Hashtagintro

ಮುಂದುವರಿದ ಷೇರುಪೇಟೆ ಲಾಭದ ಓಟ; 25,100 ಅಂಕಗಳ ಸಮೀಪಕ್ಕೆ ಹೋದ ನಿಫ್ಟಿ

ಮುಂದುವರಿದ ಷೇರುಪೇಟೆ ಲಾಭದ ಓಟ; 25,100 ಅಂಕಗಳ ಸಮೀಪಕ್ಕೆ ಹೋದ ನಿಫ್ಟಿ

ಮುಂಬೈ, ನವೆಂಬರ್ 9: ಷೇರು ಮಾರುಕಟ್ಟೆ ಇವತ್ತು ನೆಗಟಿವ್ ರಿಟರ್ನ್ ನೀಡಬಹುದು ಎಂಬಂತಹ ಟ್ರೆಂಡ್ ಸೋಮವಾರ ಬೆಳಗ್ಗೆ ಇತ್ತು. ಮಧ್ಯಾಹ್ನದ ನಂತರ ಚೇತರಿಕೆ ಶುರುವಾಗಿ, ಸೆನ್ಸೆಕ್ಸ್, ನಿಫ್ಟಿ ಹಾಗೂ ಇತರ ಕೆಲ ಪ್ರಮುಖ ಸೂಚ್ಯಂಕಗಳು ಹಸಿರುಬಣ್ಣದೊಂದಿಗೆ ದಿನಾಂತ್ಯಗೊಳಿಸಿವೆ. ಸೆನ್ಸೆಕ್ಸ್ 107 ಅಂಕಗಳನ್ನು ಗಳಿಸಿ 81,106 ಮಟ್ಟದಲ್ಲಿದೆ. ನಿಫ್ಟಿ 58 ಅಂಕಗಳನ್ನು ಗಳಿಸಿ 25,076 ಮಟ್ಟದಲ್ಲಿ ಅಂತ್ಯಗೊಂಡಿದೆ.

ಬ್ಯಾಂಕಿಂಗ್, ಹೆಲ್ತ್​ಕೇರ್ ಮತ್ತು ಫಾರ್ಮಾ ಸೆಕ್ಟರ್​ನ ಷೇರುಗಳ ಭರ್ಜರಿ ಓಟ ಮುಂದುವರಿದಿದೆ. ಇದರಿಂದಾಗಿ ಇವತ್ತು ಪ್ರಮುಖ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಿಕೊಂಡಿವೆ. ಆದರೆ, ಐಟಿ, ಎಫ್​ಎಂಸಿಜಿ, ಮೆಟಲ್ ಸೆಕ್ಟರ್​ಗಳ ಷೇರುಗಳಿಗೆ ಇವತ್ತು ಹೆಚ್ಚು ಹಿನ್ನಡೆಯಾಗಿವೆ.

ಇದನ್ನೂ ಓದಿ: ಅಮೆರಿಕ ಡಾಲರ್ ಎದುರು ಜಿಗಿಜಿಗಿಯುತ್ತಿರುವ ರುಪಾಯಿ; 7 ತಿಂಗಳ ಗರಿಷ್ಠ ಮೌಲ್ಯ ಮಟ್ಟ ತಲುಪಿದ ಭಾರತದ ಕರೆನ್ಸಿ

ಹೆಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಎಲ್ ಅಂಡ್ ಟಿ ಷೇರುಗಳು ಪ್ರಮುಖವಾಗಿ ನಿಫ್ಟಿಯನ್ನು ಮೇಲೆತ್ತಿವೆ. ಇನ್ಫೋಸಿಸ್, ಐಟಿಸಿ, ಟಾಟಾ ಸ್ಟೀಲ್, ಏರ್ಟೆಲ್ ಇತ್ಯಾದಿ ಷೇರುಗಳು ಕುಸಿತ ಕಂಡಿವೆ.

ಬೆಳಗ್ಗೆ ಷೇರುಗಳು ಕುಸಿತ ಕಂಡಿದ್ಯಾಕೆ?

ಸೋಮವಾರ ನಿಫ್ಟಿ 25,076 ಅಂಕಗಳಲ್ಲಿ ಅಂತ್ಯಗೊಳ್ಳುವ ಮುನ್ನ ಬೆಳಗಿನ ವಹಿವಾಟಿನ ಒಂದು ಹಂತದಲ್ಲಿ 24,838 ರ ಮಟ್ಟಕ್ಕೆ ಕುಸಿದಿತ್ತು. ಕಳೆದ ವಾರ ಮಾರುಕಟ್ಟೆ ಅದ್ವಿತೀಯ ಓಟ ಕಂಡಿದ್ದರಿಂದ ಬಹಳಷ್ಟು ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಹಾಗಂತ ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ಓದಿ: ಇದು ಹಾಲಿವುಡ್ ಸ್ಪೈ ಥ್ರಿಲ್ಲರ್​ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ

ಭಾರತದ ಷೇರು ಮಾರುಕಟ್ಟೆ ಏರುತ್ತಿರುವುದ್ಯಾಕೆ?

ವಿದೇಶೀ ಹೂಡಿಕೆದಾರರು ಭಾರತದ ಈಕ್ವಿಟಿ ಮಾರುಕಟ್ಟೆಗೆ ಹಣ ಹಾಕುತ್ತಿರುವುದು ಮುಂದುವರಿಯುತ್ತಿದೆ. ಇದು ಮಾರುಕಟ್ಟೆಯ ಓಟಕ್ಕೆ ಪ್ರಮುಖ ಕಾರಣವಾಗಿದೆ. ಹಾಗೆಯೇ, ತೈಲ ಬೆಲೆ ಇಳಿದಿರುವುದು, ರುಪಾಯಿ ಮೌಲ್ಯ ಹೆಚ್ಚಿರುವುದೂ ಕೂಡ ಮಾರುಕಟ್ಟೆಯನ್ನು ಉಬ್ಬಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language