
ಕಾರ್ತಿಕ್ ಸುಬ್ಬರಾಜು ದಕ್ಷಿಣದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು. ಪೂರ್ಣ ಕಲಾತ್ಮಕ ಅಲ್ಲದ ಇತ್ತ ಪೂರ್ಣ ಮಾಸ್ ಕಮರ್ಶಿಯಲ್ ಸಹ ಅಲ್ಲದ ರೀತಿಯ ಸಿನಿಮಾಗಳನ್ನು ನಿರ್ದೇಶಿಸುವ ಕಾರ್ತಿಕ್, ಈಗಾಗಲೇ ‘ಪಿಜ್ಜಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಗಮೇ ತಂದಿರಂ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಲೋಕೇಶ್, ಮೊದಲ ಬಾರಿಗೆ ತಮಿಳಿನಿಂದ ಹೊರಗೆ ಬಂದು ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕತೆ ಹೇಳಿದ್ದಾರಂತೆ.
‘ಪರ್ಮಿಟ್ ರೂಮ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕಾರ್ತಿಕ್ ಸುಬ್ಬರಾಜ್, ಭವಿಷ್ಯದಲ್ಲಿ ಚಿರಂಜೀವಿ ಅವರೊಂದಿಗೆ ಕೆಲಸ ಮಾಡುವ ಆಶಯವಿದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರು ನಿರ್ದೇಶಕರು, ‘ನಾನು ಚಿರಂಜೀವಿ ಸರ್ ಅವರಿಗೆ ಒಂದು ಕಥೆ ಹೇಳಿದ್ದೇನೆ, ಆದರೆ ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ ಎಂಬ ಭರವಸೆಯಿದೆ’ ಎಂದು ತಿಳಿಸಿದ್ದಾರೆ. ಕಾರ್ತಿಕ್ ಸುಬ್ಬರಾಜು ಬಹಳ ಒಳ್ಳೆಯ ಸಿನಿಮಾ ನಿರ್ದೇಶಕ ಕೆಲವಾರು ಪ್ರಶಸ್ತಿಗಳನ್ನೂ ಸಹ ಪಡೆದಿದ್ದಾರೆ. ಇದೀಗ ಚಿರಂಜೀವಿ ಅವರು ಕಾರ್ತಿಕ್ ಜೊತೆ ನಟಿಸಿದರೆ ಅದೊಂದು ಒಳ್ಳೆಯ ಸಿನಿಮಾ ಆಗುವುದು ಖಾತ್ರಿ.
ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ಜರ್ನಿ ಗ್ರಾಫ್ ಕೋವಿಡ್ ಬಳಿಕ ಪಾತಾಳಕ್ಕೆ ಇಳಿದಿದೆ. ಕೋವಿಡ್ ಬಳಿಕ ಚಿರಂಜೀವಿ ನಟಿಸಿರುವ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ. ಪ್ರಸ್ತುತ ಅವರು ಬಾಬಿ ಕೊಲ್ಲಿ ನಿರ್ದೇಶನದ ‘ಕಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ವಿಶ್ವಂಭರ’ ಹೆಸರಿನ ಫ್ಯಾಂಟಸಿ ಥ್ರಿಲ್ಲರ್ ಸಿನಿಮಾನಲ್ಲೂ ಚಿರು ನಟಿಸಿದ್ದಾರೆ ಆದರೆ ಆ ಸಿನಿಮಾ ನಿಂತು ಹೋಗಿದೆ ಎನ್ನಲಾಗುತ್ತಿದೆ. ನಾನಿ ನಿರ್ಮಾಣ ಮಾಡಿ ಶ್ರೀಕಾಂತ್ ಒಡೆಲ ನಿರ್ದೇಶನ ಮಾಡುತ್ತಿರುವ ಸಿನಿಮಾನಲ್ಲೂ ಚಿರಂಜೀವಿ ನಟನೆ ಮಾಡಲಿದ್ದಾರೆ. ಈಗ ಕಾರ್ತಿಕ್ ಸಹ ಕತೆ ಹೇಳಿದ್ದು, ಕತೆಯನ್ನು ಚಿರಂಜೀವಿ ಒಪ್ಪಿಕೊಳ್ಳುತ್ತಾರಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ರಜನೀಕಾಂತ್ ಸಿನಿಮಾನಲ್ಲಿ ಶ್ರೀಲೀಲಾ, ಚಿತ್ರೀಕರಣದಲ್ಲಿ ಭಾಗಿ
ಕಾರ್ತಿಕ್ ಸುಬ್ಬರಾಜು ತಮಿಳಿನ ಸ್ಟಾರ್ ನಿರ್ದೇಶಕ ಇತ್ತೀಚೆಗಷ್ಟೆ ಕಾರ್ತಿಕ್ ನಿರ್ದೇಶನ ಮಾಡಿರುವ ‘ಡೊರೊತಿ’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಸಾಕಷ್ಟು ವಿವಾದಗಳನ್ನು ಸಹ ಎಬ್ಬಿಸಿದೆ. ಸಿನಿಮಾನಲ್ಲಿ ಲಿಂಗ ಅಸಮಾನತೆ ಸೇರಿದಂತೆ ಎಲ್ಜಿಬಿಟಿಕ್ಯು ಕುರಿತಾದ ವಿಷಯಗಳನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಕೆಲವರು ಸಿನಿಮಾ ಅನ್ನು ವಿರೋಧ ಮಾಡಿದ್ದರೆ ಇನ್ನು ಕೆಲವರು ಸಿನಿಮಾ ಅನ್ನು ಕೊಂಡಾಡಿದ್ದೂ ಸಹ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
