್ದಾರೆ.

ಹಾರಿಸ್ ರೌಫ್ ಅವರನ್ನು ಈ ಬಾರಿ ಅಡಿಲೇಡ್ ಸ್ಟ್ರೈಕರ್ಸ್ ತಂಡವು ತನ್ನ ಮೂರನೇ ಹಾಗೂ ಅಂತಿಮ ವಿದೇಶಿ ಆಟಗಾರನಾಗಿ ಡ್ರಾಫ್ಟ್‌ನಲ್ಲಿ ಆರಿಸಿಕೊಂಡಿದೆ.

ಇದನ್ನೂ ಓದಿ: ಭಾರತ ವಿರುದ್ಧದ ಸರಣಿಗೂ ಮುನ್ನ ನ್ಯೂಝಿಲೆಂಡ್​ಗೆ ಡಬಲ್ ಶಾಕ್!

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ಬಿಗ್ ಬ್ಯಾಷ್ ಲೀಗ್ ಡ್ರಾಫ್ಟ್ ಪಾಕಿಸ್ತಾನ್ ಕ್ರಿಕೆಟ್‌ಗೆ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಪಿಸಿಬಿ ತನ್ನ ಆಟಗಾರರನ್ನು ವಿಶ್ವದರ್ಜೆಯ ಪ್ಲೇಯರ್ಸ್ ಎಂದು ಎಷ್ಟೇ ಹೆಮ್ಮೆಯಿಂದ ಹೇಳಿಕೊಂಡರೂ, ಆಧುನಿಕ ಟಿ20 ಕ್ರಿಕೆಟ್‌ನಲ್ಲಿ ಕೇವಲ ‘ಬ್ರಾಂಡ್ ಮೌಲ್ಯ’ ಮುಖ್ಯವಲ್ಲ, ಬದಲಿಗೆ ಆಟಗಾರರ ಫಿಟ್​ನೆಸ್ ಮತ್ತು ‘ಸ್ಥಿರತೆ’ ಎಷ್ಟು ಮುಖ್ಯ ಎಂಬುದನ್ನು ಆಸ್ಟ್ರೇಲಿಯಾದ ಫ್ರಾಂಚೈಸಿಗಳು ಈ ಮೂಲಕ ಸಾಬೀತುಪಡಿಸಿವೆ.

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language