Hashtagintro

ಬಿಜೆಪಿ ಕಿತ್ತೊಗೆದು ದೇಶಕ್ಕೆ ಅಚ್ಛೇ ದಿನ್ ತರುತ್ತೇವೆ: ಮುಂಬೈನ ದಸರಾ ಸಮಾವೇಶದಲ್ಲಿ ಉದ್ಧವ್ ಠಾಕ್ರೆ ಮಾತು

ಬಿಜೆಪಿ ಕಿತ್ತೊಗೆದು ದೇಶಕ್ಕೆ ಅಚ್ಛೇ ದಿನ್ ತರುತ್ತೇವೆ: ಮುಂಬೈನ ದಸರಾ ಸಮಾವೇಶದಲ್ಲಿ ಉದ್ಧವ್ ಠಾಕ್ರೆ  ಮಾತು

ಮುಂಬೈ, ಅಕ್ಟೋಬರ್ 21: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ದೇಶದಲ್ಲಿ ಆಡಳಿತ ಬದಲಾವಣೆ ತರಲು ಮತ್ತು ನಿಜವಾದ ಅಚ್ಛೇ ದಿನ್ ಮರಳಿ ತರಲು ವಿರೋಧ ಪಕ್ಷಗಳು ಸಿದ್ಧವಾಗಿವೆ ಎಂದು ಶಿವಸೇನೆ(ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ನಡೆದ ಸಾಂಪ್ರದಾಯಿಕ ದಸರಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಉದ್ಯೋಗ ಮತ್ತು ಹಕ್ಕುಗಳಿಗಾಗಿ ಬೀದಿಗೆ ಇಳಿದು ಧ್ವನಿ ಎತ್ತುತ್ತಿರುವ ಯುವ ಸಮುದಾಯವನ್ನು ಸರ್ಕಾರ ಹತ್ತಿಕ್ಕಬಾರದು. ಅವರು ನಕ್ಸಲರಲ್ಲ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕ್ರಾಂತಿಕಾರಿಗಳು. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿದ್ದು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಮೂಲಕ ಯುವ ಹಾಗೂ ಹೊಸ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಠಾಕ್ರೆ ಗಂಭೀರ ಆರೋಪ ಮಾಡಿದರು.

ಹಿಂದುತ್ವದ ವ್ಯಾಖ್ಯಾನ: ಕೇಸರಿ ಶಾಲು ಧರಿಸಿ ಮಹಿಳೆಯರನ್ನು ಕೀಟಲೆ ಮಾಡುವವರ ಹಿಂದುತ್ವವನ್ನು ನಾವು ಒಪ್ಪುವುದಿಲ್ಲ. ಬಿಜೆಪಿ ನಕಲಿ ಹಿಂದುತ್ವವನ್ನು ಪ್ರಚಾರ ಮಾಡುತ್ತಾ ಧರ್ಮಕ್ಕೆ ಅಪಖ್ಯಾತಿ ತರುತ್ತಿದೆ. ನಮ್ಮ ಹಿಂದುತ್ವ ಜನರನ್ನು ಬೆಸೆಯುವಂಥದ್ದು.

ಮತ್ತಷ್ಟು ಓದಿ: ಥಾಣೆಯಲ್ಲಿ ಶಿವಸೇನಾ ಮುಖಂಡನ ಭೀಕರ ಹತ್ಯೆ: ಕಚೇರಿ ಮುಂದೆಯೇ ಗುಂಡಿಕ್ಕಿ ಪ್ರದೀಪ್ ಪೂರ್ಣೇಕರ್ ಕೊಲೆ

ದೆಹಲಿಯ ಕೆಂಪು ಕೋಟೆಯಲ್ಲೂ ಭಗವಾ ಧ್ವಜ: ಮಹಾರಾಷ್ಟ್ರ ವಿಧಾನಸಭೆ ಮಾತ್ರವಲ್ಲದೆ ದೆಹಲಿಯ ಕೆಂಪುಕೋಟೆಯ ಮೇಲೂ ಭಗವಾ (ಕೇಸರಿ) ಧ್ವಜ ಹಾರಿಸುವುದೇ ನಮ್ಮ ಸಂಕಲ್ಪ. ತ್ರಿವರ್ಣ ಧ್ವಜದ ಬಣ್ಣಗಳನ್ನು ಪ್ರತ್ಯೇಕಿಸುವ ಮೂಲಕ ಬಿಜೆಪಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಸೇನೆ ದಸರಾ ರ‍್ಯಾಲಿಯ 60ನೇ ವರ್ಷ: 1966ರಲ್ಲಿ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರು ‘ಮಣ್ಣಿನ ಮಕ್ಕಳು’ (ಮರಾಠಿ ಮನೂಸ್) ಪರಿಕಲ್ಪನೆಯೊಂದಿಗೆ ಇದೇ ಶಿವಾಜಿ ಪಾರ್ಕ್‌ನಲ್ಲಿ ಮೊದಲ ದಸರಾ ರ‍್ಯಾಲಿ ಆರಂಭಿಸಿದ್ದರು. ಈ ಬಾರಿ ಸಮಾವೇಶವು ತನ್ನ 60ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.

ಸಂಜಯ್ ರಾವತ್ ಪ್ರತಿಕ್ರಿಯೆ: ‘ಆಡಳಿತ ಬದಲಾವಣೆ ಪ್ರಜಾಸತ್ತಾತ್ಮಕ ಹಕ್ಕು’
ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ, “ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳನ್ನು ಬದಲಾಯಿಸುವುದು ನಾಗರಿಕರ ಹಕ್ಕು. 2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಬದಲಾಯಿಸಿ ಎನ್‌ಡಿಎ ಅಧಿಕಾರಕ್ಕೆ ಬಂದಂತೆ, ಈಗಲೂ ಕೇಂದ್ರದಲ್ಲಿ ಬದಲಾವಣೆ ಅನಿವಾರ್ಯವಾಗಿದೆ” ಎಂದರು. ಆರ್‌ಎಸ್‌ಎಸ್  ಸರಸಂಘ ಚಾಲಕ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣದಲ್ಲಿನ ‘ಆಡಳಿತ ಬದಲಾವಣೆ’ ಕುರಿತಾದ ಹೇಳಿಕೆಗಳನ್ನು ಉಲ್ಲೇಖಿಸಿ ರಾವತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language