
ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ ನಟಿಸಿದ್ದ ‘ಪೆದ್ದಿ’ ಸಿನಿಮಾ ಇದೇ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಹಿಟ್ ಆಯಿತಾದರೂ ಸಿನಿಮಾನಲ್ಲಿ ನಟಿ ಜಾನ್ಹವಿ ಕಪೂರ್ ಪಾತ್ರವನ್ನು ತೋರಿಸಿದ ರೀತಿಯ ಬಗ್ಗೆ ತೀವ್ರ ಚರ್ಚೆ ಉಂಟಾಗಿತ್ತು. ಸಿನಿಮಾನಲ್ಲಿ ಜಾನ್ಹವಿಯನ್ನು ಕೇವಲ ಗ್ಲಾಮರ್ಗಾಗಿಯೇ ಇರಿಸಿಕೊಳ್ಳಲಾಗಿತ್ತು. ಅನವಶ್ಯಕವಾಗಿ ನಟಿಯ ದೇಹಸಿರಿಯನ್ನು ಮಾತ್ರವೇ ತೋರಿಸಲಾಗಿತ್ತು. ಇದು ಸಾಕಷ್ಟು ಟೀಕೆಗೆ ಗುರಿ ಆಗಿತ್ತು. ಕೆಲವರು ಜಾನ್ಹವಿಯ ಮೇಲೆ ತಪ್ಪು ಹೊರಿಸಿದ್ದರು. ‘ಇಂಥಹ ಪಾತ್ರವನ್ನು ಒಪ್ಪಿಕೊಂಡಿದ್ದು ಏಕೆ?’ ಎಂದಿದ್ದರು. ಜಾನ್ಹವಿ ಬಹಿರಂಗವಾಗಿ ಆ ಬಗ್ಗೆ ಮಾತನಾಡಿರಲಿಲ್ಲ, ಆದರೆ ಈಗ ‘ಕಾಫಿ ವಿತ್ ಕರಣ್’ನಲ್ಲಿ ಜಾನ್ಹವಿ ಕೊನೆಗೂ ಈ ಬಗ್ಗೆ ಮಾತನಾಡಿದ್ದಾರೆ.
‘ಕಾಫಿ ವಿತ್ ಕರಣ್’ ಸೀಸನ್ 9ರ ಅತಿಥಿಯಾಗಿ ಜಾನ್ಹವಿ ಕಪೂರ್, ವರುಣ್ ಧವನ್ ಮತ್ತು ಅರ್ಜುನ್ ಕಪೂರ್ ಭಾಗಿ ಆಗಿದ್ದರು. ಈ ವೇಳೆ ಕರಣ್ ಜೋಹರ್, ‘ಪೆದ್ದಿ’ ಸಿನಿಮಾದ ವಿವಾದದ ಬಗ್ಗೆ ಜಾನ್ಹವಿಯನ್ನು ಪ್ರಶ್ನೆ ಮಾಡಿದರು. ಈ ವೇಳೆ ಮಾತನಾಡಿದ ನಟಿ, ‘ಆ ಪ್ರಕರಣದಲ್ಲಿ ನನ್ನ ಪಾಲಿನ ಜವಾಬ್ದಾರಿಯನ್ನು ನಾನು ಒಪ್ಪಿಕೊಳ್ಳುವುದು ಮುಖ್ಯ. ಏಕೆಂದರೆ, ಅಂತಹ ನಕಾರಾತ್ಮಕ ನಿರೂಪಣೆಗಳು ನಮ್ಮ ಸಮಾಜದ ಮೇಲೆ, ವಿಶೇಷವಾಗಿ ನಾನು ಮಹಿಳೆ ಎಂಬ ಕಾರಣಕ್ಕೆ ಎಂತಹ ಕೆಟ್ಟ ಪ್ರಭಾವ ಬೀರಬಲ್ಲವು ಎಂಬುದು ನನ್ನ ಮನಸ್ಸಿಗೆ ಬೇಸರ ಮೂಡಿಸಿದೆ’ ಎಂದು ಅವರು ಹೇಳಿದರು. ‘ಆ ಅವಮಾನವನ್ನು ನಾನು ಸದಾ ನನ್ನೊಂದಿಗೆ ಇರಲಿದೆ, ಅದರಿಂದ ನಾನು ಹೊರಬರಲಾರೆ. ನಾನು ಅದನ್ನು ಅವಾಯ್ಡ್ ಮಾಡಬಹುದಿತ್ತೆ? ನಾನು ಇನ್ನಷ್ಟು ಜಾಗರೂಕಳಾಗಿರಬಹುದಿತ್ತೇ? ನಾನು ಅದನ್ನು ಪ್ರತಿಭಟಿಸಬಹುದಿತ್ತೆ? ಎಂದರೆ ಖಂಡಿತವಾಗಿಯೂ, ಹೌದು, ಆದರೆ ನಾನು ಮೌನವಾಗಿ ಇದ್ದುಬಿಟ್ಟೆ’ ಎಂದು ಜಾನ್ಹವಿ ಹೇಳಿದ್ದಾರೆ.
ವಿವಾದ ಉಂಟಾದಾಗ ಒಂದೆಡೆ ಜಾನ್ಹವಿಯ ಬಗ್ಗೆ ವ್ಯಕ್ತವಾದ ಸಹಾನುಭೂತಿ, ಮತ್ತೊಂದೆಡೆ ಚಿತ್ರೀಕರಣದ ಸಮಯದಲ್ಲಿ ಆಕೆ ಏಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂಬ ಪ್ರಶ್ನೆ ಬಗ್ಗೆ ಜೋಹರ್ ಪ್ರಸ್ತಾಪಿಸಿದಾಗ, ಕಪೂರ್ ತಾನು ಟೀಕಾಕಾರರ ಅಭಿಪ್ರಾಯವನ್ನು ಒಪ್ಪುವುದಾಗಿ ಹೇಳಿದರು. ಅವರ ದೃಷ್ಟಿಯಲ್ಲಿ, ಈ ಚಿತ್ರಣವು ಸಮಸ್ಯಾತ್ಮಕವಾಗಿದ್ದು, ವ್ಯಕ್ತಿಯನ್ನು ಕೇವಲ ಒಂದು ವಸ್ತುವಿನಂತೆ, ಅತ್ಯಂತ ಕೀಳು ಮಟ್ಟದಲ್ಲಿ ಬಿಂಬಿಸುವಂತಹುದಾಗಿತ್ತು, ಅಷ್ಟೇ ಅಲ್ಲ, ಇದು ಲೈಂಗಿಕ ದೌರ್ಜನ್ಯವನ್ನು ಸಹ ಗ್ಲೋರಿಫೈ ಮಾಡಲಾಗಿತ್ತು’ ಎಂದಿದ್ದಾರೆ ನಟಿ.
ಇದನ್ನೂ ಓದಿ:ಶ್ರೀಕೃಷ್ಣನ ಪಾತ್ರದಲ್ಲಿ ರಾಮ್ ಚರಣ್? ‘ಲಾಲೋ’ ತೆಲುಗು ರಿಮೇಕ್ ಬಗ್ಗೆ ಗಾಸಿಪ್
ತಮಗೆ ಇದೆಲ್ಲ ಸಿನಿಮಾನಲ್ಲಿ ಇರಲಿದೆ ಎಂಬುದು ಮೊದಲೇ ತಿಳಿದಿರಲಿಲ್ಲ ಎಂದ ನಟಿ, ದಕ್ಷಿಣ ಭಾರತದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಮೊದಲೇ ಸಂಪೂರ್ಣ ಚಿತ್ರಕತೆಯನ್ನು ನೀಡುವ ಪದ್ಧತಿ ಇಲ್ಲ. ಅಲ್ಲದೆ ಚಿತ್ರೀಕರಣದ ವೇಳೆ ನೀಡಲಾಗುವ ಚಿತ್ರಕತೆಯಲ್ಲೂ ಸಹ ಕ್ಯಾಮೆರಾ ಆಂಗಲ್ ಇನ್ನಿತರೆ ಮಾಹಿತಿಗಳು ಇರುವುದಿಲ್ಲ, ಹಾಗಾಗಿ ನಟಿಯರಿಗೆ ಯಾವ ರೀತಿ ಚಿತ್ರೀಕರಣ ಮಾಡಲಾಗುತ್ತಿದೆ ಎಂಬ ಮಾಹಿತಿ ಇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.
‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಆ ಸಿನಿಮಾನಲ್ಲಿ ಜಾನ್ಹವಿಯವರನ್ನು ಅತಿಯಾದ ಗ್ಲಾಮರಸ್ ಆಗಿ ಚಿತ್ರೀಕರಿಸಲಾಗಿತ್ತು. ಇದು ತೀವ್ರ ಟೀಕೆಗೆ ಗುರಿ ಆಗಿತ್ತು. ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೇಳಿ, ಜಾನ್ಹವಿಯ ಕೆಲವು ದೃಶ್ಯಗಳನ್ನು ಕತ್ತರಿಸಿ ತೆಗೆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
