Hashtagintro

ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

ನವದೆಹಲಿ, ನವೆಂಬರ್ 2: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಆದಾಯ ಗಳಿಕೆ ಈ ಎರಡನೇ ಕ್ವಾರ್ಟರ್​ನಲ್ಲಿ ಅಮೋಘವಾಗಿ ದಾಖಲಾಗಿದೆ. ಇದರ ಬೆನ್ನಲ್ಲೇ ಇವತ್ತು ರಿಲಯನ್ಸ್​ನ ಷೇರುಬೆಲೆ ಸಖತ್ ಏರಿದೆ. ಬೆಳಗಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಬೆಲೆ ಶೇ. ಕ್ಕಿಂತಲೂ ಅಧಿಕ ಜಿಗಿದಿದೆ. ಎನ್​ಎಸ್​ಇ ಮತ್ತು ಬಿಎಸ್​ಇ ಎರಡೂ ವಿನಿಮಯ ಕೇಂದ್ರಗಳಲ್ಲೂ ರಿಲಯನ್ಸ್ ಷೇರುಗಳಿಗೆ ಇವತ್ತು ಬೇಡಿಕೆ ಬಂದಿದೆ. ಬಹಳಷ್ಟು ಸಂಖ್ಯೆಯಲ್ಲಿ ವಹಿವಾಟುಗಳಾಗುತ್ತಿವೆ.

ಆರ್​ಐಎಲ್​ನ ಆದಾಯ ವರದಿ: ಉತ್ತಮ ಲಾಭ ದಾಖಲು

ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಉತ್ತಮ ಆದಾಯ ದಾಖಲಿಸಿರುವುದು ಅದರ ತ್ರೈಮಾಸಿಕ ವರದಿಯಿಂದ ತಿಳಿದುಬಂದಿದೆ. ತೈಲ ಸಂಸ್ಕರಣೆ, ರಾಸಾಯನಿಕ ಇತ್ಯಾದಿ ಹತ್ತು ಹಲವು ಬ್ಯುಸಿನೆಸ್​ಗಳನ್ನು ಒಳಗೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಟ್ಟಾರೆ ಆದಾಯವು 3.62 ಲಕ್ಷ ಕೋಟಿ ರೂ ದಾಖಲಾಗಿದೆ. ಇದು ಅದರ ಈವರೆಗಿನ ಅತ್ಯುತ್ತಮ ಕ್ವಾರ್ಟರ್ ರಿಸಲ್ಟ್ ಎನಿಸಿದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ತೆರಿಗೆ ಇತ್ಯಾದಿ ವೆಚ್ಚವನ್ನು ಕಳೆದು ಉಳಿಯುವ ನಿವ್ವಳ ಲಾಭ 29,550 ಕೋಟಿ ರೂ ಇದೆ. ಇದೂ ಕೂಡ ಈವರೆಗಿನ ಗರಿಷ್ಠ ಲಾಭ ಎನಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ಜಿಯೋ ಪ್ಲಾಟ್​ಫಾರ್ಮ್ಸ್​ನ ಆದಾಯವು ಶೇ. 11.3ರಷ್ಟು ಹೆಚ್ಚಿದೆ. ಅದರ ಷೇರುಬೆಲೆಯೂ ಸತತವಾಗಿ ಏರುತ್ತಿದೆ.

ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್​ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ

ಆರ್​ಐಎಲ್ ಷೇರಿಗೆ ಪಾಸಿಟಿವ್ ರೇಟಿಂಗ್ ಕೊಟ್ಟ ಬ್ರೋಕರೇಜ್ ಸಂಸ್ಥೆಗಳು

ದಾಖಲೆಯ ಆದಾಯ ಮತ್ತು ಲಾಭ ಪಡೆದ ರಿಲಯನ್ಸ್ ಇಂಡಸ್ಟ್ರೀಸ್​ನ ಷೇರಿಗೆ ‘ಖರೀದಿ’ ರೇಟಿಂಗ್ ಅನ್ನು ಬ್ರೋಕರೇಜ್ ಸಂಸ್ಥೆಗಳು ನೀಡಿವೆ. ಗೋಲ್ಡ್​ಮನ್ ಸ್ಯಾಕ್ಸ್ ಕಂಪನಿಯು ಆರ್​ಐಎಲ್ ಷೇರಿಗೆ 1,840 ರೂ ಟಾರ್ಗೆಟ್ ಪ್ರೈಸ್ ನೀಡಿದೆ. ಸದ್ಯ ಇದರ ಷೇರು ಬೆಲೆ 1,256 ರೂನಲ್ಲಿದೆ. ನೊಮುರಾ ಕೂಡ ರಿಲಯನ್ಸ್ ಷೇರಿಗೆ ಥಂಬ್ಸ್ ಅಪ್ ಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language