Hashtagintro

ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ

ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ

ಮೈಸೂರು, ಅಕ್ಟೋಬರ್ 24: ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಪ್ರಿಯಕರನೊಂದಿಗೆ ಜೊತೆ ಸೇರಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ. ಮೃತನ ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ ಸುನೀಲ್ ಎಂಬುವವರನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಅಕ್ರಮ ಸಂಬಂಧ, ಕೌಟುಂಬಿಕ ಕಲಹ

ಕೆಸರೆ ನಿವಾಸಿ ಪವಿತ್ರಳನ್ನು ಮದುವೆಯಾಗಿದ್ದ ರಾಮಪ್ರಸಾದ್ ದಂಪತಿಗೆ 11 ವರ್ಷದ ಗಂಡು ಹಾಗೂ 9 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಆದರೆ ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ಪವಿತ್ರಾ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಹೇಗಾದರೂ ಮಾಡಿ ಪತಿಯನ್ನು ಮುಗಿಸಲೇಬೇಕು ಎಂದು ಪವಿತ್ರ ಸಂಚು ರೂಪಿಸಿದ್ದಳು. ಹಾಗಾಗಿ ಯೂಟ್ಯೂಬ್‌ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಕೊಲೆಗೆ ಪ್ಲಾನ್ ಮಾಡಿದ್ದಳು.

ಪತಿಯ ಸಾವಿನ ಬಗ್ಗೆ ಸುಳ್ಳು ಕತೆ ಕಟ್ಟಿದ್ದ ಪವಿತ್ರಾ

ತನ್ನ ಪ್ಲಾನ್​ನಂತೆ ಪವಿತ್ರ, ಅಕ್ಟೋಬರ್ 16ರಂದು ರಾತ್ರಿ ಕುಡಿದು ಮನೆಗೆ ಬಂದ ರಾಮಪ್ರಸಾದ್‌ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಆದರೂ ಆತ ಸಾಯದಿದ್ದಾಗ, ಪ್ರಿಯಕರನ ಸಹಾಯದಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ನಂತರ ಮೃತನ ಸಹೋದರ ಚಂದ್ರಹಾಸಗೆ ಕರೆ ಮಾಡಿದ ಪವಿತ್ರಾ, ಪತಿ ಮೊಸರು ತಿಂದು ಮಲಗಿ ಎದ್ದೇಳುತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಆಸ್ಪತ್ರೆಗೆ ಕೊಂಡೊಯ್ದಾಗ ರಾಮಪ್ರಸಾದ್ ಮೃತಪಟ್ಟಿರುವುದು ತಿಳಿದುಬಂದಿತ್ತು. ಆಕೆಯ ಮಾತನ್ನೇ ನಂಬಿದ್ದ ಸಂಬಂಧಿಕರು ಮೃತನ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.

ಆದರೆ ಅದೇ ರಾತ್ರಿ ಆರೋಪಿ ಸುನೀಲ್ ಮನೆಗೆ ಪವಿತ್ರಾ ಹೋಗಿದ್ದರ ಬಗ್ಗೆ ಸ್ಥಳೀಯರು ಚಂದ್ರಹಾಸಗೆ ಮಾಹಿತಿ ನೀಡಿದ್ದಾರೆ. ಸಂಶಯಗೊಂಡು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಹೊರಬಂದಿದ್ದು, ಪ್ರಿಯಕರ ಸುನಿಲ್ ಹಾಗೂ ಪವಿತ್ರಳನ್ನು ಬಂಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language