
ಅಜಿತ್ ಅಗರ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ, ಮಾಜಿ ಟೀಂ ಇಂಡಿಯಾ ಆಟಗಾರ ಪ್ರಗ್ಯಾನ್ ಓಜಾ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ. ಇದರ ಜೊತೆಗೆ ಆಯ್ಕೆ ಸಮಿತಿ ಸದಸ್ಯರಾಗಿ ಮತ್ತೊಬ್ಬ ಮಾಜಿ ಆಟಗಾರ ರಮೇಶ್ ಪವಾರ್ ಅವರನ್ನು ನೇಮಕ ಮಾಡಿದೆ. ಹಿರಿಯ ಆಟಗಾರರ ಅನುಭವದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಾಗಿ ಮಾಹಿತಿ ನೀಡಿರುವ ಬಿಸಿಸಿಐ, ಈ ಮೊದಲು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅಜಿತ್ ಅಗರ್ಕರ್ ಅವರ ಸೇವೆ, ಬದ್ಧತೆ ಮತ್ತು ಕೊಡುಗೆಯನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದೆ.
ಪ್ರಗ್ಯಾನ್ ಓಜಾಗೆ ಅಧ್ಯಕ್ಷ ಸ್ಥಾನ
ಬಿಸಿಸಿಐ ನೀಡಿರುವ ಮಾಹಿತಿ ಪ್ರಕಾರ, ಸಮಿತಿಯ ಸದಸ್ಯರ ಪೈಕಿ ಟೆಸ್ಟ್ ಪಂದ್ಯಗಳ ಅನುಭವದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಈ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂದರೆ, ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಸದಸ್ಯರ ಹಿರಿಯತೆಯನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಗ್ಯಾನ್ ಓಜಾ ಭಾರತದ ಮಾಜಿ ಎಡಗೈ ಸ್ಪಿನ್ ಬೌಲರ್ ಆಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅವರು ಇತರ ಸದಸ್ಯರೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
Announcement
Mr Ramesh Powar @imrameshpowar appointed to Men’s Selection Committee.
Based on seniority (most Tests), Mr Pragyan Ojha @pragyanojha will chair the Committee.
BCCI appreciates Mr Ajit Agarkar @imAagarkar for his commitment, conviction and contribution during his tenure as Chairman of the Committee.
Details
https://t.co/z0jcyPWkr0
#TeamIndia
— BCCI (@BCCI) October 19, 2026
ರಮೇಶ್ ಪವಾರ್‌ಗೆ ಸದಸ್ಯ ಸ್ಥಾನ
ಭಾರತೀಯ ಕ್ರಿಕೆಟ್‌ನಲ್ಲಿ ಆಟಗಾರ ಹಾಗೂ ಕೋಚ್ ಆಗಿ ಗುರುತಿಸಿಕೊಂಡಿರುವ ರಮೇಶ್ ಪವಾರ್ ಇದೀಗ ಪುರುಷರ ತಂಡದ ಆಯ್ಕೆ ಸಮಿತಿಯ ಭಾಗವಾಗಲಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಆಯ್ಕೆ ಸಮಿತಿ ಪ್ರಮುಖ ಪಾತ್ರ ವಹಿಸುತ್ತದೆ. ತಂಡದ ಪ್ರದರ್ಶನ, ಆಟಗಾರರ ಫಾರ್ಮ್, ಫಿಟ್ನೆಸ್, ಭವಿಷ್ಯದ ಯೋಜನೆಗಳು ಹಾಗೂ ವಿವಿಧ ಮಾದರಿಯ ಕ್ರಿಕೆಟ್‌ಗೆ ಸೂಕ್ತ ಆಟಗಾರರನ್ನು ಗುರುತಿಸುವುದು ಆಯ್ಕೆ ಸಮಿತಿಯ ಪ್ರಮುಖ ಜವಾಬ್ದಾರಿಗಳಾಗಿವೆ. ಹೀಗಾಗಿ ರಮೇಶ್ ಪವಾರ್ ಅವರ ನೇಮಕದಿಂದ ಆಯ್ಕೆ ಸಮಿತಿಯ ಕಾರ್ಯವೈಖರಿಯಲ್ಲಿ ಯಾವ ರೀತಿಯ ಬದಲಾವಣೆಗಳು ಆಗಲಿವೆ ಎಂಬುದನ್ನು ಕಾದು ನೋಡಬೇಕಿದೆ.
ರಮೇಶ್ ಕೋಚಿಂಗ್ ಅನುಭವ
ರಮೇಶ್ ಪವಾರ್ ಭಾರತ ಪರ ಎರಡು ಟೆಸ್ಟ್ ಪಂದ್ಯಗಳು ಹಾಗೂ 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆಟಗಾರನಾಗಿ ನಿವೃತ್ತರಾದ ಬಳಿಕ ಕೋಚಿಂಗ್ ಕ್ಷೇತ್ರದಲ್ಲೂ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಮುಂಬೈ ಮತ್ತು ಗುಜರಾತ್ ತಂಡಗಳಿಗೆ ಕೋಚ್ ಆಗಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡ ಏಷ್ಯಾಕಪ್ ಪ್ರಶಸ್ತಿ ಗೆದ್ದಿದ್ದು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನೂ ಪಡೆದಿದೆ.
ಇದನ್ನೂ ಓದಿ: ಅಜಿತ್ ಅಗರ್ಕರ್ ಅಧಿಕಾರಾವಧಿ ಅಂತ್ಯ; ಆಯ್ಕೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ
ನೂತನ ಆಯ್ಕೆ ಸಮಿತಿ
- ಪ್ರಗ್ಯಾನ್ ಓಜಾ — ಅಧ್ಯಕ್ಷರು
- ಶಿವ್ ಸುಂದರ್ ದಾಸ್ — ಸದಸ್ಯರು
- ಆರ್.ಪಿ. ಸಿಂಗ್ — ಸದಸ್ಯರು
- ಅಜಯ್ ರಾತ್ರಾ — ಸದಸ್ಯರು
- ರಮೇಶ್ ಪವಾರ್ — ಸದಸ್ಯರು
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports

Announcement
https://t.co/z0jcyPWkr0