Hashtagintro

ಬೆಂಗಳೂರಿಗರಿಗೆ ಗುಡ್ ನ್ಯೂಸ್: ನಾಳೆ ಬೆಳಿಗ್ಗೆ 6 ಗಂಟೆಯಿಂದ ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭ

ಬೆಂಗಳೂರಿಗರಿಗೆ ಗುಡ್ ನ್ಯೂಸ್: ನಾಳೆ ಬೆಳಿಗ್ಗೆ 6 ಗಂಟೆಯಿಂದ ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭ

ಬೆಂಗಳೂರು, ನ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ನವೆಂಬರ್ 13) ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಬಹುನಿರೀಕ್ಷಿತ ನಮ್ಮ ಮೆಟ್ರೋ ‘ಪಿಂಕ್ ಲೈನ್’ ಮಾರ್ಗದಲ್ಲಿ ನಾಳೆಯಿಂದಲೇ (ನವೆಂಬರ್ 14) ಸಾರ್ವಜನಿಕರ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ ನಡುವಿನ ನೂತನ ಮೆಟ್ರೋ ಮಾರ್ಗದ ವಾಣಿಜ್ಯ ಸಂಚಾರದ ಅಧಿಕೃತ ವೇಳಾಪಟ್ಟಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಇಂದು ಮಾಧ್ಯಮ ಪ್ರಕಟಣೆಯ ಮೂಲಕ ಬಿಡುಗಡೆ ಮಾಡಿದೆ.

ರಾಜಧಾನಿಯ ಸಂಚಾರ ದಟ್ಟಣೆ ತಗ್ಗಿಸುವ ಮಹತ್ವಾಕಾಂಕ್ಷೆಯ ಪಿಂಕ್ ಲೈನ್ ಎತ್ತರಿಸಿದ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿ, ಸ್ವತಃ ಟಿಕೆಟ್ ಖರೀದಿಸಿ ಪ್ರಯಾಣ ಬೆಳೆಸಿದ್ದರು. ಇದರ ಬೆನ್ನಲ್ಲೇ ಬಿಎಂಆರ್‌ಸಿಎಲ್ ನಾಳೆ (ಶನಿವಾರ, ನ.14) ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕ ಪ್ರಯಾಣಿಕರಿಗಾಗಿ ವಾಣಿಜ್ಯ ಸೇವೆ ಆರಂಭಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್​​ ಪತ್ರ: ಇಲ್ಲಿದೆ ಮಾಹಿತಿ

ಪಿಂಕ್ ಲೈನ್ ಮೆಟ್ರೋ ಅಧಿಕೃತ ವೇಳಾಪಟ್ಟಿ

ವಾರದ ವಿವಿಧ ದಿನಗಳಿಗೆ ಅನುಗುಣವಾಗಿ ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲಿನ ಸಮಯದ ವಿವರ ಇಲ್ಲಿದೆ.

ದಿನಗಳು (Days) ಕಾಳೇನ ಅಗ್ರಹಾರದಿಂದ ಮೊದಲ ರೈಲು ಎಸ್.ಜಿ. ಪಾಳ್ಯದಿಂದ ಮೊದಲ ರೈಲು ರೈಲುಗಳ ಅಂತರ (Frequency)
ನಾಳೆ (ಶನಿವಾರ, ನ.14 – ಆರಂಭಿಕ ದಿನ) ಬೆಳಿಗ್ಗೆ 6:00 ಬೆಳಿಗ್ಗೆ 6:00 ಪ್ರತಿ 10 ನಿಮಿಷಕ್ಕೊಮ್ಮೆ
ಪ್ರತಿ ಸೋಮವಾರ ಬೆಳಿಗ್ಗೆ 4:55 ಬೆಳಿಗ್ಗೆ 5:00 ಪೀಕ್ ಅವರ್: 8 ನಿಮಿಷ / ನಾನ್-ಪೀಕ್: 10 ನಿಮಿಷ
ಮಂಗಳವಾರದಿಂದ ಶನಿವಾರದವರೆಗೆ ಬೆಳಿಗ್ಗೆ 6:00 ಬೆಳಿಗ್ಗೆ 6:00 ಪೀಕ್ ಅವರ್: 8 ನಿಮಿಷ / ಶನಿವಾರ: 10 ನಿಮಿಷ
ಪ್ರತಿ ಭಾನುವಾರ ಬೆಳಿಗ್ಗೆ 7:00 ಬೆಳಿಗ್ಗೆ 7:00 ಪ್ರತಿ 10 ನಿಮಿಷಕ್ಕೊಮ್ಮೆ

ಪ್ರತಿದಿನ ಕೊನೆಯ ಮೆಟ್ರೋ ರೈಲು ಕಾಳೇನ ಅಗ್ರಹಾರದಿಂದ ರಾತ್ರಿ 10:50ಕ್ಕೆ ಹಾಗೂ ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ರಾತ್ರಿ 10:54ಕ್ಕೆ ಹೊರಡಲಿದೆ. ವಾರದ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರ) ಪೀಕ್ ಅವರ್‌ನಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ಹಾಗೂ ನಾನ್-ಪೀಕ್ ಅವರ್‌ನಲ್ಲಿ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ. ಯಾಣಿಕರ ದಟ್ಟಣೆಗೆ ಅನುಗುಣವಾಗಿ ಶನಿವಾರ ಹಾಗೂ ಭಾನುವಾರದಂದು ಇಡೀ ದಿನ ಪ್ರತಿ 10 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language