
‘ಪ್ರೇಮದ ಊರಲಿ‘ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಭರ್ಜರಿ ಗಳಿಕೆಯ ಓಟವನ್ನು ಮುಂದುವರಿಸಿದೆ. 31 ದಿನಗಳ ಅಂತ್ಯಕ್ಕೆ ಭಾರತದಲ್ಲೇ ಒಟ್ಟು 101.22 ಕೋಟಿ ನೆಟ್ ಕಲೆಕ್ಷನ್ ಹಾಗೂ 118.33 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ವಿದೇಶದ ಕಲೆಕ್ಷನ್ ಸೇರಿದರೆ 121 ಕೋಟಿ ರೂಪಾಯಿ ಕೋಟಿ ರೂಪಾಯಿ ಆಗಿದೆ. ಈ ಮೂಲಕ ತಿಂಗಳ ಒಳಗಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. 31ನೇ ದಿನದಂದು 851 ಶೋಗಳಿಂದ 3.75 ಕೋಟಿ ನೆಟ್ ಕಲೆಕ್ಷನ್ ಆಗಿದ್ದು ವಿಶೇಷ. ಶನಿವಾರದ ಗಳಿಕೆಗೆ ಹೋಲಿಸಿದರೆ ಶೇಕಡಾ 25 ರಷ್ಟು ಏರಿಕೆ ಕಂಡಿದೆ.
ಮೊದಲ 10 ದಿನಗಳಲ್ಲಿ ಚಿತ್ರವು ಮಂದಗತಿಯಲ್ಲಿ ಶುರುವಾಗಿ ನಂತರ ಪ್ರೇಕ್ಷಕರ ಬೆಂಬಲದಿಂದ ತೀವ್ರ ಚೇತರಿಕೆ ಕಂಡುಕೊಂಡಿತು. ಮೊದಲ ದಿನ ಕೇವಲ 13 ಲಕ್ಷದಿಂದ ಆರಂಭವಾದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ, ಮೊದಲ ವಾರದ 7 ದಿನಗಳಲ್ಲಿ ಒಟ್ಟು 5.32 ಕೋಟಿ ರೂಪಾಯಿ ಗಳಿಸಿತು. ನಂತರದ ದಿನಗಳಲ್ಲಿ ಅಂದರೆ 8ನೇ ದಿನದಿಂದ 10ನೇ ದಿನದವರೆಗೆ (2ನೇ ಶುಕ್ರವಾರದಿಂದ ಭಾನುವಾರ) 9.25 ಕೋಟಿ ರೂಪಾಯಿ ಗಳಿಸುವುದರೊಂದಿಗೆ, ಮೊದಲ 10 ದಿನಗಳ ಅಂತ್ಯಕ್ಕೆ ಚಿತ್ರವು ಒಟ್ಟು 4.57 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿತು.
ಅದರ ನಂತರದ 10 ದಿನಗಳಲ್ಲಿ (11ನೇ ದಿನದಿಂದ 20ನೇ ದಿನದವರೆಗೆ) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸಿತು. ದ್ವಿತೀಯ ವಾರದ ಉಳಿದ ದಿನಗಳಲ್ಲಿ ದಬರೋಬ್ಬರಿ 50.70 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ತನ್ನ ಕಲೆಕ್ಷನ್ ಗ್ರಾಫ್ ಅನ್ನು ಹೆಚ್ಚಿಸಿಕೊಂಡಿತು.
ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
ನಂತರದ 10 ದಿನಗಳಲ್ಲಿ (21ನೇ ದಿನದಿಂದ 30ನೇ ದಿನದವರೆಗೆ) ಸಹ ಸಿನಿಮಾ ತನ್ನ ಭರ್ಜರಿ ಗಳಿಕೆಯ ಓಟವನ್ನು ಕಾಯ್ದುಕೊಂಡಿತು. ರಜೆಗಳ ಸಾಲು ಹಾಗೂ ವಾರಾಂತ್ಯದ ಲಾಭ ಪಡೆದ ಚಿತ್ರವು 4ನೇ ವಾರದಲ್ಲಿ 27.00 ಕೋಟಿ ಕಲೆಕ್ಷನ್ ಮಾಡಿತು. ಈ 21ರಿಂದ 30ನೇ ದಿನಗಳ ಅವಧಿಯಲ್ಲಿ ಚಿತ್ರವು ಒಟ್ಟು 32.90 ಕೋಟಿ ನೆಟ್ ಕಲೆಕ್ಷನ್ ಮಾಡಿತು. 31ನೇ ದಿನದ 3.75 ಕೋಟಿ ಗಳಿಕೆಯೊಂದಿಗೆ ‘ಪ್ರೇಮದ ಊರಲಿ’ ಚಿತ್ರವು 100 ಕೋಟಿ ರೂಪಾಯಿ ಕ್ಲಬ್ ಸೇರಿ ಹೊಸ ಇತಿಹಾಸ ಬರೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada Entertainment
