Hashtagintro

ಬಿಗ್ ಬಾಸ್ ಮನೆಗೆ ಕಾಲಿಟ್ಟು, ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಮಿಂಚಿದ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಮನೆಗೆ ಕಾಲಿಟ್ಟು, ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಮಿಂಚಿದ ರಕ್ಷಿತಾ ಶೆಟ್ಟಿ

ಸ್ವಯಂವರದ ಥೀಮ್​ನಲ್ಲಿ ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಟಾಸ್ಕ್ ನೀಡಲಾಗಿದೆ. ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿ ಅವರನ್ನು ಒಲಿಸಿಕೊಳ್ಳಲು ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ಪೈಪೋಟಿ ಶುರುವಾಗಿದೆ. ಈ ಟಾಸ್ಕ್​ನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರವನ್ನು ನೀಡಲಾಗಿದೆ. ಆಟದ ರಂಗು ಹೆಚ್ಚಿಸಲು ಮಾಜಿ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಆರಂಭದಲ್ಲೇ ಅವರು ಆ್ಯಕ್ಟೀವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೌಂದರ್ಯಾ ಶೆಟ್ಟಿ ಅವರ ತಂಗಿಯ ಪಾತ್ರವನ್ನು ರಕ್ಷಿತಾ ಶೆಟ್ಟಿ ಅವರಿಗೆ ನೀಡಲಾಗಿದೆ. ಅಕ್ಕನನ್ನು ಮದುವೆ ಆಗಲು ಬಯಸುತ್ತಿರುವ ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ಯಾರು ಹೆಚ್ಚು ಸೂಕ್ತ ಎಂಬುದನ್ನು ನಿರ್ಧರಿಸುವಲ್ಲಿ ರಕ್ಷಿತಾ ಶೆಟ್ಟಿ ಅವರ ಅಭಿಪ್ರಾಯ ಕೂಡ ಮುಖ್ಯವಾಗುತ್ತಿದೆ. ಅಲ್ಲದೇ ಬೇರೆ ಬೇರೆ ಚಟುವಟಿಕೆಗಳಲ್ಲಿ ಕೂಡ ರಕ್ಷಿತಾ ಶೆಟ್ಟಿ ಅವರು ಹೈಲೈಟ್ ಆಗುತ್ತಿದ್ದಾರೆ.

ಬಿಗ್ ಬಾಸ್ ಶೋ ಹೇಗೆ ವರ್ಕ್ ಆಗುತ್ತದೆ ಎಂಬುದು ರಕ್ಷಿತಾ ಶೆಟ್ಟಿ ಅವರಿಗೆ ಚೆನ್ನಾಗಿ ತಿಳಿದಿದೆ. ಕಳೆದ ಸೀಸನ್​ನಲ್ಲಿ ಸ್ಪರ್ಧಿಸಿದ ಅನುಭವ ಅವರಿಗೆ ಇದೆ. ಅಲ್ಲದೇ, ಈ ಬಾರಿ ಅವರು ಅತಿಥಿಯಾಗಿ ಬಂದಿರುವುದರಿಂದ ಅವರಿಗೆ ಹೆಚ್ಚು ಸ್ಕೋಪ್ ಇದೆ. ಯಾವುದೇ ಟೆನ್ಷನ್ ಇಲ್ಲದೇ ಅವರು ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಭರ್ಜರಿಯಾಗಿ ಡ್ಯಾನ್ಸ್ ಮಾಡಿಯೂ ಗಮನ ಸೆಳೆದಿದ್ದಾರೆ.

ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ಯಾರು ಚೆನ್ನಾಗಿ ಇಂಪ್ರೆಸ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವಲ್ಲಿ ಸೌಂದರ್ಯಾ ಶೆಟ್ಟಿ ಅವರು ಗೊಂದಲ ಮಾಡಿಕೊಂಡಾಗಲೆಲ್ಲ ಅವರಿಗೆ ರಕ್ಷಿತಾ ಶೆಟ್ಟಿ ಸಹಾಯ ಮಾಡುತ್ತಿದ್ದಾರೆ. ಅವರು ಬಿಗ್​ ಬಾಸ್ ಮನೆಗೆ ಬಂದಿದ್ದರಿಂದ ವಾತಾವರಣದಲ್ಲಿ ಬದಲಾವಣೆ ಕಾಣಿಸಿದೆ. ತಮಗೆ ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಗಗನ್ ಪಾಲಿಗೆ ಮೈನಸ್ ಆದ ಬಿಗ್ ಬಾಸ್ ಟಾಸ್ಕ್: ಹೆಚ್ಚಿತು ಯಶಸ್ ಮೈಲೇಜ್

ಈ ವಾರದ ಟಾಸ್ಕ್​ನಿಂದಾಗಿ ಬೇರೆ ಸ್ಪರ್ಧಿಗಳಿಗೆ ಕೊಂಚ ಹಿನ್ನೆಡೆ ಆಗಿದೆ ಎನ್ನಬಹುದು. ಯಾಕೆಂದರೆ, ಪ್ರಮುಖ ಪಾತ್ರಗಳನ್ನು ಮಾಡುತ್ತಿರುವ ಸೌಂದರ್ಯಾ ಶೆಟ್ಟಿ, ಯಶಸ್, ಗಗನ್ ಚಿನ್ನಪ್ಪ, ಪ್ರಶಾಂತ್, ರಕ್ಷಿತಾ ಶೆಟ್ಟಿ, ತಾಂಡವ್ ರಾಮ್ ಅವರನ್ನು ಹೊರತುಪಡಿಸಿ ಇನ್ನುಳಿದ ಸ್ಪರ್ಧಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language