Hashtagintro

‘ಭೋಗಿ’ ಸಿನಿಮಾ ಪ್ರಚಾರಕ್ಕೆ ಅನುಪಮಾ ಪರಮೇಶ್ವರನ್ ಗೈರು; ಚಿತ್ರತಂಡದ ಜೊತೆ ಮನಸ್ತಾಪ ?

‘ಭೋಗಿ’ ಸಿನಿಮಾ ಪ್ರಚಾರಕ್ಕೆ ಅನುಪಮಾ ಪರಮೇಶ್ವರನ್ ಗೈರು; ಚಿತ್ರತಂಡದ ಜೊತೆ ಮನಸ್ತಾಪ ?

ಟಾಲಿವುಡ್ ನಟ ಶರ್ವಾನಂದ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಭೋಗಿ’ ಇಂದು (ನವೆಂಬರ್ 27) ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಸಂಪತ್ ನಂದಿ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಮತ್ತು ಡಿಂಪಲ್ ಹಯಾತಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಹಾಗೂ ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಪ್ರಚಾರ ಕಾರ್ಯಗಳಿಗೆ ಅನುಪಮಾ ಗೈರಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಚಿತ್ರದ ಬಿಡುಗಡೆಗೂ ಮುನ್ನ ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಇವೆಂಟ್, ಮ್ಯೂಸಿಕಲ್ ನೈಟ್ ಮತ್ತು ಸರಣಿ ಸಂದರ್ಶನಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಯಕ ಶರ್ವಾನಂದ್ ಮತ್ತು ಡಿಂಪಲ್ ಹಯಾತಿ ಮಾತ್ರ ಭಾಗವಹಿಸಿದ್ದರು. ಎಲ್ಲಿಯೂ ಅನುಪಮಾ ಪರಮೇಶ್ವರನ್ ಕಾಣಿಸಿಕೊಂಡಿರಲಿಲ್ಲ. ಚಿತ್ರತಂಡದೊಂದಿಗೆ ಅನುಪಮಾ ಅವರಿಗೆ ಭಿನ್ನಾಭಿಪ್ರಾಯ ಮೂಡಿದೆ. ಅದಕ್ಕಾಗಿಯೇ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.

ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಅನುಪಮಾ ಪರಮೇಶ್ವರನ್ ತೆರೆ ಎಳೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಾವು ಪ್ರಚಾರಕ್ಕೆ ಬರಲು ಸಾಧ್ಯವಾಗದಿರುವುದಕ್ಕೆ ನಿಖರ ಕಾರಣ ನೀಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಪದೇ ಪದೇ ಬದಲಾಗಿದ್ದೇ ಈ ಗೊಂದಲಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಭೋಗಿ ಬಿಡುಗಡೆಯಾಗುವ ಈ ವಿಶೇಷ ಸಂದರ್ಭದಲ್ಲಿ ನಾನು ತಂಡದೊಂದಿಗೆ ಇರಬೇಕೆಂದು ಬಯಸಿದ್ದೆ. ಆದರೆ ಚಿತ್ರವನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಬಿಡುಗಡೆ ದಿನಾಂಕವನ್ನು ಹಲವು ಬಾರಿ ಬದಲಾಯಿಸಲಾಯಿತು. ಇದರಿಂದ ನನ್ನ ಡೇಟ್ಸ್ ಹೊಂದಾಣಿಕೆ ಮಾಡಲು ಸಾಧ್ಯವಾಗಲಿಲ್ಲ. ಈ ಮೊದಲೇ ಒಪ್ಪಿಕೊಂಡಿದ್ದ ಬೇರೆ ಸಿನಿಮಾ ಶೂಟಿಂಗ್ ಕಾರಣದಿಂದ ನಾನು ಊಟಿಯಲ್ಲಿ ಉಳಿಯಬೇಕಾಯಿತು’ ಎಂದು ಅನುಪಮಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್ ಮಾಡಿದ ಟೀಕೆಗಳಿಗೆ ಧ್ರುವ್ ವಿಕ್ರಮ್ ತಿರುಗೇಟು

‘ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲ ನೀಡಿದ ‘ಭೋಗಿ’ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂಭ್ರಮದ ಸಮಯದಲ್ಲಿ ನಿಮ್ಮೊಂದಿಗೆ ಇಲ್ಲದಿರುವುದಕ್ಕೆ ನನಗೆ ಬೇಸರವಿದೆ. ನನ್ನ ಸಂಪೂರ್ಣ ಹೃದಯ ಚಿತ್ರತಂಡದೊಂದಿಗಿದೆ. ನೀವೆಲ್ಲರೂ ಚಿತ್ರಮಂದಿರಗಳಲ್ಲಿ ‘ಭೋಗಿ’ ನೋಡುವುದನ್ನು ಕಣ್ತುಂಬಿಕೊಳ್ಳಲು ಕಾತುರಳಾಗಿದ್ದೇನೆ’ ಎಂದು ಅವರು ತಿಳಿಸಿದ್ದಾರೆ. ಕೆ.ಕೆ. ರಾಧಾಮೋಹನ್ ನಿರ್ಮಾಣದ ಹಾಗೂ ಭೀಮ್ಸ್ ಸಿಸೆರೋಲಿಯೊ ಸಂಗೀತವಿರುವ ಈ ಚಿತ್ರದ ಮೇಲಿನ ಎಲ್ಲಾ ವದಂತಿಗಳಿಗೆ ಅನುಪಮಾ ಪೋಸ್ಟ್ ಪೂರ್ಣವಿರಾಮ ಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language