ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್ಚರ್ಚ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಅರ್ಷದೀಪ್ ಸಿಂಗ್ ಇಬ್ಬರು ಕಿವೀಸ್ ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಅವರ ನಾಲ್ಕು ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ(PC-PTI).
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ 33 ರನ್ ನೀಡಿ ಟಿಮ್ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಪಡೆದರು. ಈ ಎರಡು ವಿಕೆಟ್ಗಳೊಂದಿಗೆ ಅರ್ಷದೀಪ್ ಸಿಂಗ್, ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ(PC-PTI).
ಇದಕ್ಕೂ ಮೊದಲು ಈ ದಾಖಲೆ ಭುವನೇಶ್ವರ್ ಕುಮಾರ್ ಅವರ ಹೆಸರಿನಲ್ಲಿತ್ತು. ಅವರು 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಒಟ್ಟು 37 ವಿಕೆಟ್ ಪಡೆದಿದ್ದರು. ಇದೀಗ ಅರ್ಷದೀಪ್ ಸಿಂಗ್ 2026ರಲ್ಲಿ 38 ವಿಕೆಟ್ ಪಡೆಯುವ ಮೂಲಕ ಭುವನೇಶ್ವರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೆ, ಅರ್ಷದೀಪ್ ಸಿಂಗ್ 2024ರಲ್ಲೂ 36 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ(PC-PTI).
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪೂರ್ಣ ಸದಸ್ಯತ್ವ ಹೊಂದಿರುವ ತಂಡಗಳ ಪರ ಒಂದೇ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಐರ್ಲೆಂಡ್ನ ಜೋಶುವಾ ಲಿಟಲ್ ಹೆಸರಿನಲ್ಲಿದೆ. ಅವರು 2022ರಲ್ಲಿ ಒಟ್ಟು 39 ವಿಕೆಟ್ಗಳನ್ನು ಕಬಳಿಸಿದ್ದರು(PC-ICC).
ಇದೀಗ ಅರ್ಷದೀಪ್ ಸಿಂಗ್ 2026ರಲ್ಲಿ 38 ವಿಕೆಟ್ ಪಡೆದು ಈ ಪಟ್ಟಿಯಲ್ಲಿ ಜೋಶುವಾ ಲಿಟಲ್ಗೆ ಸಮೀಪದಲ್ಲಿದ್ದಾರೆ. ಅರ್ಷದೀಪ್ ಇನ್ನೆರಡು ವಿಕೆಟ್ಗಳನ್ನು ಪಡೆದರೆ ಲಿಟಲ್ ದಾಖಲೆಯನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಲಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಅರ್ಷದೀಪ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ(PC-PTI).
Source: TV9 Kannada Sports





