Hashtagintro

ಬಿಗ್ ಬಾಸ್: ಸ್ನೇಹಿತ ಎಂಬುದನ್ನೂ ಮರೆತು ತಾಂಡವ್​ಗೆ ಶಿಕ್ಷೆ ನೀಡಿದ ಗಗನ್ ಚಿನ್ನಪ್ಪ

ಬಿಗ್ ಬಾಸ್: ಸ್ನೇಹಿತ ಎಂಬುದನ್ನೂ ಮರೆತು ತಾಂಡವ್​ಗೆ ಶಿಕ್ಷೆ ನೀಡಿದ ಗಗನ್ ಚಿನ್ನಪ್ಪ

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಆರಂಭದಿಂದಲೂ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರು ಆತ್ಮೀಯವಾಗಿದ್ದಾರೆ. ಈ ಶೋಗೆ ಬರುವುದಕ್ಕೂ ಮುನ್ನವೇ ಅವರ ನಡುವೆ ಸ್ನೇಹ ಇತ್ತು. ಅದು ದೊಡ್ಮನೆಯಲ್ಲೂ ಮುಂದುವರಿದಿದೆ. ಆದರೆ ಬಿಗ್ ಬಾಸ್ ಆಟದಲ್ಲಿ ಸ್ನೇಹದ ಮುಲಾಜು ನೋಡಿದರೆ ಹೆಚ್ಚು ದಿನ ಉಳಿದುಕೊಳ್ಳೋಕೆ ಆಗಲ್ಲ. ಈಗಾಗಲೇ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರಿಗೆ ಸ್ನೇಹದಿಂದ ಕೆಲವು ಬಾರಿ ತೊಂದರೆ ಆಗಿದ್ದುಂಟು. ಸಾಧ್ಯವಾದಷ್ಟು ಆ ಬಂಧವನ್ನು ಸಡಿಲ ಮಾಡಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಥೀಮ್​ನಲ್ಲಿ ಟಾಸ್ಕ್ ನೀಡಲಾಗಿದೆ. ಮ್ಯೂಸಿಯಂ ಒಳಗೆ ಕೆಲವು ಅಮೂಲ್ಯವಾದ ವಸ್ತುಗಳನ್ನು ಇಡಲಾಗಿದೆ. ನಾಮಿನೇಟ್ ಆಗಿರುವವರು ಲೂಟಿಕೋರರ ತಂಡದಲ್ಲಿದ್ದು, ವಸ್ತುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕಾವಲುಗಾರರಿಗೆ ನೀಡಲಾಗಿದೆ. ಈ ಆಟದಲ್ಲಿ ಗಗನ್ ಚಿನ್ನಪ್ಪ ಅವರು ಉಸ್ತುವಾರಿ ಆಗಿದ್ದಾರೆ.

ತಾಂಡವ್ ರಾಮ್ ಅವರು ಲೂಟಿಕೋರರ ತಂಡದಲ್ಲಿ ಇದ್ದಾರೆ. ಅವರ ಜೊತೆ ಸೌಂದರ್ಯಾ ಶೆಟ್ಟಿ, ಆಸಿಯಾ, ಲಕ್ಷ್ಮಿ ಗೌಡ, ಕುಮಾರಿ ಹಾಗೂ ಸೋನಿಕಾ ಅವರು ಇದ್ದಾರೆ. ಆಟದ ವೇಳೆ ತಾಂಡವ್ ರಾಮ್ ಅವರು ಒಂದು ನಿಯಮ ಉಲ್ಲಂಘನೆ ಮಾಡಿದರು. ಅವರಿಗೆ ಗಗನ್ ಚಿನ್ನಪ್ಪ ಶಿಕ್ಷೆ ನೀಡಬೇಕಾಯಿತು. ಸ್ನೇಹದ ಸಲುಗೆಯಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಾಂಡವ್ ರಾಮ್ ಪ್ರಯತ್ನಿಸಿದರು. ಆದರೆ ಅವರು ವಿಫಲರಾದರು.

ನಿಯಮ ಉಲ್ಲಂಘನೆ ಮಾಡಿದ ತಾಂಡವ್ ರಾಮ್ ಅವರು 30 ನಿಮಿಷಗಳ ಕಾಲ ಜೈಲಿಗೆ ಹೋಗಬೇಕು ಎಂದು ಗಗನ್ ಚಿನ್ನಪ್ಪ ಅವರು ಶಿಕ್ಷೆ ವಿಧಿಸಿದರು. ಅದರಿಂದ ತಪ್ಪಿಸಿಕೊಳ್ಳಲು ತಾಂಡವ್ ಅವರಿಗೆ ಸಾಧ್ಯವಾಗಲಿಲ್ಲ. ‘ನೀನು ಜೈಲಿಗೆ ಹೋಗಲೇಬೇಕು’ ಎಂದು ಗಗನ್ ಚಿನ್ನಪ್ಪ ಅವರು ಸ್ನೇಹದ ಮುಲಾಜು ಬದಿಗಿಟ್ಟು ಖಡಕ್ ಆಗಿ ಹೇಳಿ ಜೈಲಿಗೆ ಕಳಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮೈಕ್ ಬೆಲೆ ಹೇಳಿದ ಸುದೀಪ್; ಈ ಪ್ರೈಸ್​ನಲ್ಲಿ ಬುಲೆಟ್ ಬೈಕ್ ಬರುತ್ತೆ

ಈ ಆಟದಲ್ಲಿ ಗಾನವಿ, ಯಶಸ್, ಕಿರಣ್, ಪ್ರಶಾಂತ್, ಜಗದೀಶ್, ಧನುಷ್ ಅವರು ಕಾವಲುಗಾರರ ತಂಡದಲ್ಲಿ ಇದ್ದಾರೆ. ಆದರೆ ಪ್ರಶಾಂತ್ ಮತ್ತು ಗಾನವಿ ಅವರು ಲೂಟಿಕೋರರ ತಂಡದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಕೆಲವರಿಗೆ ಮೂಡಿದೆ. ಯಶಸ್ ಅವರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಅದರಿಂದಾಗಿ ಗಾನವಿ ಅವರಿಗೆ ಬೇಸರವಾಗಿ ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language