Hashtagintro

ಮೂರು ಮದುವೆ ಆಗಿದ್ದೇಕೆ? ಸ್ಪಷ್ಟನೆ ಕೊಟ್ಟಿದ್ದ ಪವನ್ ಕಲ್ಯಾಣ್

ಮೂರು ಮದುವೆ ಆಗಿದ್ದೇಕೆ? ಸ್ಪಷ್ಟನೆ ಕೊಟ್ಟಿದ್ದ ಪವನ್ ಕಲ್ಯಾಣ್

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ಪ್ರತ್ಯೇಕಗೊಳ್ಳುತ್ತಿರುವುದಾಗಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ. ಹದಿಮೂರು ವರ್ಷಗಳ ದಾಂಪತ್ಯ ಜೀವನದ ನಂತರ ಪರಸ್ಪರ ಗೌರವದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಇಬ್ಬರೂ ಜೊತೆಯಾಗಿ ನಿಲ್ಲುವುದಾಗಿ ಹೇಳಿದ್ದಾರೆ.

ಈ ಮೂರನೇ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಹಳೆಯ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಈ ಹಿಂದೆ ಚಾಟ್ ಶೋ ಒಂದರಲ್ಲಿ ಮಾತನಾಡಿದ್ದ ಅವರು, ತಮಗೆ ಬ್ರಹ್ಮಚಾರಿ ಆಗಿ ಉಳಿಯುವ ಆಸೆ ಇತ್ತು ಎಂದಿದ್ದರು. ಯೋಗ ಮಾರ್ಗದಲ್ಲಿ ಸಾಗಲು ಬಯಸಿದ್ದ ತಮ್ಮ ಜೀವನದಲ್ಲಿ ಹೀಗೆಲ್ಲಾ ಸಂಭವಿಸುತ್ತದೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ತಮ್ಮ ಮೂರು ಮದುವೆಗಳ ಬಗ್ಗೆ ಎದ್ದಿದ್ದ ಟೀಕೆಗಳಿಗೆ ಪವನ್ ಕಲ್ಯಾಣ್ ಈ ಹಿಂದೆ ನೇರವಾಗಿಯೇ ಉತ್ತರಿಸಿದ್ದರು. ತಾವು ಒಂದೇ ಬಾರಿಗೆ ಮೂವರನ್ನು ಮದುವೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಒಂದು ಸಂಬಂಧ ಸರಿಯಾಗಿ ಸಾಗದಿದ್ದಾಗ ಮತ್ತೊಂದು ಮದುವೆ ಆಗಬೇಕಾಯಿತು ಎಂದು ಅವರು ತಮ್ಮ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದರು.

ಪವನ್ ಕಲ್ಯಾಣ್ ಅವರ ಮೊದಲ ಮದುವೆ 1997 ರಲ್ಲಿ ನಂದಿನಿ ಅವರೊಂದಿಗೆ ಹಿರಿಯರ ಸಮ್ಮುಖದಲ್ಲಿ ನಡೆದಿತ್ತು. ಆ ಸಂಬಂಧ ಮುರಿದುಬಿದ್ದ ನಂತರ 2009 ರಲ್ಲಿ ನಟಿ ರೇಣು ದೇಸಾಯಿ ಅವರನ್ನು ವರಿಸಿದ್ದರು. ನಂತರ ರೇಣು ದೇಸಾಯಿ ಅವರಿಂದಲೂ 2012ರಲ್ಲಿ ವಿಚ್ಛೇದನ ಪಡೆದು, 2013ರಲ್ಲಿ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಪವನ್ ಕಲ್ಯಾಣ್, ಚಿರಂಜೀವಿ, ರಾಮ್ ಚರಣ್

ಇತ್ತೀಚೆಗಷ್ಟೇ ಪವನ್ ಅವರ ಎರಡನೇ ಪತ್ನಿ ರೇಣು ದೇಸಾಯಿ ಕೂಡ ತಮ್ಮ ಹಳೆಯ ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರು. ತಮ್ಮ ವಿಚ್ಛೇದನವಾಗಿ ಹದಿನಾಲ್ಕು ವರ್ಷಗಳಾಗಿದ್ದರೂ ಜನರು ಇಂದಿಗೂ ತಮ್ಮನ್ನು ಅದೇ ವಿಚಾರಕ್ಕೆ ಜಡ್ಜ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಶ್ರೀರಾಮನ ವನವಾಸವೂ ಹದಿನಾಲ್ಕು ವರ್ಷಕ್ಕೆ ಮುಗಿದಿತ್ತು ಆದರೆ ತಮ್ಮ ವನವಾಸ ಎಂದು ಮುಗಿಯುತ್ತದೋ ಎಂದು ಅವರು ಅಳಲು ತೋಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language