Hashtagintro

‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು

‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು

ನಟ ತಾಂಡವ್ ರಾಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ನಟಿಸಿರುವ ಹೊಸ ಸಿನಿಮಾ ‘ಬಂಬೂ ಸವಾರಿ’ ಕೆಲಸಗಳು ಭರದಿಂದ ಸಾಗುತ್ತಿವೆ. ಅತ್ತ ಬಿಗ್ ಬಾಸ್ ಮನೆಯೊಳಗೆ ತಾಂಡವ್ ರಾಮ್ ಅವರು ಗಮನ ಸೆಳೆಯುತ್ತಿದ್ದರೆ, ಇತ್ತ ಚಿತ್ರತಂಡದವರು ಪ್ರಚಾರ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಬಂಬೂ ಸವಾರಿ’ ಚಿತ್ರದಿಂದ ‘ಗೋವಿಂದಾ ಗೋವಿಂದಾ..’ ಎಂಬ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ.

ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳು ಗೆಲುವು ಕಂಡಿವೆ. ಅವುಗಳ ಸಾಲಿಗೆ ‘ಬಂಬೂ ಸವಾರಿ’ ಕೂಡ ಸೇರ್ಪಡೆ ಆಗುತ್ತದೆ ಎಂಬ ನಂಬಿಕೆ ಚಿತ್ರತಂಡದವರಿಗೆ ಇದೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಚಾರ ಕಾರ್ಯಗಳಿಗೆ ಚುರುಕು ಮುಟ್ಟಿಸಲಾಗಿದೆ. ಪ್ರಚಾರದ ಮೊದಲ ಹಂತವಾಗಿ ಇತ್ತೀಚೆಗೆ ‘ಗೋವಿಂದಾ ಗೋವಿಂದಾ..’ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.

‘ಮ್ಯೂಸಿಕ್ ಬಜಾರ್’ ಯೂಟ್ಯೂಬ್ ಚಾನೆಲ್‌ ಮೂಲಕ ‘ಗೋವಿಂದಾ.. ಎಂಟ್ರಾನ್ ಸಾಮಿ ಗೋವಿಂದಾ…’ ಹಾಡು ವೀಕ್ಷಣೆಗೆ ಲಭ್ಯವಾಗಿದೆ. ಜನರಿಂದ ಮೆಚ್ಚುಗೆ ಸಿಗುತ್ತಿರುವುದಕ್ಕೆ ಚಿತ್ರತಂಡ ಖುಷಿಯಾಗಿದೆ. ಈ ಹಾಡಿಗೆ ಎ.ಎಂ. ನೀಲ್ ಅವರು ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಜಿ. ನಂದಕುಮಾರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಹಾಡಿನಲ್ಲಿ ತಾಂಡವ್ ರಾಮ್ ಅವರ ಜೊತೆ ದೀಪಕ್, ವರ್ಧನ್, ಗಿಲ್ಲಿ ನಟ ಹಾಗೂ ನಾಗೇಂದ್ರ ಪ್ರಸಾದ್ ಕೂಡ ಅಭಿನಯಿಸಿದ್ದಾರೆ. ‘ಬಂಬೂ ಸವಾರಿ’ ಸಿನಿಮಾದಲ್ಲಿ ಸಾಂದರ್ಭಿಕವಾಗಿ ಮೂಡಿಬರುವ ಈ ಗೀತೆಯಲ್ಲಿ ಲವ್ ಮತ್ತು ಲೈಫ್ ಬಗ್ಗೆ ಫಿಲಾಸಫಿ ಹೇಳಲಾಗಿದೆ. ಗಾಯಕ ಬಸಂತ್ ರಾವ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ: ನಾಮಿನೇಷನ್ ವೇಳೆ ಪ್ರಶಾಂತ್, ತಾಂಡವ್ ರಾಮ್ ಸ್ನೇಹದ ಮುಖವಾಡ ಬಯಲು

‘ಉದಯದೀಪಾ ಮೂವೀಸ್’ ಮೂಲಕ ‘ಬಂಬೂ ಸವಾರಿ’ ಸಿನಿಮಾ ನಿರ್ಮಾಣ ಆಗುತ್ತಿದೆ. ಆರ್ಯ ಎಂ. ಮಹೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಎಸ್. ವೆಂಕಟೇಶ್ ಅವರು ನಿರ್ಮಾಪಕರಾಗಿದ್ದು, ಜಿ. ಮುನಿರಾಜು ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಆದ್ಯಪ್ರಿಯ, ಬಿಂದು ನಾಗರಾಜ್, ಅನುಪ್ರೇಮ ಸೇರಿದಂತೆ ಹಲವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language