Hashtagintro

ರಾವಣನ ಗೆಟಪ್‌ನಲ್ಲಿ ಮಕ್ಕಳೊಂದಿಗೆ ಯಶ್ ಮಸ್ತಿ; ಪ್ರೀತಿಗೆ ಧನ್ಯವಾದ ತಿಳಿಸಿದ ದಂಪತಿ 

ರಾವಣನ ಗೆಟಪ್‌ನಲ್ಲಿ ಮಕ್ಕಳೊಂದಿಗೆ ಯಶ್ ಮಸ್ತಿ; ಪ್ರೀತಿಗೆ ಧನ್ಯವಾದ ತಿಳಿಸಿದ ದಂಪತಿ 

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾ ನವೆಂಬರ್ 5ರಂದು ತೆರೆಕಂಡಿದೆ. ಈ ಸಿನಿಮಾ ಉತ್ತಮ ವಿಮರ್ಶೆ ಪಡೆದು ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಅತ್ಯುತ್ತಮ ಗಳಿಕೆ ದಾಖಲಿಸುತ್ತಿದೆ. ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವ ಹಾಗೂ ಸಹ ನಿರ್ಮಾಪಕರಾಗಿರುವ ನಟ ಯಶ್ ಚಿತ್ರಕ್ಕೆ ಸಿಕ್ಕ ಭರ್ಜರಿ ಪ್ರೀತಿಗೆ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಆಗಸ್ಟ್‌ನಲ್ಲಿ ತೆರೆಕಂಡಿದ್ದ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ತಕ್ಕಮಟ್ಟಿನ ಪ್ರತಿಕ್ರಿಯೆ ಪಡೆದಿತ್ತು. ಆ ಬಳಿಕ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರಲಿಲ್ಲ. ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾತ್ರ ಅವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಈಗ ದೀಪಾವಳಿ ಹಬ್ಬದ ವಿಶೇಷವಾಗಿ ಅವರು ತಮ್ಮ ಕುಟುಂಬದ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಯಶ್ ಹಂಚಿಕೊಂಡಿರುವ ಫೋಟೋಗಳಲ್ಲಿ ಒಂದು ಚಿತ್ರದಲ್ಲಿ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜತೆ ವೆಕೇಷನ್‌ನಲ್ಲಿರುವ ಫೋಟೋ ಇದೆ. ಮತ್ತೊಂದು ಫೋಟೋದಲ್ಲಿ ರಾಮಾಯಣ ಚಿತ್ರೀಕರಣದ ಬಿಹೈಂಡ್ ದಿ ಸೀನ್ಸ್ ಹಂಚಿಕೊಳ್ಳಲಾಗಿದೆ. ರಾವಣನ ಗೆಟಪ್‌ನಲ್ಲಿ ಯಶ್ ಗಂಭೀರವಾಗಿ ನಿಂತಿದ್ದರೆ, ಅವರ ಮಕ್ಕಳು ತಮಾಷೆಯ ಭಂಗಿ ನೀಡಿದ್ದಾರೆ. ಈ ಕ್ಯೂಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

 

View this post on Instagram

 

A post shared by Yash (@thenameisyash)

ಯಶ್ ಅವರ ಈ ಪೋಸ್ಟ್‌ಗೆ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಟ ಅಕ್ಷಯ್ ಒಬೆರಾಯ್ ಹಾರ್ಟ್ ಎಮೋಜಿ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮಿತ್ ಮಲ್ಹೋತ್ರಾ ಹಾಗೂ ಯಶ್ ಒಟ್ಟಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ವಿಶ್ವದಾದ್ಯಂತ ಈ ಸಿನಿಮಾ ಕೇವಲ ಐದು ದಿನಗಳಲ್ಲಿ ಬರೋಬ್ಬರಿ 673.90 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಇದನ್ನೂ ಓದಿ:  ರಾವಣನಾಗಿ ರಾಕಿ ಅಬ್ಬರ; ಯಶ್ ವಿಷಯದಲ್ಲಿ ಪುನೀತ್ ಹೇಳಿದ ಆ ಮಾತು ನಿಜವಾಯ್ತು

ರಾಮಾಯಣ ಚಿತ್ರವು ಸೀತೆಯ ಸ್ವಯಂವರ, ವನವಾಸ ಹಾಗೂ ರಾವಣನ ಸೀತಾ ಅಪಹರಣದ ಕಥೆ ಇದೆ. ಸಿನಿಮಾದ ಕೊನೆಯಲ್ಲಿ ಬರುವ ಹನುಮಂತನ ಎಂಟ್ರಿ ಪ್ರೇಕ್ಷಕರಿಗೆ ರೋಮಾಂಚನ ನೀಡಿದೆ. ಈ ಚಿತ್ರದ ಎರಡನೇ ಭಾಗವು 2028ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಯಶ್ ಅವರ ಈ ಹೊಸ ಪೋಸ್ಟ್ ಹಾಗೂ ಸಿನಿಮಾದ ಯಶಸ್ಸು ಅಭಿಮಾನಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language