
ನಟಿ ಕಾವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಟ್ ಆದ ಬಳಿಕ ಮೊದಲ ಬಾರಿಗೆ ಟಿವಿ9 ಜೊತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ತಮಗೆ ಹರ್ಟ್ ಆಗಿದ್ದು ಏನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ‘ಮಂಜ ಅವರು ಯಾವಾಗಲೂ ನನ್ನನ್ನು ಕೆಣಕುತ್ತಿದ್ದರು. ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ನಲ್ಲಿ ತುಂಬ ತೊಂದರೆ ಕೊಟ್ಟರು. ಕೂದಲು ಎಂದರೆ ನನಗೆ ತುಂಬಾ ಪ್ರೀತಿ. ಆದರೆ ಅವರು ನನ್ನ ಕೂದಲಿಗೆ ಶೇವಿಂಗ್ ಕ್ರೀಮ್ ಆಗಿದರು. ಮೇಕಪ್ ಬಗ್ಗೆ ಅವರು ಆಡಿದ ಮಾತುಗಳಿಂದ ನನಗೆ ವೈಯಕ್ತಿಕವಾಗಿ ಬಹಳ ನೋವಾಯಿತು’ ಎಂದು ಕಾವ್ಯಾ ಗೌಡ ಅವರು ಹೇಳಿದ್ದಾರೆ. ಬಿಗ್ ಬಾಸ್ ಶೋನಿಂದ ಹೊರಬಂದಿರುವ ಅವರು ಈಗ ಒಳ್ಳೆಯ ಅವಕಾಶವನ್ನು ಎದುರುನೋಡುತ್ತಿದ್ದಾರೆ. ಆ ಬಗ್ಗೆ ಕೂಡ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
