Hashtagintro

‘ರೇಟ್ ಇರದಿದ್ರೂ ನಾನು ಟೊಮ್ಯಾಟೋನೆ ಬೆಳೆಯೋದು’; ‘ಫಾದರ್’ ಸಾಂಗ್ ಲಾಂಚ್ ಈವೆಂಟ್​​ನಲ್ಲಿ ಕೃಷ್ಣ ಮಾತು

‘ರೇಟ್ ಇರದಿದ್ರೂ ನಾನು ಟೊಮ್ಯಾಟೋನೆ ಬೆಳೆಯೋದು’; ‘ಫಾದರ್’ ಸಾಂಗ್ ಲಾಂಚ್ ಈವೆಂಟ್​​ನಲ್ಲಿ ಕೃಷ್ಣ ಮಾತು

ಕೆಲವು ಕಲಾವಿದರು ಫ್ಯಾಮಿಲಿ ಡ್ರಾಮಾ ಮಾತ್ರ ಮಾಡುತ್ತಾರೆ. ಆ್ಯಕ್ಷನ್ ಸಿನಿಮಾಗಳನ್ನು ಮಾಡಲು ಅವರು ಎಂದಿಗೂ ಮನಸ್ಸು ಮಾಡುವುದಿಲ್ಲ. ಇದರಿಂದ ಕೆಲವೊಮ್ಮೆ ಸೋಲು ಉಂಟಾಗುವ ಸಾಧ್ಯತೆ ಇರುತ್ತದೆ. ಈ ವಿಷಯಗಳ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. ತಾವು ಫ್ಯಾಮಿಲಿ ಡ್ರಾಮಾ ಸಿನಿಮಾಗಳನ್ನು ಮಾತ್ರ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತಾ ಅಯ್ಯಂಗಾರ್, ನಾಗಭೂಷಣ್ ಮೊದಲಾದವರು ‘ಫಾದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಗಗನದ ನೇಸರ’ ಸಾಂಗ್ ರಿಲೀಸ್ ಆಗಿದೆ. ಈ ಈವೆಂಟ್​​ನಲ್ಲಿ ಮಾತನಾಡಿದ ಕೃಷ್ಣ, ತಾವು ಯಾಕೆ ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಿದರು.

ಇದನ್ನೂ ಓದಿ: ‘ಲವ್ ಮಾಕ್ಟೆಲ್ 3’ ಸೆಟ್​ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

‘ಫಾದರ್ ಸಿನಿಮಾದಲ್ಲಿ ಕಥೆ ಚೆನ್ನಾಗಿದೆ. ವಿಷಯದಲ್ಲಿ ತಾಕತ್ತಿದೆ. ನನಗೆ ತುಂಬಾನೇ ಎಗ್ಸೈಟ್​​ಮೆಂಟ್ ಇದೆ. ನಾನು ಫ್ಯಾಮಿಲಿ ಸಿನಿಮಾನೇ ಮಾಡೋದು. ಯಾಕೆ ಆ್ಯಕ್ಷನ್ ಮಾಡಲ್ಲ ಎಂದು ಕೇಳ್ತಾರೆ. ನಾನು ಟೊಮ್ಯಾಟೋ ಬೆಳೆಯೋದು. ರೇಟ್ ಇರಲಿ ಬಿಡಲಿ ಅದನ್ನೇ ಬೆಳೆಯುತ್ತಿದ್ದೇನೆ. ಟೊಮ್ಯಾಟೋಗೆ ಸೀಸನ್ (ಫ್ಯಾಮಿಲಿ ಸಿನಿಮಾಗಳಿಗೆ) ರೇಟ್ ಬಂದಿದೆ. ಹೊಡಿಬಡಿಯಿಂದ ಬ್ರೇಕ್ ಪಡೆದಿದ್ದಾರೆ. ಈ ರೀತಿಯ ಸಿನಿಮಾ ನೋಡುತ್ತಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಇದರಿಂದ ಲಾಭ ಆಗಲಿ’ ಎಂದು ಕೃಷ್ಣ ಹಾರೈಸಿದ್ದಾರೆ.

‘ಫಾದರ್’ ಚಿತ್ರವನ್ನು ಆರ್ ಚಂದ್ರು ಅವರು ತಮ್ಮ ಆರ್​ಸಿ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಅವರ ಪತ್ನಿ ಯಮುನಾ ಚಂದ್ರಶೇಖರ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ರಾಜಮೋಹನ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದಾರೆ.
ಡಿಸೆಂಬರ್ 4ರಂದು ‘ಫಾದರ್’ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಸಿನಿಮಾ ಸಿದ್ಧವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಚಂದ್ರು ಉದ್ದೇಶ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language