Hashtagintro

ಭಾರತದ ಬೌಲಿಂಗ್ ದಾಳಿಗೆ ಫಿದಾ ಆದ ಸ್ಯಾಂಟ್ನರ್; ಸೋಲಿನ ಬಳಿಕ ಹೇಳಿದ್ದೇನು?

ಭಾರತದ ಬೌಲಿಂಗ್ ದಾಳಿಗೆ ಫಿದಾ ಆದ ಸ್ಯಾಂಟ್ನರ್; ಸೋಲಿನ ಬಳಿಕ ಹೇಳಿದ್ದೇನು?

ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳು ತೋರಿದ ಶಿಸ್ತುಬದ್ಧ ಪ್ರದರ್ಶನಕ್ಕೆ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿಚ್‌ನ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಂಡ ಭಾರತೀಯ ಬೌಲರ್‌ಗಳು ನಮ್ಮ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಭಾರತದ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ನಾಲ್ವರು ವೇಗದ ಬೌಲರ್‌ಗಳೂ ಉತ್ತಮ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್ ಬೌಲರ್‌ಗಳನ್ನು ಬದಲಾಯಿಸಿದ ರೀತಿ ಮೆಚ್ಚುವಂತಿತ್ತು. ಹೀಗಾಗಿ ನಾವು ಪಂದ್ಯವನ್ನು ಕೈಚೆಲ್ಲಬೇಕಾಯಿತು ಎಂದು ಅವರು ಹೇಳಿದ್ದಾರೆ.

ಭಾರತದ ಬೌಲಿಂಗ್ ಅದ್ಭುತವಾಗಿತ್ತು

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ‘ವೇಗದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಕಾರಣ ಅಕ್ಷರ್ ಪಟೇಲ್ ಅವರನ್ನು ಕೊಂಚ ತಡವಾಗಿ ದಾಳಿಗಿಳಿಸಿದರು. ಮಧ್ಯಮ ಓವರ್‌ಗಳಲ್ಲೂ ಅವರು ನಿರಂತರವಾಗಿ ವಿಕೆಟ್ ಪಡೆಯುತ್ತಿದ್ದರು. ನಮ್ಮ ಬ್ಯಾಟರ್‌ಗಳು ಜೊತೆಯಾಟಗಳನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಿದ್ದರೆ ಪಂದ್ಯ ಗೆಲ್ಲಬಹುದಿತ್ತು. ಆದರೆ, ಕೆಲವು ಹಂತಗಳಲ್ಲಿ ಪರಿಸ್ಥಿತಿ ನಮಗೆ ಕಠಿಣವಾಗಿತ್ತು. ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಸರಿಯಾದ ಸಮಯಕ್ಕೆ ಮತ್ತೆ ಬೌಲಿಂಗ್‌ಗೆ ಕರೆತಂದರು. ಒಟ್ಟಿನಲ್ಲಿ ಭಾರತದ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು’.

ಚೆಂಡು ನಿಧಾನವಾಗಿ ಬರುತ್ತಿತ್ತು

‘ಮೊದಲ ಇನ್ನಿಂಗ್ಸ್ ಮುಗಿದಾಗ ನನಗೆ ತುಂಬಾ ಖುಷಿಯಾಗಿತ್ತು. ಪಿಚ್‌ನಲ್ಲಿ ನಾವು ಅಂದುಕೊಂಡಷ್ಟು ರನ್‌ಗಳು ಇರಲಿಲ್ಲ. ನಮ್ಮ ಬೌಲರ್‌ಗಳು ಪರಿಸ್ಥಿತಿಗೆ ತಕ್ಕಂತೆ ಉತ್ತಮವಾಗಿ ಹೊಂದಿಕೊಂಡರು. ಮೈಕೆಲ್ ಬ್ರೇಸ್‌ವೆಲ್ ಮಧ್ಯಮ ಓವರ್‌ಗಳಲ್ಲಿ ತೋರಿದ ಪ್ರದರ್ಶನ ಅದ್ಭುತವಾಗಿತ್ತು. ನಾವು ನಿರಂತರವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದೆವು. 209 ರನ್‌ಗಳಿಗೆ ಭಾರತವನ್ನು ನಿಯಂತ್ರಿಸಿದ್ದು ಉತ್ತಮ ಸಾಧನೆ ಎಂದು ಭಾವಿಸಿದ್ದೆ. ಆದರೆ, ಪಿಚ್ ಒಂದೇ ರೀತಿಯ ವೇಗದಲ್ಲಿ ಇರಲಿಲ್ಲ. ಕೆಲವೊಮ್ಮೆ ಚೆಂಡು ನಿಧಾನವಾಗಿ ಬರುತ್ತಿತ್ತು. ಭಾರತೀಯ ಬೌಲರ್‌ಗಳು ಫೀಲ್ಡಿಂಗ್ ವ್ಯವಸ್ಥೆಯ ಮೂಲಕವೂ ನಮ್ಮ ಮೇಲೆ ಒತ್ತಡ ಹೇರಿದರು. ಬೌನ್ಸ್ ಅನ್ನು ಕೂಡ ಸರಿಯಾಗಿ ಬಳಸಿಕೊಂಡರು’ ಎಂದು ಸ್ಯಾಂಟ್ನರ್ ಹೇಳಿದರು.

ಬ್ಯಾಟರ್‌ಗಳು ಕೈಕೊಟ್ಟರೂ ಬೌಲರ್‌ಗಳು ಕೈಬಿಡಲಿಲ್ಲ; ಸರಣಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಅಯ್ಯರ್

ಸರಣಿ ಹೆಚ್ಚು ಪೈಪೋಟಿಯಿಂದ ಕೂಡಿತ್ತು

‘ಸರಣಿಯ ಫಲಿತಾಂಶವನ್ನು 3-1 ಎಂದು ನೋಡಿದರೆ, ಪಂದ್ಯಗಳ ನಡುವಿನ ಪೈಪೋಟಿ ಅದಕ್ಕಿಂತ ಹೆಚ್ಚು ಸಮಬಲದಿಂದ ಕೂಡಿತ್ತು. ನಾವು ಕೂಡ ಉತ್ತಮ ಕ್ರಿಕೆಟ್ ಆಡಿದ್ದೇವೆ. ಮಳೆಯ ಅಡಚಣೆ ಎದುರಾಯಿತು. ಕೆಲವು ಪಂದ್ಯಗಳಲ್ಲಿ ಟಾಸ್ ಕೂಡ ನಮ್ಮ ಪರವಾಗಿರಲಿಲ್ಲ. ಇವೆಲ್ಲದರ ನಡುವೆಯೂ ತಂಡ ಹಲವು ಉತ್ತಮ ಪ್ರದರ್ಶನಗಳನ್ನು ನೀಡಿದೆ. ಇಂದಿನ ಪಂದ್ಯದಲ್ಲೂ ಕೊನೆಯವರೆಗೂ ಹೋರಾಡಲು ಸಾಧ್ಯವಾಗಿದ್ದರೆ ಫಲಿತಾಂಶ ಬೇರೆಯೇ ಆಗಿರಬಹುದಿತ್ತು. 50 ಓವರ್‌ಗಳ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಸಾಕಷ್ಟು ಸಮಯವಿರುತ್ತದೆ. ಈ ಸರಣಿಯಲ್ಲಿ ಹೊಸ ಆಟಗಾರರಿಗೆ ಅವಕಾಶ ಸಿಕ್ಕಿದ್ದು ಉತ್ತಮ ಅನುಭವ ನೀಡಿದೆ. ಕೆಲ ಆಟಗಾರರು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ’ ಎಂದು ಸ್ಯಾಂಟ್ನರ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language