Hashtagintro

ಮ್ಯಾನುಫ್ಯಾಕ್ಚರಿಂಗ್​ಗೆ ಸರ್ಕಾರದಿಂದ ಮತ್ತಷ್ಟು ಬಲ; ಕ್ರೀಡಾ ಸಾಮಗ್ರಿ ಮತ್ತು ಕಂಟೇನರ್ ತಯಾರಿಕೆಗೆ 11,856 ಕೋಟಿ ರೂ ಅನುದಾನ

ಮ್ಯಾನುಫ್ಯಾಕ್ಚರಿಂಗ್​ಗೆ ಸರ್ಕಾರದಿಂದ ಮತ್ತಷ್ಟು ಬಲ; ಕ್ರೀಡಾ ಸಾಮಗ್ರಿ ಮತ್ತು ಕಂಟೇನರ್ ತಯಾರಿಕೆಗೆ 11,856 ಕೋಟಿ ರೂ ಅನುದಾನ

ನವದೆಹಲಿ, ಅಕ್ಟೋಬರ್ 28: ಕೇಂದ್ರ ಸರ್ಕಾರ ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಅನ್ನು ಬಲಪಡಿಸಲು ಮತ್ತಷ್ಟು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸಂಪುಟ ಇಂದು ಅನುಮೋದಿಸಿದ ಕ್ರಮಗಳಲ್ಲಿ ಎರಡು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಡಗುಗಳಲ್ಲಿ ಸರಕಗಳನ್ನು ಸಾಗಿಸಲು ಬಳಸುವ ಕಂಟೇನರ್​ಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಕ್ರೀಡಾ ಸಾಮಗ್ರಿಗಳ ಮ್ಯಾನುಫ್ಯಾಕ್ಚರಿಂಗ್​ಗೆ ಭಾರೀ ಹಣ ಬಿಡುಗಡೆ ಮಾಡಲು ಸಂಪುಟದಿಂದ ಅನುಮೋದನೆ ಸಿಕ್ಕಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನಡೆದ ಕೇಂದ್ರ ಸಂಪುಟ ಸಭೆಯು ಕಂಟೇನರ್ ಮ್ಯಾನುಫ್ಯಾಕ್ಚರಿಂಗ್ ಪ್ರೊಮೋಶನ್ ಸ್ಕೀಮ್ ಹಾಗೂ ಖೇಲೋ ಇಂಡಿಯಾ ಸ್ಪೋರ್ಟ್ಸ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್​ಗಳಿಗೆ ತಲಾ 10,000 ಕೋಟಿ ರೂ ಹಾಗೂ 1,856.67 ಕೋಟಿ ರೂ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ

ಕ್ರೀಡಾ ಸರಕುಗಳ ತಯಾರಿಕೆಗೆ ಇರುವ ಈ ಸ್ಕೀಮ್​ಗೆ 1,856.67 ಕೋಟಿ ರೂ ಬಿಡುಗಡೆ ಮಾಡಲಾಗುತ್ತದೆ. ಇದು 2033-34ರವರೆಗೂ ಜಾರಿಯಲ್ಲಿರುತ್ತದೆ. ಕ್ರೀಡಾ ಸರಕುಗಳ ತಯಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಿ, ಕ್ಲಸ್ಟರ್ ಆಧಾರಿತ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಬೆಳವಣಿಗೆಗೆ ಉತ್ತೇಜಿಸುವ ಉದ್ದೇಶ ಹೊಂದಿದೆ. ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಈ ಸ್ಕೀಮ್​ನ ಗುರಿಯಾಗಿರುತ್ತದೆ.

ಬಹಳಷ್ಟು ಎಂಎಸ್​ಎಂಇಗಳು ಈ ಸ್ಕೀಮ್​ನಿಂದ ಲಾಭ ಮಾಡಬಹುದು. ಈ ಕ್ಷೇತ್ರದಲ್ಲಿ ಸಂಶೋಧನೆ, ತಂತ್ರಜ್ಞಾನ, ನಾವೀನ್ಯತೆಗೆ ಪ್ರಾಮುಖ್ಯ ಕೊಡುವ ನಿಟ್ಟಿನಲ್ಲಿ ಹೂಡಿಕೆಗಳಾಗುವ ನಿರೀಕ್ಷೆ ಇದೆ.

ಕಂಟೇನರ್ ಮ್ಯಾನುಫ್ಯಾಕ್ಚರಿಂಗ್​ಗೆ 10,000 ಕೋಟಿ ರೂ

10,000 ಕೋಟಿ ರೂ ಬಜೆಟ್​ನಲ್ಲಿ ಕಂಟೇನರ್ ಮ್ಯಾನುಫ್ಯಾಕ್ಚರಿಂಗ್ ಪ್ರೊಮೋಶನ್ ಸ್ಕೀಮ್​ಗೆ ಅನುಮೋದನೆ ನೀಡಲಾಗಿದೆ. ಈ ಅನುದಾನವು 2039-40ರವರೆಗೂ ಚಾಲ್ತಿಯಲ್ಲಿರುತ್ತದೆ.

ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ

ಈ ಸ್ಕೀಮ್ ಅಡಿ ತಯಾರಕರು ಪಡೆಯುವ ಸಾಲಕ್ಕೆ ಶೇ. 3ರಷ್ಟು ಬಡ್ಡಿ ರಿಯಾಯಿತಿ ಸಿಗುತ್ತದೆ. ಜಾಗತಿಕ ಶಿಪ್ಪಿಂಗ್ ಸ್ಟ್ಯಾಂಡರ್ಡ್​ನಲ್ಲಿ ತಯಾರಿಸಲಾಗುವ ಕಂಟೇನರ್​ಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language