Hashtagintro

ಲಾಲ್‌ಬಾಗ್‌ನಲ್ಲಿ ಸಿಂಗಾಪುರ ಮಾದರಿಯ ಮಳೆಕಾಡಿನ ಸಸ್ಯೋದ್ಯಾನ: ಬೆಂಗಳೂರಿನಲ್ಲಿ ಕೊಡಗು,ಊಟಿ ರೀತಿ ವಾತಾವರಣ

ಲಾಲ್‌ಬಾಗ್‌ನಲ್ಲಿ ಸಿಂಗಾಪುರ ಮಾದರಿಯ ಮಳೆಕಾಡಿನ ಸಸ್ಯೋದ್ಯಾನ: ಬೆಂಗಳೂರಿನಲ್ಲಿ ಕೊಡಗು,ಊಟಿ ರೀತಿ ವಾತಾವರಣ

ಬೆಂಗಳೂರು, (ನವೆಂಬರ್ 03): ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯಭಾಗದಲ್ಲಿರುವ ಐತಿಹಾಸಿಕ ಲಾಲ್‌ಬಾಗ್‌ಗೆ ಈಗ ಮತ್ತೊಂದು ಹೊಸ ಮೆರುಗು ಬರಲಿದೆ. ಸಿಂಗಾಪುರದ ಪ್ರಸಿದ್ಧ ಗಾರ್ಡನ್ಸ್ ಬೈ ದಿ ಬೇ ಮಾದರಿಯಲ್ಲಿ ಲಾಲ್‌ಬಾಗ್‌ನಲ್ಲಿ ಮಳೆಕಾಡಿನ ಅನುಭವ ನೀಡುವ ವಿಶೇಷ ಸಸ್ಯೋದ್ಯಾನ ನಿರ್ಮಾಣವಾಗುತ್ತಿದೆ. ಈ ಮೂಲಕ ಕೊಡಗು, ಊಟಿಯ ತಂಪಾದ ವಾತಾವರಣವನ್ನು ಬೆಂಗಳೂರಿನಲ್ಲೇ ಸೃಷ್ಟಿಸುವ ಪ್ರಯತ್ನಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ. ಬರೋಬ್ಬರಿ ಎರಡೂವರೆ ಎಕರೆ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಅಪರೂಪದ ಸಸ್ಯ ಪ್ರಭೇದಗಳನ್ನು ಬೆಳೆಸಲಾಗುತ್ತಿದ್ದು, ಬಿರುಬಿಸಿಲಿನಲ್ಲೂ ಮಂಜಿನ ನಡುವೆ ಕಾಡಿನಲ್ಲಿ ಸಂಚರಿಸಿದ ಅನುಭವ ಪ್ರವಾಸಿಗರಿಗೆ ಸಿಗಲಿದೆ.

ಸಿಂಗಾಪುರದ ಗಾರ್ಡನ್ಸ್ ಬೈ ದಿ ಬೇ ಮಾದರಿಯಲ್ಲಿ

ಹೌದು…ಸಿಂಗಾಪುರದ ಗಾರ್ಡನ್ಸ್ ಬೈ ದಿ ಬೇ ಮಾದರಿಯಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಎರಡೂವರೆ ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉದ್ಯಾನದ ವಿಶೇಷತೆಯೇ ತಂಪಾದ ಮಂಜಿನ ವಾತಾವರಣ. ಇದಕ್ಕಾಗಿ ಮರಗಳಿಗೆ ಜರ್ಮನಿಯ ವಿಶೇಷ ಫೈನ್ ನಾಜಲ್ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಪೈಪ್‌ಗಳ ಮೂಲಕ ನಿರಂತರವಾಗಿ ಸೂಕ್ಷ್ಮ ನೀರಿನ ಹನಿಗಳನ್ನು ಸಿಂಪಡಿಸಿ ಮಂಜಿನ ವಾತಾವರಣ ಸೃಷ್ಟಿಸಲಾಗುತ್ತದೆ. ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಈ ಪ್ರದೇಶ ಮಂಜಿನಿಂದ ಆವೃತವಾಗಲಿದ್ದು, ಕೊಡಗು ಹಾಗೂ ಊಟಿಯ ಮಳೆಕಾಡಿನ ಅನುಭವವನ್ನು ಬೆಂಗಳೂರಿನಲ್ಲೇ ಪಡೆಯಬಹುದಾಗಿದೆ.

ಇದನ್ನೂ ಓದಿ: ದೀಪಾವಳಿ ಪಟಾಕಿ: ಮಿಂಟೋ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್, ವೈದ್ಯರ ಸಲಹೆಗಳು ಕೇಳಿ

ಇನ್ನು ಮಳೆ ನೀರಿನ ಸಂರಕ್ಷಣೆಗೂ ವಿಶೇಷ ಆದ್ಯತೆ ನೀಡಲಾಗಿದೆ. ಲಾಲ್‌ಬಾಗ್‌ನ ಬಂಡೆಗಳ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸಲು 13 ಚೆಕ್‌ಡ್ಯಾಂಗಳು ಹಾಗೂ ನಾಲ್ಕು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ನೂರಾರು ಬೃಹತ್ ಮರಗಳ ನೆರಳು, ನೀರಿನ ಸಂಗ್ರಹ ಮತ್ತು ತುಂತುರು ಹನಿ ಸಿಂಪರಣೆಯಿಂದ ಈ ಪ್ರದೇಶ ಸದಾ ತಂಪಾಗಿರುವಂತೆ ಯೋಜನೆ ರೂಪಿಸಲಾಗಿದೆ. ಇನ್ನು ಈ ಮಳೆಕಾಡಿನ ಸಸ್ಯೋದ್ಯಾನದಲ್ಲಿ 250ಕ್ಕೂ ಹೆಚ್ಚು ಬಗೆಯ ಅಪರೂಪದ ಸಸ್ಯಗಳು ಕಂಗೊಳಿಸಲಿವೆ. ಆರ್ಕಿಡ್‌ಗಳು, ಲಿಲ್ಲಿ, ಫರ್ನ್ಸ್, ಫಿಲೋಡೆಂಡ್ರಾನ್, ಅಲೋಕೇಶಿಯಾ ಸೇರಿದಂತೆ ಹಲವು ವೈವಿಧ್ಯಮಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಕರ್ನಾಟಕ, ಕೇರಳ, ಒಡಿಶಾ, ಹಿಮಾಚಲ ಪ್ರದೇಶ ರಾಜ್ಯಗಳು ಸೇರಿದಂತೆ ಚೀನ , ಜಪಾನ್ ಸೇರಿ ವಿವಿಧ ದೇಶಗಳ ಸಸ್ಯಗಳನ್ನು ತರಿಸಲಾಗುತ್ತಿದೆ.

ಒಟ್ಟಿನಲ್ಲಿ ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರಿಗೆ ಕೇವಲ ಹೂವು, ಗಿಡಮರಗಳ ಸೌಂದರ್ಯ ಮಾತ್ರವಲ್ಲದೆ ಮಳೆಕಾಡಿನ ವಿಶಿಷ್ಟ ಪರಿಸರವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಮಳೆ ನೀರಿನ ಸಂರಕ್ಷಣೆ, ಹಸಿರು ಪರಿಸರ ಮತ್ತು ಅಪರೂಪದ ಸಸ್ಯ ಸಂಪತ್ತಿನ ಮೂಲಕ ಸುಸ್ಥಿರ ಅಭಿವೃದ್ಧಿಯ ಮಾದರಿಯಾಗಲು ಈ ಮಳೆಕಾಡಿನ ಸಸ್ಯೋದ್ಯಾನ ಸಜ್ಜಾಗುತ್ತಿದೆ. ಉದ್ಯಾನವನಗಳ ನಗರಿ ಬೆಂಗಳೂರಿಗೆ ಮತ್ತೊಂದು ಹೊಸ ಹಸಿರು ಆಕರ್ಷಣೆ ಸೇರ್ಪಡೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language