Hashtagintro

‘ರಾಮಾಯಣ 2’ ಜತೆ ‘ಸ್ಪಿರಿಟ್’ ಸಿನಿಮಾ ಕ್ಲ್ಯಾಶ್: ಹೊಸ ರಿಲೀಸ್ ದಿನಾಂಕ ಘೋಷಣೆ

‘ರಾಮಾಯಣ 2’ ಜತೆ ‘ಸ್ಪಿರಿಟ್’ ಸಿನಿಮಾ ಕ್ಲ್ಯಾಶ್: ಹೊಸ ರಿಲೀಸ್ ದಿನಾಂಕ ಘೋಷಣೆ

ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟ ಪ್ರಭಾಸ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಈ ಹಿಂದೆ ಡಿಸೆಂಬರ್ 2026ರಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಈಗ ಮುಂದೂಡಲ್ಪಟ್ಟಿದ್ದು, 2027ರ ದೀಪಾವಳಿ ಹಬ್ಬದ ವಿಶೇಷವಾಗಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಘೋಷಿಸಿದ್ದಾರೆ. ವಿಶೇಷವೆಂದರೆ, ಬಾಕ್ಸ್‌ಆಫೀಸ್‌ನಲ್ಲಿ ‘ಸ್ಪಿರಿಟ್’ ಚಿತ್ರವು ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ರಾಮಾಯಣ ಭಾಗ 2’ ಚಿತ್ರದೊಂದಿಗೆ ಮುಖಾಮುಖಿಯಾಗಲಿದೆ.

ಭಾನುವಾರ (ಅಕ್ಟೋಬರ್ 18) ಅಭಿಮಾನಿಗಳಿಗೆ ಸಪ್ರೈಸ್ ನೀಡುವುದಾಗಿ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದ ಸಂದೀಪ್ ರೆಡ್ಡಿ ವಂಗಾ, ‘ಪ್ರೀತಿಯ ಪ್ರಭಾಸ್ ಅಣ್ಣ ಅವರ ಅಭಿಮಾನಿಗಳೇ, ಪ್ರಭಾಸ್ ಅವರ ಹೊಸ ಪೋಸ್ಟರನ್ನು ಹೊಸ ಬಿಡುಗಡೆ ದಿನಾಂಕದೊಂದಿಗೆ ಕೆಲವೇ ನಿಮಿಷಗಳಲ್ಲಿ ಪರಿಚಯಿಸುತ್ತೇನೆ’ ಎಂದು ತಿಳಿಸಿದ್ದರು. ಕೆಲವೇ ಕ್ಷಣಗಳಲ್ಲಿ ಪೋಸ್ಟರ್ ಹಂಚಿಕೊಂಡ ಅವರು, ‘ಸ್ಪಿರಿಟ್ ಸಿನಿಮಾ ಅಕ್ಟೋಬರ್ 29, 2027ರ ದೀಪಾವಳಿಯಂದು ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ’ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

2027ರ ದೀಪಾವಳಿಯಂದೇ ರಣಬೀರ್ ಕಪೂರ್ ನಟನೆಯ ‘ರಾಮಾಯಣ ಭಾಗ 2’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮೊದಲ ಭಾಗವು ಈ ವರ್ಷ ನವೆಂಬರ್ 5ರ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಇದರ ಎರಡನೇ ಭಾಗವನ್ನು 2027ರ ದೀಪಾವಳಿಗೆ ಬಿಡುಗಡೆ ಮಾಡುವುದಾಗಿ ಬಹಳ ಹಿಂದೆಯೇ ಘೋಷಿಸಲಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಭಾಗದ ನಿರ್ದಿಷ್ಟ ದಿನಾಂಕ ಇನ್ನೂ ಅಧಿಕೃತವಾಗಿ ಹೊರಬಿಲ್ಲದಿದ್ದರೂ, ದೀಪಾವಳಿಯ ರಜಾದಿನಗಳಲ್ಲಿ ಈ ಎರಡು ಬಿಗ್ ಬಜೆಟ್ ಸಿನಿಮಾಗಳು ಮುಖಾಮುಖಿಯಾಗುತ್ತಿರುವುದು ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸಂದೀಪ್ ರೆಡ್ಡಿ ವಂಗಾ ಅವರು 2023ರಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ‘ಅನಿಮಲ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಮಾಡುತ್ತಿರುವ ಸಿನಿಮಾ ‘ಸ್ಪಿರಿಟ್’. ‘ಅನಿಮಲ್’ ವಿಶ್ವಾದ್ಯಂತ 900 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಅವರ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿತ್ತು. 2021ರಲ್ಲಿ ಪ್ರಭಾಸ್ ಜೊತೆಗಿನ ‘ಸ್ಪಿರಿಟ್’ ಸಿನಿಮಾವನ್ನು ಘೋಷಿಸಲಾಗಿದ್ದು, ನವೆಂಬರ್ 2025ರಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಆರಂಭದಲ್ಲಿ 2027ರ ಮಾರ್ಚ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾವು ಈಗ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ಮತ್ತೆ ಮುಂದಕ್ಕೆ ಹೋಯ್ತು ಪ್ರಭಾಸ್ ಸಿನಿಮಾ ರಿಲೀಸ್

‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಜತೆಗೆ ವಿವೇಕ್ ಒಬೆರಾಯ್, ಕಾಂಚನಾ ಮತ್ತು ಐಶ್ವರ್ಯ ದೇಸಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ, ಕೃಷನ್ ಕುಮಾರ್ ಮತ್ತು ಪ್ರಭಾಕರ್ ರೆಡ್ಡಿ ವಂಗಾ ಅವರು ‘ಟಿ-ಸೀರೀಸ್’ ಮತ್ತು ‘ಭದ್ರಕಾಲಿ ಪಿಕ್ಚರ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language