
ನವದೆಹಲಿ, ನವೆಂಬರ್ 6: ಭಾರತದ ಕಚ್ಚಾ ಉಕ್ಕು ಉತ್ಪಾದನೆ (Crude Steel Production) ಒಂದು ದಶಕದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಕೆಲವೇ ವರ್ಷಗಳ ಹಿಂದೆ ಜಪಾನ್ ಮತ್ತು ಅಮೆರಿಕಕ್ಕಿಂತ ಕಡಿಮೆ ಉಕ್ಕು ಉತ್ಪಾದನೆ ಮಾಡುತ್ತಿದ್ದ ಭಾರತ ಈಗ ಆ ಎರಡೂ ದೇಶಗಳಲ್ಲಿ ತಯಾರಾಗುವುದಕ್ಕಿಂತ ಹೆಚ್ಚಿನ ಉಕ್ಕನ್ನು ತಯಾರಿಸುತ್ತಿದೆ. 2014ರಲ್ಲಿ ಭಾರತ 87 ಮಿಲಿಯನ್ ಟನ್ ಕಚ್ಚಾ ಉಕ್ಕು ತಯಾರಿಸುತ್ತಿತ್ತು. 2025ರಲ್ಲಿ ಇದು 165 ಮಿಲಿಯನ್ ಟನ್ಗೆ ಏರಿದೆ. 10-11 ವರ್ಷದಲ್ಲಿ ಭಾರತದಲ್ಲಿ ಉಕ್ಕು ಉತ್ಪಾದನೆ ದ್ವಿಗುಣಗೊಂಡಿದೆ ಎಂದು ದತ್ತಾಂಶಗಳು ಹೇಳುತ್ತಿವೆ.
2025ರಲ್ಲಿ ಅಮೆರಿಕದಲ್ಲಿ 82 ಮಿಲಿಯನ್ ಟಾನ್ ಉಕ್ಕು ಉತ್ಪಾದನೆ ಆಗುತ್ತಿತ್ತು. ಜಪಾನ್ನಲ್ಲಿ ಅದು 80.7 ಮಿಲಿಯನ್ ಟನ್ ಉತ್ಪಾದನೆ. 2015ರಿಂದ 2025ರವರೆಗೆ ಜಪಾನ್ನಲ್ಲಿ ಉಕ್ಕು ಉತ್ಪಾದನೆ ಶೇ 27ರಷ್ಟು ಕುಸಿದಿದೆ. ಅಮೆರಿಕದ ಉತ್ಪಾದನೆ ಶೇ. 7ರಷ್ಟು ಇಳಿದಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಉಕ್ಕು ಉತ್ಪಾದನೆ ಶೇ. 89 ರಷ್ಟು ಹೆಚ್ಚಿದೆ.
2025ರಲ್ಲಿ ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಟಾಪ್-10 ದೇಶಗಳು
- ಚೀನಾ: 960.8 ಮಿಲಿಯನ್ ಟನ್
- ಭಾರತ: 164.9 ಮಿಲಿಯನ್ ಟನ್
- ಅಮೆರಿಕ: 81.9 ಮಿಲಿಯನ್ ಟನ್
- ಜಪಾನ್: 80.7 ಮಿಲಿಯನ್ ಟನ್
- ರಷ್ಯಾ: 67.9 ಮಿಲಿಯನ್ ಟನ್
- ಸೌತ್ ಕೊರಿಯಾ: 62.2 ಮಿಲಿಯನ್ ಟನ್
- ಟರ್ಕಿ: 38.1 ಮಿಲಿಯನ್ ಟನ್
- ಜರ್ಮನಿ: 34.1 ಮಿಲಿಯನ್ ಟನ್
- ಬ್ರೆಜಿಲ್: 33.4 ಮಿಲಿಯನ್ ಟನ್
- ಇರಾನ್: 32 ಮಿಲಿಯನ್ ಟನ್
ಇದನ್ನೂ ಓದಿ: ನಿಮ್ಮ ಏರಿಯಾದ ಮೊಬೈಲ್, ಬ್ರಾಡ್ಬ್ಯಾಂಡ್ ನೆಟ್ವರ್ಕ್ ಗುಣಮಟ್ಟ ಪರಿಶೀಲನೆಗೆ ಟ್ರಾಯ್ನಿಂದ ನೆಟ್ವರ್ಕ್ ಅನುಭವ್ ಪ್ಲಾಟ್ಫಾರ್ಮ್
ಭಾರತದ ಉಕ್ಕಿನ ಕಥೆಗೆ ಉದ್ಯಮಿ ಆನಂದ್ ಮಹೀಂದ್ರ ಶ್ಲಾಘನೆ
ಭಾರತದಲ್ಲಿ ಕಳೆದ ದಶಕದಲ್ಲಿ ಉಕ್ಕು ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ಉದ್ಯಮಿ ಆನಂದ್ ಮಹೀಂದ್ರ ಸಂತಸಪಟ್ಟಿದ್ದಾರೆ. ಈ ದತ್ತಾಂಶವನ್ನು ಅವರು ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಹಂಚಿಕೊಂಡಿದ್ದಾರೆ.
ತಾನು ಎಂಬತ್ತರ ದಶಕದಲ್ಲಿ ಉಕ್ಕು ಉದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ಆಗ ಆ ಕ್ಷೇತ್ರದಲ್ಲಿ ಜಪಾನ್ಗೆ ಸರಿಸಾಟಿಯೇ ಇಲ್ಲ ಎನ್ನುವಂತಹ ವಾತಾವರಣ ಇದ್ದದ್ದು, ತಮ್ಮ ತಾತ ಜೆ.ಸಿ. ಮಹೀಂದ್ರ ಅವರು ಎರಡನೇ ಮಹಾಯುದ್ಧದಲ್ಲಿ ಭಾರತದ ಮೊದಲ ಕಬ್ಬಿಣ ಮತ್ತು ಉಕ್ಕು ನಿಯಂತ್ರಕರಾಗಿ ನೇಮಕವಾಗಿದ್ದು, ಇವೆಲ್ಲವನ್ನೂ ಮೆಲುಕು ಹಾಕಿದ್ದಾರೆ.
ಉಕ್ಕಿನ ಕ್ಷೇತ್ರದ ದೇವರೆನಿಸಿದ್ದ ಜಪಾನ್ ಅನ್ನು ಭಾರತ 2018ರಲ್ಲಿ ಮೀರಿ ಹೋಗಿದ್ದು, ಮತ್ತು ಈಗ ಅಮೆರಿಕ, ಜಪಾನ್ ಎರಡನ್ನೂ ಮೀರಿಸಿರುವುದು, ಈ ಬೆಳವಣಿಗೆಯನ್ನು ಆನಂದ್ ಮಹೀಂದ್ರ ಶ್ಲಾಘಿಸಿದ್ದಾರೆ.
ಆನಂದ್ ಮಹೀಂದ್ರ ಅವರ ಒಂದು ಎಕ್ಸ್ ಪೋಸ್ಟ್
Simply incredible!
One advantage of being of my vintage is having witnessed the dramatic transformation of our economy over the decades.
In 2023, I shared my sense of wonder at seeing India’s steel production surge ahead of Japan’s. For me, that alone was an almost unbelievable milestone.
And now, India is producing more steel than the US and Japan COMBINED!
I need a moment to catch my breath…
Somewhere in a parallel universe, my grandfather, J.C. Mahindra, who was appointed India’s first Iron & Steel Controller during the Second World War, must be celebrating.
My gratitude to Tata Steel, SAIL, JSW, & all the other companies and people who have driven this extraordinary transformation of one of our most fundamental industries.
What a journey. And what a foundation for the future!
— anand mahindra (@anandmahindra) November 5, 2026
ಇದನ್ನೂ ಓದಿ: ಕೃಷಿಕರ ಪಾಲಿಗೆ ಡಾರ್ಕ್ ಸ್ಟೋರ್ಗಳಾಗಿರುವ ಅಂಚೆ ಕಚೇರಿಗಳು; ರೈತರಿಗೆ ಹೆಚ್ಚಿನ ಬ್ಯುಸಿನೆಸ್ ಅವಕಾಶ
2026ರಲ್ಲಿ ಭಾರತದಿಂದ ಇನ್ನೂ ಹೆಚ್ಚಿನ ಉಕ್ಕು ಉತ್ಪಾದನೆ
ನಿನ್ನೆ ಗುರುವಾರ (ನ. 5) ಬಿಡುಗಡೆಯಾದ ಹೊಸ ದತ್ತಾಂಶವೊಂದರ ಪ್ರಕಾರ, ಪ್ರಸ್ತುತ ಭಾರತದಲ್ಲಿ ಕಚ್ಚಾ ಉಕ್ಕು ಉತ್ಪಾದನಾ ಸಾಮರ್ಥ್ಯ 223 ಮಿಲಿಯನ್ ಟನ್ ಇದೆ.
ಇನ್ನು, ಮಾರುಕಟ್ಟೆ ಬಳಕೆಯ ಉಕ್ಕು ಅಥವಾ ಫಿನಿಶ್ಡ್ ಸ್ಟೀಲ್ ಅನುಭೋಗದಲ್ಲಿ ಭಾರತ ಬಹಳ ಹೆಚ್ಚಳ ಕಂಡಿದೆ. ಭಾರತದಲ್ಲಿ ಉಕ್ಕು ಉತ್ಪಾದನೆಯ ವೇಗಕ್ಕಿಂತ ಅದರ ಬಳಕೆಯ ವೇಗ ಹೆಚ್ಚಿದೆ. ಇದರಿಂದ ಉಕ್ಕಿನ ಆಮದು ಕೂಡ ಬಹಳ ಹೆಚ್ಚಳ ಆಗುತ್ತಿರುವುದು ದತ್ತಾಂಶದಿಂದ ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
