Hashtagintro

ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್​: ಇಲ್ಲಿದೆ ವೇಳಾಪಟ್ಟಿ

ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್​: ಇಲ್ಲಿದೆ ವೇಳಾಪಟ್ಟಿ

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂಬರುವ ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುವ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಪ್ರತಿಷ್ಠಿತ ಏಕದಿನ ಟೂರ್ನಿಯು 2026ರ ನವೆಂಬರ್ 19 ರಿಂದ ನವೆಂಬರ್ 29 ರವರೆಗೆ ಖತಾರ್‌ನ ದೋಹಾದಲ್ಲಿ ಜರುಗಲಿದೆ. ಈ ಮಹತ್ವದ ಟೂರ್ನಿಯ ಸಂಪೂರ್ಣ ವಿವರಗಳು, ಭಾಗವಹಿಸುವ ತಂಡಗಳು ಮತ್ತು ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ತಂಡಗಳ ಗ್ರೂಪ್:

ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಅವುಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ:

  • ಗ್ರೂಪ್ ಎ: ಶ್ರೀಲಂಕಾ ‘ಎ’, ಬಾಂಗ್ಲಾದೇಶ್ ‘ಎ’, ಅಫ್ಘಾನಿಸ್ತಾನ್ ‘ಎ’ ಮತ್ತು ಹಾಂಗ್ ಕಾಂಗ್.
  • ಗ್ರೂಪ್ ಬಿ: ಭಾರತ ‘ಎ’, ಪಾಕಿಸ್ತಾನ್ ‘ಎ’, ನೇಪಾಳ ಮತ್ತು ಯುಎಇ.

ಪಂದ್ಯ ನಡೆಯುವ ಕ್ರೀಡಾಂಗಣಗಳು:

ದೋಹಾದ ಎರಡು ಪ್ರಮುಖ ಕ್ರೀಡಾಂಗಣಗಳಲ್ಲಿ ಈ ಎಲ್ಲ 15 ಪಂದ್ಯಗಳು ನಡೆಯಲಿವೆ:

  • ವೆಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ (WEICS).
  •  ಯೂನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (UDST) ಕ್ರಿಕೆಟ್ ಗ್ರೌಂಡ್.

ಇಂಡೋ-ಪಾಕ್ ಕದನ:

ಕ್ರಿಕೆಟ್ ಜಗತ್ತಿನ ಹೈ-ವೋಲ್ಟೇಜ್ ಪಂದ್ಯವಾದ ಭಾರತ ‘ಎ’ ಮತ್ತು ಪಾಕಿಸ್ತಾನ್ ‘ಎ’ ನಡುವಿನ ಮುಖಾಮುಖಿ ನವೆಂಬರ್ 22 ರಂದು ವೆಸ್ಟ್ ಎಂಡ್ ಪಾರ್ಕ್ ಸ್ಟೇಡಿಯಂನಲ್ಲಿ  ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯವು ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ.

ರೈಸಿಂಗ್ ಸ್ಟಾರ್ಸ್​ ಏಷ್ಯಾಕಪ್ 2026 ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸಮಯ ಸ್ಥಳ
ನವೆಂಬರ್ 19, ಗುರುವಾರ ಬಾಂಗ್ಲಾದೇಶ್ ಎ vs ಹಾಂಗ್ ಕಾಂಗ್ ಬೆಳಿಗ್ಗೆ 9:00 UDST
ನವೆಂಬರ್ 19, ಗುರುವಾರ ಶ್ರೀಲಂಕಾ ಎ vs ಅಫ್ಘಾನಿಸ್ತಾನ್ ಎ ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 20, ಶುಕ್ರವಾರ ಪಾಕಿಸ್ತಾನ್ ಎ vs ಯುಎಇ ಬೆಳಿಗ್ಗೆ 9:00 UDST
ನವೆಂಬರ್ 20, ಶುಕ್ರವಾರ ಭಾರತ ಎ vs ನೇಪಾಳ ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 21, ಶನಿವಾರ ಶ್ರೀಲಂಕಾ ಎ vs ಹಾಂಗ್ ಕಾಂಗ್ ಬೆಳಿಗ್ಗೆ 9:00 UDST
ನವೆಂಬರ್ 21, ಶನಿವಾರ ಬಾಂಗ್ಲಾದೇಶ್ ಎ vs ಅಫ್ಘಾನಿಸ್ತಾನ್ ಎ ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 22, ಭಾನುವಾರ ಯುಎಇ vs ನೇಪಾಳ ಬೆಳಿಗ್ಗೆ 9:00 UDST
ನವೆಂಬರ್ 22, ಭಾನುವಾರ ಭಾರತ ಎ vs ಪಾಕಿಸ್ತಾನ್ ಎ ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 23, ಸೋಮವಾರ ಅಫ್ಘಾನಿಸ್ತಾನ್ ಎ vs ಹಾಂಗ್ ಕಾಂಗ್ ಬೆಳಿಗ್ಗೆ 9:00 UDST
ನವೆಂಬರ್ 23, ಸೋಮವಾರ ಶ್ರೀಲಂಕಾ ಎ vs ಬಾಂಗ್ಲಾದೇಶ್ ಎ ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 24, ಮಂಗಳವಾರ ಭಾರತ ಎ vs ಯುಎಇ ಬೆಳಿಗ್ಗೆ 9:00 UDST
ನವೆಂಬರ್ 24, ಮಂಗಳವಾರ ಪಾಕಿಸ್ತಾನ್ ಎ vs ನೇಪಾಳ ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 26, ಗುರುವಾರ ಸೆಮಿಫೈನಲ್ 1 (A1 vs B2) ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 27, ಶುಕ್ರವಾರ ಸೆಮಿಫೈನಲ್ 2 (B1 vs A2) ಮಧ್ಯಾಹ್ನ 1:00 ಕ್ಕೆ WEICS
ನವೆಂಬರ್ 29, ಭಾನುವಾರ ಫೈನಲ್ ಮಧ್ಯಾಹ್ನ 1:00 ಕ್ಕೆ WEICS

ಇದನ್ನೂ ಓದಿ: ಇದು ವಿಂಟೇಜ್ ಕಾರ್… ಐಪಿಎಲ್ ಭವಿಷ್ಯದ ಬಗ್ಗೆ ಮೌನ ಮುರಿದ ಧೋನಿ!

ಈ ಬಾರಿಯ ರೈಸಿಂಗ್ ಸ್ಟಾರ್ಸ್​ ಏಷ್ಯಾ ಕಪ್ ಟೂರ್ನಿಯು ಯುವ ಹಾಗೂ ಅನುಭವಿ ಆಟಗಾರರ ನಡುವಿನ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಟೆಸ್ಟ್ ಆಡುವ ರಾಷ್ಟ್ರಗಳ ಉದಯೋನ್ಮುಖ ‘ಎ’ ತಂಡಗಳಿಗೆ, ಯುಎಇ ಮತ್ತು ಹಾಂಗ್ ಕಾಂಗ್‌ನಂತಹ ಪ್ರಮುಖ ಅಂತರರಾಷ್ಟ್ರೀಯ ತಂಡಗಳು ಎಷ್ಟರಮಟ್ಟಿಗೆ ಸವಾಲಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language