Hashtagintro

‘ರಾಮಾಯಣ’ ಬೆನ್ನಲ್ಲೇ ಸಾಯಿ ಪಲ್ಲವಿ ಮತ್ತೊಂದು ಬಿಗ್ ಪ್ರಾಜೆಕ್ಟ್; ಐಪಿಎಸ್ ಆದ ನಟಿ

‘ರಾಮಾಯಣ’ ಬೆನ್ನಲ್ಲೇ ಸಾಯಿ ಪಲ್ಲವಿ ಮತ್ತೊಂದು ಬಿಗ್ ಪ್ರಾಜೆಕ್ಟ್; ಐಪಿಎಸ್ ಆದ ನಟಿ

ನಟಿ ಸಾಯಿ ಪಲ್ಲವಿ ಅವರ ಹವಾ ಸದ್ಯ ಸಿನಿಮಾಗಳಲ್ಲಿ ಜೋರಾಗಿಯೇ ಮುಂದುವರಿದೆ. ರಾಮಾಯಣ ಮಹಾಕಾವ್ಯದ ಬೆನ್ನಲ್ಲೇ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾದ ಅಪ್‌ಡೇಟ್ ಹೊರಬಿದ್ದಿದೆ. ನಟ ಧನುಷ್ ಹಾಗೂ ರಾಜಕುಮಾರ್ ಪೆರಿಯಸಾಮಿ ಕಾಂಬಿನೇಷನ್‌ನ ‘ಓಂ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಅವರ ಪಾತ್ರದ ಪರಿಚಯಾತ್ಮಕ ಗ್ಲಿಂಪ್ಸ್ ಬಿಡುಗಡೆಯಾಗಿದೆ.

ದೀಪಾವಳಿ ಸಂಭ್ರಮದಲ್ಲಿ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ‘ಸೀತೆ’ಯಾಗಿ ನವೆಂಬರ್ 5ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರಲಿದ್ದಾರೆ. ಈ ಮಹತ್ವದ ಸಿನಿಮಾ ತೆರೆಕಂಡ ಕೇವಲ ಎರಡೇ ವಾರಗಳ ಅಂತರದಲ್ಲಿ, ಅಂದರೆ ನವೆಂಬರ್ 20ರಂದು ಸಾಯಿ ಪಲ್ಲವಿ ಅವರ ಮತ್ತೊಂದು ಬಹುಭಾಷಾ ಚಿತ್ರವಾದ ‘ಓಂ’ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಒಂದೇ ತಿಂಗಳಲ್ಲಿ ಸಾಲು ಸಾಲು ಬಿಗ್ ಪ್ರಾಜೆಕ್ಟ್‌ಗಳ ಮೂಲಕ ಅವರು ಪ್ರೇಕ್ಷಕರ ಮುಂದೆ ಬರುತ್ತಿರುವುದು ವಿಶೇಷವಾಗಿದೆ.

ಬಿಡುಗಡೆಯಾಗಿರುವ ‘ಓಂ’ ಚಿತ್ರದ ಗ್ಲಿಂಪ್ಸ್‌ನಲ್ಲಿ ಸಾಯಿ ಪಲ್ಲವಿ ಅವರನ್ನು ‘ನಿತ್ಯಾ ರೆಡ್ಡಿ’ ಎಂಬ ಐಪಿಎಸ್ ಅಧಿಕಾರಿಯಾಗಿ ಪರಿಚಯಿಸಲಾಗಿದೆ. ರಕ್ತಚಂದನ ಕಳ್ಳಸಾಗಣೆ ಜಾಲವನ್ನು ಬೇಧಿಸುವ ಕಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕರ್ತವ್ಯದ ವೇಳೆ ಹುತಾತ್ಮರಾದ ಅರಣ್ಯ ಅಧಿಕಾರಿಯ ಮಗಳಾಗಿರುವ ನಿತ್ಯಾ ರೆಡ್ಡಿ ಪಾತ್ರಕ್ಕೆ ವೈಯಕ್ತಿಕ ಸೇಡು ಹಾಗೂ ಜವಾಬ್ದಾರಿಯ ಹಿನ್ನೆಲೆಯಿದೆ. ಆಂಧ್ರಪ್ರದೇಶ ಪೊಲೀಸ್ ಕೇಡರ್​ನಿಂದ ಸಿಬಿಐ ಹಾಗೂ ಇಂಟರ್‌ಪೋಲ್ ವರೆಗೆ ಬೆಳೆದ ಅವರ ವೃತ್ತಿಜೀವನವು ಸಿನಿಮಾದಲ್ಲಿ ರೋಚಕವಾಗಿರಲಿದೆ.

ಈ ಚಿತ್ರದಲ್ಲಿ ಧನುಷ್ ಮರ ಕಡಿಯುವ ಕಾರ್ಮಿಕನಾಗಿ ನಟಿಸುತ್ತಿದ್ದರೆ, ಮಲಯಾಳಂ ನಟ ಮಮ್ಮೂಟಿ ಹಾಗೂ ಬಾಲಿವುಡ್ ದಿಗ್ಗಜ ನಾಸಿರುದ್ದೀನ್ ಶಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೀತಾ ದೇವಿಯಾಗಿ ಕನ್ನಡಿಗರ ಮನಗೆಲ್ಲಲು ಸಜ್ಜಾಗಿರುವ ಸಾಯಿ ಪಲ್ಲವಿ, ಈಗ ಐಪಿಎಸ್ ಆಫೀಸರ್ ಆಗಿ ರಕ್ತಚಂದನ ಸಿಂಡಿಕೇಟ್ ವಿರುದ್ಧ ಯಾವ ರೀತಿ ಸಮರ ಸಾರಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಇದನ್ನೂ ಓದಿ:  ಯಶ್ ಸ್ಟಾರ್​​ಡಂ ನೋಡಿ ಹೌಹಾರಿದ ಸಾಯಿ ಪಲ್ಲವಿ; ಮೆಚ್ಚುಗೆಯ ಮಾತು

ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಾಯಿ ಅಭ್ಯಾಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಭಷೆಗಳಲ್ಲಿ ನವೆಂಬರ್ 20ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language