Hashtagintro

ಬಾಕ್ಸ್ ಆಫೀಸ್ ಕ್ಲಾಶ್ ನಡುವೆಯೂ ಶ್ರದ್ಧಾ ಕಪೂರ್ ಚಿತ್ರಕ್ಕೆ ಶುಭ ಹಾರೈಸಿದ ಸಲ್ಮಾನ್ ಖಾನ್

ಬಾಕ್ಸ್ ಆಫೀಸ್ ಕ್ಲಾಶ್ ನಡುವೆಯೂ ಶ್ರದ್ಧಾ ಕಪೂರ್ ಚಿತ್ರಕ್ಕೆ ಶುಭ ಹಾರೈಸಿದ ಸಲ್ಮಾನ್ ಖಾನ್

ಬಾಲಿವುಡ್‌ನ ಭಾಯ್‌ಜಾನ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾ ಡಿಸೆಂಬರ್ 4ರಂದು ತೆರೆಕಾಣಲು ಸಜ್ಜಾಗಿದೆ. ವಿಶೇಷವೆಂದರೆ, ಅದೇ ದಿನ ಶ್ರದ್ಧಾ ಕಪೂರ್ ನಟನೆಯ ‘ಈಠಾ’ ಚಿತ್ರವೂ ಸಹ ಬಿಡುಗಡೆಯಾಗಲಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಎರಡು ದೊಡ್ಡ ಸಿನಿಮಾಗಳ ನಡುವೆ ನೇರ ಹಣಾಹಣಿ ಏರ್ಪಡಲಿದ್ದರೂ, ಸಲ್ಮಾನ್ ಖಾನ್ ಯಾವುದೇ ಸ್ಪರ್ಧೆಯ ಮನೋಭಾವ ತೋರದೆ ದೊಡ್ಡ ಮನಸು ಮಾಡಿದ್ದಾರೆ. ಪ್ರತಿಸ್ಪರ್ಧಿ ಚಿತ್ರದ ತಂಡಕ್ಕೆ ಪ್ರೀತಿಯಿಂದ ಶುಭ ಹಾರೈಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗುರುವಾರ (ನವೆಂಬರ್ 12) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಈಠಾ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಸಲ್ಮಾನ್ ಖಾನ್, ಅದೇ ಪೋಸ್ಟ್‌ನಲ್ಲಿ ಚಿತ್ರದ ಟ್ರೇಲರ್‌ಗೆ ಲಿಂಕ್ ನೀಡಿದ್ದಾರೆ. ಅಲ್ಲದೆ, ‘ಈಠಾ ಚಿತ್ರಕ್ಕೆ ಶುಭ ಹಾರೈಕೆಗಳು!’ ಎಂದು ಬರೆದುಕೊಂಡು ನಟಿ ಶ್ರದ್ಧಾ ಕಪೂರ್ ಹಾಗೂ ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆಯನ್ನು ಟ್ಯಾಗ್ ಮಾಡಿದ್ದಾರೆ.

‘ಈಠಾ’ ಚಿತ್ರವು ಲಕ್ಷ್ಮಣ್ ಉಟೇಕರ್ ನಿರ್ದೇಶನದ ಬಯೋಪಿಕ್ ಡ್ರಾಮಾ ಸಿನಿಮಾವಾಗಿದೆ. ಮಹಾರಾಷ್ಟ್ರದ ಸಾಂಪ್ರದಾಯಿಕ ತಮಾಷಾ ಮತ್ತು ಲಾವಣಿ ನೃತ್ಯ ಪ್ರಕಾರಗಳ ಹಿನ್ನೆಲೆಯನ್ನು ಹೊಂದಿರುವ ಈ ಮ್ಯೂಸಿಕಲ್ ಡ್ರಾಮಾ, ಖ್ಯಾತ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನದಿಂದ ಪ್ರೇರಿತವಾಗಿದೆ. ಆ ಕಾರಣದಿಂದ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.

ಸಮಾಜದ ಕಟ್ಟುಪಾಡುಗಳನ್ನು ಮೀರಿ ನಿಂತು, ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದ ಮಹಿಳೆಯೊಬ್ಬಳ ಸ್ಫೂರ್ತಿದಾಯಕ ಕಥೆಯನ್ನು ‘ಈಠಾ’ ಚಿತ್ರ ಹೊಂದಿದೆ. ದಿನೇಶ್ ವಿಜನ್ ಮತ್ತು ಲಕ್ಷ್ಮಣ್ ಉಟೇಕರ್ ನಿರ್ಮಾಣದ ಈ ಚಿತ್ರಕ್ಕೆ ಅಜಯ್-ಅತುಲ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಮೊಹಮ್ಮದ್ ಜೀಶನ್ ಅಯೂಬ್ ಮತ್ತು ಸಿದ್ಧಾರ್ಥ್ ಜಾಧವ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಮಾತೃಭೂಮಿ’ ಸಿನಿಮಾ ನೋಡುವ ಹಿರಿಯರಿಗೆ ಸಲ್ಮಾನ್ ಖಾನ್ ಕೊಟ್ಟರು ಆಫರ್

ಇನ್ನು, ಮೂಲತಃ ‘ಬ್ಯಾಟಲ್ ಆಫ್ ಗಲ್ವಾನ್’ ಎಂದೇ ಕರೆಯಲ್ಪ ಟ್ಟಿದ್ದ ಸಲ್ಮಾನ್ ಖಾನ್ ಅವರ ‘ಮಾತೃಭೂಮಿ’ ಚಿತ್ರವು, ಭಾರತ ಮತ್ತು ಚೀನಾ ನಡುವಿನ ಬಾಂಧವ್ಯ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬ ವಾದಗಳೊಂದಿಗೆ ಸಾಕಷ್ಟು ಚರ್ಚೆಯಲ್ಲಿತ್ತು. ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಈಗ ಡಿಸೆಂಬರ್ 4ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ. ಅಪೂರ್ವ ಲಖಿಯಾ ನಿರ್ದೇಶನದ, ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಹಿಮೇಶ್ ರೇಷಮಿಯಾ ಸಂಗೀತ ನೀಡಿದ್ದಾರೆ. ಯುದ್ಧದ ಭೀಕರತೆ, ಸೈನಿಕರ ತ್ಯಾಗ ಮತ್ತು ಶಾಂತಿಯ ಸಂದೇಶ ಸಾರುವ ಕಥಾನಕವನ್ನು ಈ ಸಿನಿಮಾ ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language