Hashtagintro

‘ರಾಕಾ’ ಸಿನಿಮಾ ವಿಳಂಬವೇಕೆ? ಅಲ್ಲು ಅರ್ಜುನ್ ಕಡೆಯಿಂದ ಸಿಕ್ತು ಸ್ಪಷ್ಟನೆ

‘ರಾಕಾ’ ಸಿನಿಮಾ ವಿಳಂಬವೇಕೆ? ಅಲ್ಲು ಅರ್ಜುನ್ ಕಡೆಯಿಂದ ಸಿಕ್ತು ಸ್ಪಷ್ಟನೆ

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ‘ರಾಕಾ’ ಎಂಬ ಹೆಸರಿನ ಈ ಚಿತ್ರದ ಬಗ್ಗೆ ಇದೀಗ ಸ್ವತಃ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ‘ಆಕಾಶಂಲೋ ಒಕ ತಾರಾ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳ ಬಹುದಿನಗಳ ಕುತೂಹಲಕ್ಕೆ ಬನ್ನಿ ಉತ್ತರ ನೀಡಿದ್ದಾರೆ.

‘ರಾಕಾ’ ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ ಎಂಬುದು ನನಗೂ ತಿಳಿದಿದೆ. ಸಿನಿಮಾ ಬಿಡುಗಡೆಯಾದ ನಂತರ ಯಾವುದೇ ಚರ್ಚೆಗಳಿಗೆ ಅವಕಾಶವಿರಬಾರದು ಎಂಬುದು ಚಿತ್ರತಂಡದ ಉದ್ದೇಶವಾಗಿದೆ. ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮಾವನ್ನೇ ನೀಡಬೇಕೆಂದು ಇಡೀ ತಂಡ ಹಗಲಿರುಳು ಶ್ರಮಿಸುತ್ತಿದೆ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಅಭಿಮಾನಿಗಳು ಇನ್ನಷ್ಟು ಕಾಲ ತಾಳ್ಮೆಯಿಂದ ಕಾಯಬೇಕು. ಕಾಯುವಿಕೆಗೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ನಾವು ಖಂಡಿತವಾಗಿಯೂ ಅದ್ಭುತವಾದ ಕಂಟೆಂಟ್ ನೀಡುತ್ತೇವೆ’ ಎಂದು ಅಲ್ಲು ಅರ್ಜುನ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಾತುಗಳು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿವೆ.

ಇದೇ ವೇದಿಕೆಯಲ್ಲಿ ಅಲ್ಲು ಅರ್ಜುನ್ ಅವರು ‘ಆಕಾಶಂಲೋ ಒಕ ತಾರಾ’ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪವನ್ ಸಾದಿನೇನಿ ನಿರ್ದೇಶನದ ಈ ಸಿನಿಮಾ ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ಜೈಲರ್ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ ಅಲ್ಲು ಅರ್ಜುನ್

ಲೈಟ್ ಬಾಕ್ಸ್ ಮೀಡಿಯಾ, ಸ್ವಪ್ನ ಸಿನಿಮಾಸ್, ವೈಜಯಂತಿ ಮೂವೀಸ್ ಹಾಗೂ ಗೀತಾ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಬೃಹತ್ ನಿರ್ಮಾಣ ಸಂಸ್ಥೆಗಳ ಬೆಂಬಲ ಇರುವುದರಿಂದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಒಟ್ಟಿನಲ್ಲಿ ಅಲ್ಲು ಅರ್ಜುನ್ ಮಾತುಗಳಿಂದ ‘ರಾಕಾ’ ಸಿನಿಮಾದ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language