Hashtagintro

ಬಿಗ್​​ಬಾಸ್: ಇಲ್ಲದ ವಿಷಯ ತೆಗೆದು ಎಲ್ಲರೆದುರು ಕ್ಷಮೆ ಕೇಳಿದ ಗಾನವಿ

ಬಿಗ್​​ಬಾಸ್: ಇಲ್ಲದ ವಿಷಯ ತೆಗೆದು ಎಲ್ಲರೆದುರು ಕ್ಷಮೆ ಕೇಳಿದ ಗಾನವಿ

ಬಿಗ್​​ಬಾಸ್​ನ ವೀಕೆಂಡ್ ಎಪಿಸೋಡಿನಲ್ಲಿ ವಿಶೇಷವಾಗಿ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮನೆಯಲ್ಲಿ ವಾರವೆಲ್ಲ ನಡೆದ ವಿಷಯಗಳನ್ನು ಚರ್ಚೆ ಮಾಡುತ್ತಾರೆ. ಆಟಗಾರರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಭಾನುವಾರದ ಎಪಿಸೋಡಿನಲ್ಲಿ ವಿವಿಧ ಟಾಸ್ಕುಗಳನ್ನು ಆಡಿಸುತ್ತಾರೆ. ತಮಾಷೆ ಮಾಡುತ್ತಾರೆ ಅಂತಿಮವಾಗಿ ಒಬ್ಬರನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಶನಿವಾರದ ಎಪಿಸೋಡು ಹೆಚ್ಚು ಗಂಭೀರವಾಗಿ, ಹೆಚ್ಚು ಮಹತ್ವಪೂರ್ಣವಾಗಿಯೂ ಇರುತ್ತದೆ. ಆದರೆ ಈ ಬಾರಿ ಶನಿವಾರದ ಎಪಿಸೋಡಿನ ಆರಂಭದ ಸಮಯ ವ್ಯರ್ಥ ಚರ್ಚೆಯಲ್ಲಿ ಕಳೆಯಿತು. ಇದಕ್ಕೆ ಕಾರಣವಾಗಿದ್ದು ಗಾನವಿ.

ಗಾನವಿ ಅವರು ಹಳೆಯ ವಿಷಯವೊಂದನ್ನು ಸುದೀಪ್ ಎದುರು ಚರ್ಚೆಗೆ ಎತ್ತಿದರು. ಹಿಂದೊಮ್ಮೆ ಅವರು ಗಗನ್​ ಅವರ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆಗ ಸುದೀಪ್ ಅವರು ಗಾನವಿಗೆ ‘ಲೆಫ್ಟ್-ರೈಟ್’ ತೆಗೆದಿದ್ದರು. ಆ ವಿಷಯವನ್ನು ಮನಸಿನಲ್ಲಿ ಇರಿಸಿಕೊಂಡಿದ್ದ ಗಾನವಿ, ಬೇರೆಯವರು ಮನೆಯವರ ವಿಷಯ ಮಾತನಾಡಿದಾಗ ಅದು ಚರ್ಚೆಗೆ ಬರುವುದಿಲ್ಲ, ಅದಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಸುದೀಪ್ ಅವರನ್ನೇ ಗುರಿ ಮಾಡಿ ಹೇಳಿದ್ದರು.

ಸೌಂದರ್ಯಾ, ಹಲವು ಬಾರಿ ಮನೆಯವರ ವಿಷಯ ತೆಗೆಯುತ್ತಾರೆ. ಖಾಸಗಿ ಜೀವನದ ವಿಷಯ ತೆಗೆಯುತ್ತಾರೆ. ನನಗೆ ಮಾತ್ರವಲ್ಲ ಬೇರೆಯವರ ಕುಟುಂಬಗಳ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಆ ವಿಷಯ ದೊಡ್ಡದಾಗಿ ಚರ್ಚೆಗೆ ಬರುವುದೇ ಇಲ್ಲ’ ಎಂದು ಸುದೀಪ್ ಎದುರು ಹೇಳಿದ್ದು ಮಾತ್ರವೇ ಅಲ್ಲದೆ, ಬೇರೆಯವರೊಟ್ಟಿಗೆ ಸೌಂದರ್ಯಾ ಆಡಿದ್ದಾರೆ ಎನ್ನಲಾದ ಮಾತುಗಳನ್ನು ಸಹ ಅವರೇ ಸುದೀಪ್ ಮುಂದೆ ಹೇಳಿದರು. ಧನುಶ್ ಎದುರು ಸಹ ಹಿಂದೊಮ್ಮೆ ಈ ವಿಷಯವನ್ನು ಗಾನವಿ ಮಾತನಾಡಿದ್ದು, ಅದರ ವಿಡಿಯೋ ಸಹ ಪ್ರಸಾರ ಮಾಡಲಾಯ್ತು.

ಇದನ್ನೂ ಓದಿ:ಬಾಯ್​​ಫ್ರೆಂಡ್ ಬಿಗ್​​ಬಾಸ್ ಗೆಲ್ಲಲೆಂದು ಮೊಣಕಾಲಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ನಟಿ

ಆದರೆ ಸೌಂದರ್ಯಾ, ‘ನಾನು ಮನೆಯವರನ್ನು ಕೆಟ್ಟದಾಗಿ ಬೈದಿಲ್ಲ, ಮನೆಯವರು ಇದನ್ನೇ ಕಲಿಸಿರುವುದಾ ಎಂದು ಪ್ರಶ್ನೆ ಮಾಡಿದ್ದೇನೆ. ನನ್ನ ಬಗ್ಗೆ ಅವರು ಕೆಟ್ಟದಾಗಿ ಮಾತನಾಡಿದಾಗ ಮಾತ್ರವೇ ನಾನು ಅದನ್ನು ಬಳಸಿದ್ದೇನೆ’ ಎಂದರು. ಜೊತೆಗೆ ತಾವು ಬೇರೆ ಬೇರೆ ಸದಸ್ಯರಿಗೆ ಕುಟುಂಬದ ಬಗ್ಗೆ ಏನು ಹೇಳಿದೆ, ಏಕೆ ಹೇಳಿದೆ ಎಂಬುದನ್ನು ಸಹ ಹೇಳಿದರು.

ಆದರೂ ಸಹ ಚರ್ಚೆ ಅಲ್ಲಿಗೆ ಮುಕ್ತಾಯವಾಗಲಿಲ್ಲ. ಕೊನೆಗೆ ಸುದೀಪ್ ಅವರು ಯಶಸ್​​ ಅನ್ನು ಈ ವಿಷಯದ ಬಗ್ಗೆ ಅಭಿಪ್ರಾಯ ಕೇಳಿದರು. ಅದಕ್ಕೆ ಅವರು, ‘ಇದು ನಿಮ್ಮ ಎದುರು ಚರ್ಚೆ ಮಾಡುವ ವಿಷಯವೇ ಅಲ್ಲ’ ಎಂದು ಒಂದು ವಾಕ್ಯದ ಉತ್ತರ ನೀಡಿದರು. ಅದನ್ನು ಸುದೀಪ್, ‘ಇದು ನನ್ನ ಎದುರು ಪ್ರಶ್ನೆ ಮಾಡುವ ವಿಷಯ ಮಾತ್ರವೇ ಅಲ್ಲ, ಕರ್ನಾಟಕದ ಜನರ ಎದುರು ಚರ್ಚಿಸುವ ವಿಷಯ ಅಲ್ಲ. ಸುಮ್ಮನೆ ಅವರ ಸಮಯ, ನನ್ನ ಸಮಯ ಹಾಳು ಮಾಡುತ್ತಿದ್ದೀರಿ. ನೀವು, ಗಗನ್ ಅವರ ಕುಟುಂಬದ ಬಗ್ಗೆ ಆಡಿದ ಮಾತಿಗೂ ಈಗ ಸೌಂದರ್ಯಾ ಆಡಿರುವ ಮಾತಿಗೂ ಹೋಲಿಸಿ ನೋಡಲೇ ಬೇಡಿ. ಎರಡಕ್ಕೂ ಅಜಗಜಾಂತರ ಅಂತರ ಇದೆ’ ಎಂದರು ಸುದೀಪ್. ಕೊನೆಗೆ ಗಾನವಿ ತಾವು ಮಾಡಿದ ತಪ್ಪಿಗೆ ಸುದೀಪ್ ಅವರ ಕ್ಷಮೆ ಕೇಳಿದರು. ಜನರ ಹಾಗೂ ಸ್ಪರ್ಧಿಗಳ ಕ್ಷಮೆಯನ್ನೂ ಸಹ ಅವರು ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language