Hashtagintro

ಮಂಗಳೂರು ನೈಟ್ ಲೈಫ್‌ಗೆ ಕೊನೆಗೂ ಗ್ರೀನ್ ಸಿಗ್ನಲ್: ರಾತ್ರಿ ವ್ಯಾಪಾರ-ವಹಿವಾಟಿಗೆ ಮುಕ್ತ ಅವಕಾಶ!

ಮಂಗಳೂರು ನೈಟ್ ಲೈಫ್‌ಗೆ ಕೊನೆಗೂ ಗ್ರೀನ್ ಸಿಗ್ನಲ್: ರಾತ್ರಿ ವ್ಯಾಪಾರ-ವಹಿವಾಟಿಗೆ ಮುಕ್ತ ಅವಕಾಶ!

ದಕ್ಷಿಣ ಕನ್ನಡ (ನವೆಂಬರ್ 23): ಮಂಗಳೂರಿನ ‘ನೈಟ್ ಲೈಫ್’ಗೆ ಕೊನೆಗೂ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈವರೆಗೆ ರಾತ್ರಿ 10 ಗಂಟೆಯಾಗುತ್ತಿದ್ದಂತೆ ಬಹುತೇಕ ಸ್ತಬ್ಧವಾಗುತ್ತಿದ್ದ ಮಂಗಳೂರು ನಗರದಲ್ಲಿ, ಇನ್ಮುಂದೆ ರಾತ್ರಿ 11.45ರವರೆಗೆ ವ್ಯಾಪಾರ-ವಹಿವಾಟು ನಡೆಸಲು ಮುಕ್ತ ಅವಕಾಶ ನೀಡಿಲಾಗಿದ್ದು, ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ವ್ಯಾಪಾರ ವಹಿವಾಟು ನಡೆಸುವಂತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಮಂಗಳೂರಿನ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮನೆಮಾಡಿದ್ದು, ಕರಾವಳಿಯ ರಾತ್ರಿ ಆರ್ಥಿಕತೆಗೆ ಹೊಸ ಚೈತನ್ಯ ಸಿಕ್ಕಂತಾಗಿದೆ.

ಸಿಎಂ ಹೇಳಿಕೆ ಬೆನ್ನಲ್ಲೇ ಮಹತ್ವದ ನಿರ್ಧಾರ

ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಮಂಗಳೂರು ರಾತ್ರಿ ಎಂಟು ಗಂಟೆಯ ಬಳಿಕ ಡೆಡ್ ಸಿಟಿಯಂತಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದರು. ಕರಾವಳಿಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಮಾತು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಬಿಎನ್‌ಎಸ್‌ಎಸ್ (BNSS) ಮತ್ತು ಕರ್ನಾಟಕ ಪೊಲೀಸ್ (KP) ಕಾಯ್ದೆಯಡಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ವ್ಯಾಪಾರದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್​​​ ಟ್ವಿಸ್ಟ್​: ಸಂಬಂಧಿಕರ ಮನೆಯಲ್ಲಿ ಯುವತಿ ಪತ್ತೆ; ಸ್ಫೋಟಕ ಹೇಳಿಕೆ ನೀಡಿದ ಯುವತಿ

ರಾತ್ರಿ 11: 45ರವರೆಗೆ ಮುಕ್ತ ಅವಕಾಶ

ಮಂಗಳೂರು ನಗರದ ಎಲ್ಲಾ ವ್ಯಾಪಾರಿ ಸಂಸ್ಥೆಗಳು, ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್, ಟೀ ಸ್ಟಾಲ್ ಹಾಗೂ ಪಾನ್ ಅಂಗಡಿಗಳು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ-ವಹಿವಾಟುಗಳಿಗೆ ರಾತ್ರಿ 11.45ರವರೆಗೆ ಮಾತ್ರ ಮುಕ್ತ ಅವಕಾಶ ನೀಡಲಾಗಿದೆ.   ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಆಸ್ಪತ್ರೆ, ‌ಮೆಡಿಕಲ್‌ ಶಾಪ್‌, ತುರ್ತು ಸೇವೆ ಹೊರತುಪಡಿಸಿ ಎಲ್ಲವೂ ಬಂದ್. ಈ ಅವಧಿ ವಿಸ್ತರಣೆ ಆದೇಶವು ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗಳಿಗೆ ಅನ್ವಯವಾಗುವುದಿಲ್ಲ (ಅವುಗಳಿಗೆ ಅಬಕಾರಿ ಇಲಾಖೆಯ ನಿಯಮಗಳೇ ಅನ್ವಯವಾಗಲಿವೆ).

ರಾತ್ರಿ 11.45ರ ಬಳಿಕ ಸಂಪೂರ್ಣ ಬಂದ್

ಈವರೆಗೆ ರಾತ್ರಿ 10 ಗಂಟೆಯಾಗುತ್ತಿದ್ದಂತೆ ಬಹುತೇಕ ಸ್ತಬ್ಧವಾಗುತ್ತಿದ್ದ ಮಂಗಳೂರು ನಗರದಲ್ಲಿ, ಇನ್ಮುಂದೆ ರಾತ್ರಿ 11.45ರವರೆಗೆ ವ್ಯಾಪಾರ-ವಹಿವಾಟು ನಡೆಸಲು ಮುಕ್ತ ಅವಕಾಶ ನೀಡಲಾಗಿದೆ. ಆದ್ರೆ, ರಾತ್ರಿ 11.45ರಿಂದ ಬೆಳಿಗ್ಗೆ 5.30ರವರೆಗೆ ಮಂಗಳೂರು ನಗರದಲ್ಲಿ ಎಲ್ಲಾ ರೀತಿಯ ವ್ಯಾಪಾರ-ವಹಿವಾಟುಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಕಮಿಷನರ್ ಖಡಕ್ ಸೂಚನೆ ನೀಡಿದ್ದಾರೆ.

ಕರ್ನಾಕಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language