Hashtagintro

ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!

ಮೆರವಣಿಗೆಯಲ್ಲಿ ಗಮನ ಸೆಳೆದ ರೋಬೋಟಿಕ್​ ಆನೆಗಳು!

ಕೋಲಾರ, ನವೆಂಬರ್ 1: ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಮೆರವಣಿಗೆಗಳಲ್ಲಿ ಜೀವಂತ ಆನೆಗಳ ನಿರ್ವಹಣೆ ಸವಾಲಿನ ಕೆಲಸ. ಈ ಸವಾಲಿಗೆ ಪರಿಹಾರವಾಗಿ ರೋಬೋಟಿಕ್ ಆನೆಗಳು ಹೊಸ ಆಕರ್ಷಣೆಯಾಗಿ ಹೊರಹೊಮ್ಮಿವೆ. ಕೋಲಾರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ರೋಬೋಟಿಕ್ ಆನೆಯು ನೆರೆದಿದ್ದವರ ಗಮನ ಸೆಳೆಯಿತು. ನೋಡಲು ಅಪ್ಪಟ ಜೀವಂತ ಆನೆಯಂತೆಯೇ ಕಾಣುವ ಈ ರೋಬೋಟಿಕ್ ಆನೆಯು, ತಲೆ ಅಲ್ಲಾಡಿಸುವುದು, ಕಣ್ಣು ಮಿಟುಕಿಸುವುದು, ಬಾಲ ಮತ್ತು ಕಿವಿಗಳನ್ನು ಅಲ್ಲಾಡಿಸುವುದು ಮಾತ್ರವಲ್ಲದೆ, ಸೊಂಡಿಲಿನಿಂದ ನೀರನ್ನು ಚಿಮ್ಮಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿತು. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಪ್ರತಿಮೆಯನ್ನೂ ಸಹ ಆನೆಯ ಮೇಲೆ ಕೂರಿಸಲಾಗಿತ್ತು.

ಸಾವಿರಾರು ಜನ ಸೇರುವ ಮೆರವಣಿಗೆಗಳಲ್ಲಿ ಆನೆಗಳ ಸುರಕ್ಷಿತ ನಿರ್ವಹಣೆ ಮತ್ತು ಇತ್ತೀಚಿನ ಶಿವಮೊಗ್ಗ ಘಟನೆಯಂತಹ ಅಹಿತಕರ ಘಟನೆಗಳನ್ನು ತಪ್ಪಿಸಲು ರೋಬೋಟಿಕ್ ಆನೆಗಳು ಸೂಕ್ತ ಪರ್ಯಾಯವಾಗಿವೆ. ತಮಿಳುನಾಡಿನ ಕೊಯಮತ್ತೂರಿನ ಕಲಾವಿದರು ರಬ್ಬರ್, ಫೈಬರ್ ಮತ್ತು ಸ್ಟೀಲ್ ಬಳಸಿ ಈ ರೋಬೋಟಿಕ್ ಆನೆಗಳನ್ನು ತಯಾರಿಸುತ್ತಾರೆ. ಕಾರ್ಯಕ್ರಮಗಳ ಆಯೋಜಕರಿಗೆ ಇದು ವರದಾನವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language