Hashtagintro

ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ ಸೇರಿ ಕರ್ನಾಟಕದ 7 ಜನರಿಗೆ ಕೇಂದ್ರ ಸರ್ಕಾರದ ಪದಕ

ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ ಸೇರಿ ಕರ್ನಾಟಕದ 7 ಜನರಿಗೆ ಕೇಂದ್ರ ಸರ್ಕಾರದ ಪದಕ

ಬೆಂಗಳೂರು, ಅಕ್ಟೋಬರ್ 31: 2026ನೇ ಸಾಲಿನ ಕೇಂದ್ರ ಗೃಹಮಂತ್ರಿಗಳ ದಕ್ಷತಾ ಪದಕ ಗೌರವಕ್ಕೆ ಪೊಲೀಸ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ಸೇರಿದಂತೆ ಕರ್ನಾಟಕದ ಒಟ್ಟು 7 ಮಂದಿ ಅಧಿಕಾರಿಗಳು ಭಾಜನರಾಗಿದ್ದಾರೆ. ತನಿಖಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಪರಿಗಣಿಸಿ ಈ ಪದಕವನ್ನು ಘೋಷಿಸಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ್ದ ​ಬೆಂಗಳೂರಿನ ಹಲಸೂರು ಗೇಟ್ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಶೋಭಾ ಎನ್ ಅವರಿಗೂ ಕೇಂದ್ರ ಗೃಹ ಇಲಾಖೆಯ ಪದಕ ಲಭಿಸಿದೆ.

ಶೋಭಾ ಎನ್​ ಸೇರಿದಂತೆ, ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಾವುದ್ದೀನ್‌ ರುಕ್ಮುದ್ದೀನ್‌ ಗಡೇಕರ್‌, ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯ ಇನ್ಸ್‌ಪೆಕ್ಟರ್ ಎಂ ಶ್ರೀನಿವಾಸ್ ರಾವ್‌, ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್‌, ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆ ಎಎಸ್‌ಐ ರತ್ನಮ್ಮ ಕೆ. ಹಾಗೂ ಸಿಐಡಿ ಘಟಕದ ಸಿಹೆಚ್‌ಸಿ ಬಾಲಕೃಷ್ಣ ವೈ ಅವರು ತನಿಖಾ ವಿಭಾಗದಲ್ಲಿ ಪದಕ ಪಡೆದಿದ್ದಾರೆ. ಹಾಗೇ, ವಿಧಿವಿಜ್ಞಾನ ಪ್ರಯೋಗಾಲಯ ಕ್ಷೇತ್ರದಲ್ಲಿ ಮೈಸೂರಿನ ಆರ್‌ಎಫ್‌ಎಸ್‌ಎಲ್‌ನ ಉಪನಿರ್ದೇಶಕ ಡಾ. ಚಂದ್ರಶೇಖರ್‌ ಅವರಿಗೆ ಪದಕ ಲಭಿಸಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ಶಾಕ್: 362 KAS ಅಧಿಕಾರಿಗಳ ಆಯ್ಕೆ ಪಟ್ಟಿ ಊರ್ಜಿತಗೊಳಿಸಿದ್ದ ಕಾಯ್ದೆ ರದ್ದು

ಅಪರಾಧ ತನಿಖಾ ಕ್ಷೇತ್ರದಲ್ಲಿ ತೋರಿದ ಅತ್ಯುತ್ತಮ ಸೇವೆ, ದಕ್ಷತೆ ಮತ್ತು ನಿಸ್ವಾರ್ಥ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಇಂದು ರಾಷ್ಟ್ರೀಯ ಏಕತಾ ದಿನ (ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ) ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಪ್ರಶಸ್ತಿಯನ್ನು ಪ್ರಕಟಿಸಿದೆ.

ಅಪರಾಧ ತನಿಖೆಯಲ್ಲಿ ಉನ್ನತ ವೃತ್ತಿಪರ ಗುಣಮಟ್ಟವನ್ನು ಪ್ರೋತ್ಸಾಹಿಸಲು ಮತ್ತು ತನಿಖಾಧಿಕಾರಿಗಳ ಕಠಿಣ ಶ್ರಮ ಹಾಗೂ ನಿಷ್ಠೆಯನ್ನು ಗೌರವಿಸಲು ಕೇಂದ್ರ ಗೃಹ ಸಚಿವಾಲಯವು ಪ್ರತಿ ವರ್ಷ ಈ ‘ದಕ್ಷತಾ ಪದಕ’ವನ್ನು ನೀಡುತ್ತದೆ. 2026ನೇ ಸಾಲಿನಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಪೊಲೀಸ್ ಸಂಸ್ಥೆಗಳ ಒಟ್ಟು 490 ಸಿಬ್ಬಂದಿಯನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಚುರುಕುಗೊಂಡ ಸೌಜನ್ಯ ಕೇಸ್​​ ಮರುತನಿಖೆ: ಎಸ್​ಐಟಿ ಮುಂದೆ ಹಾಜರಾದ ಅಂದಿನ ಪೊಲೀಸ್​​ ಅಧಿಕಾರಿಗಳು

ಕರ್ನಾಟಕ ಪೊಲೀಸ್ ಇಲಾಖೆಯ ಹೆಮ್ಮೆಯ ಅಧಿಕಾರಿಯಾಗಿರುವ ಶೋಭಾ ಎನ್. ಹಾಗೂ ಸಹೋದ್ಯೋಗಿಗಳ ಈ ಸಾಧನೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language