Hashtagintro

ರಿಯಾದ್‌ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯದ ಮೇಲೆ ಹೌತಿಯಿಂದ ಕ್ಷಿಪಣಿ ದಾಳಿ

ರಿಯಾದ್‌ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯದ ಮೇಲೆ ಹೌತಿಯಿಂದ ಕ್ಷಿಪಣಿ ದಾಳಿ

ರಿಯಾದ್, ಅಕ್ಟೋಬರ್ 27: ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ರಕ್ಷಣಾ ಸಚಿವಾಲಯ ಮತ್ತು ಪ್ರಮುಖ ತೈಲ ಸಂಸ್ಕರಣಾಗಾರ ರಾಸ್ ತನುರಾ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ. ರಾಜಧಾನಿ ರಿಯಾದ್‌ನಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಬಂದಿದ್ದು, ಸೌದಿ ರಕ್ಷಣಾ ಪಡೆಗಳು ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿ ಧ್ವಂಸಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಯೆಮೆನ್‌ನ ಹೌತಿ ಮಿಲಿಟರಿ ವಕ್ತಾರ ಯಹ್ಯಾ ಸಾರಿ ಈ ಬಗ್ಗೆ ಹೇಳಿಕೆ ನೀಡಿದ್ದು, ” ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ರಕ್ಷಣಾ ಸಚಿವಾಲಯದ ಕಟ್ಟಡವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಲಾಗಿದ್ದು, ಅದು ನೇರವಾಗಿ ಟಾರ್ಗೆಟ್​​ಗೆ ಅಪ್ಪಳಿಸಿದೆ” ಎಂದು ಹೇಳಿಕೊಂಡಿದ್ದಾರೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source: TV9 Kannada World

Read full article on TV9 Kannada World

Leave a Comment

Your email address will not be published. Required fields are marked *

समाचार की भाषा चुनें / Choose News Language