
ಉಡುಪಿ, ನವೆಂಬರ್ 14: ಉಡುಪಿಯ ಮಣಿಪಾಲ್‌ನಲ್ಲಿರುವ ಪಬ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಆರೋಪಗಳು ಕೇಳಿಬಂದಿದೆ. ಪಬ್‌ಗಳಲ್ಲಿ ಯುವಕ-ಯುವತಿಯರು ಅಸಭ್ಯವಾಗಿ ವರ್ತಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾದಕ ದ್ರವ್ಯಗಳ ಬಳಕೆಯ ಕುರಿತು ಗಂಭೀರ ಆರೋಪಗಳಿಗೆ ಕಾರಣವಾಗಿವೆ. ಈಶ್ವರ ನಗರದ ಪಬ್ ಒಂದರಲ್ಲಿ ಜನರೆದುರೇ ಜೋಡಿಯೊಂದು ಮದ್ಯಪಾನ ಮಾಡಿ ಚುಂಬಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಅಲ್ಲದೆ, ಯುವಕ-ಯುವತಿಯರು ನಶೆಯಲ್ಲಿ ತೇಲಾಡುತ್ತಾ, ತಾವು ಎಲ್ಲಿದ್ದೇವೆ ಅಥವಾ ಸುತ್ತಮುತ್ತ ಯಾರೆಲ್ಲಾ ಇದ್ದಾರೆ ಎಂಬ ಪ್ರಜ್ಞೆಯಿಲ್ಲದೆ ವರ್ತಿಸುತ್ತಿರುವುದು ವೀಡಿಯೊಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಮೈಮೇಲೆ ಪ್ರಜ್ಞೆ ಇಲ್ಲದಷ್ಟು ಕುಡಿದು ಅಸಭ್ಯವಾಗಿ ವರ್ತಿಸುತ್ತಿರುವ ಇವರ ನಡವಳಿಕೆಯು ಸುತ್ತಮುತ್ತಲಿನ ಜನರಿಗೆ ಮುಜುಗರ ತಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
