Hashtagintro

ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಕ್ಲೌಡ್ ನೈನ್ ಆಸ್ಪತ್ರೆ

ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಕ್ಲೌಡ್ ನೈನ್ ಆಸ್ಪತ್ರೆ

ಬೆಂಗಳೂರು, ನವೆಂಬರ್ 09: ವೈದ್ಯಕೀಯ ನಿರ್ಲಕ್ಷ್ಯದಿಂದ ಒಂದು ವರ್ಷದ ಮಗು ಶಯಾನ ಕೋಮಾಗೆ ತಲುಪಿದೆ ಎಂಬ ಆರೋಪಗಳನ್ನು ಕ್ಲೌಡ್ ನೈನ್ ಆಸ್ಪತ್ರೆ ಆಡಳಿತ ಮಂಡಳಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಆಸ್ಪತ್ರೆಯ ವೈದ್ಯರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಹೇಳಿರುವ ಆಸ್ಪತ್ರೆ, ಈ ಪ್ರಕರಣದಲ್ಲಿ ಯಾವುದೇ ವೈದ್ಯಕೀಯ ನಿರ್ಲಕ್ಷ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮನೆ ಆಟವಾಡುತ್ತಿದ್ದಾಗ ಕಿವಿಗೆ ಗಾಯ ಮಾಡಿಕೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗಾಗಿ ಅರವಳಿಕೆ ನೀಡುವ ಮೊದಲು ವೈದ್ಯರು ಖಾಲಿ ಹೊಟ್ಟೆಯಲ್ಲಿರಲು ಸೂಚಿಸಿದ್ದರು. ಆದರೆ, ಪೋಷಕರು ಮಗುವಿಗೆ ಹಾಲು ನೀಡಿದ್ದರಿಂದ “ಆಸ್ಪಿರೇಷನ್ ಕಾಂಪ್ಲಿಕೇಷನ್” ಉಂಟಾಗಿ ಆಮ್ಲಜನಕ ಸಮಸ್ಯೆ ಎದುರಾಯಿತು ಎಂದು ಆಸ್ಪತ್ರೆ ತಿಳಿಸಿದೆ. 14 ವರ್ಷಗಳ ಅನುಭವವಿರುವ ಹಿರಿಯ ತಜ್ಞರೇ ಅರವಳಿಕೆ ನೀಡಿದ್ದರು. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು, ನರವೈಜ್ಞಾನಿಕ ಸುಧಾರಣೆಗೆ ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ನುಗ್ಗಿ ಗಲಾಟೆ ಮತ್ತು ಹಲ್ಲೆ ನಡೆಸಿದವರ ವಿರುದ್ಧ ಅನಿವಾರ್ಯವಾಗಿ ಎಫ್‌ಐಆರ್ ದಾಖಲಿಸಬೇಕಾಯಿತು ಎಂದು ಆಡಳಿತ ಮಂಡಳಿ ಹೇಳಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language