Hashtagintro

ವೋಟರ್ ಐಡಿಯಲ್ಲಿ ತಪ್ಪಿದ್ದರೆ ಮನೆಯಲ್ಲೇ ಸುಲಭವಾಗಿ ತಿದ್ದುಪಡಿ ಮಾಡ್ಬಹುದು

ವೋಟರ್ ಐಡಿಯಲ್ಲಿ ತಪ್ಪಿದ್ದರೆ ಮನೆಯಲ್ಲೇ ಸುಲಭವಾಗಿ ತಿದ್ದುಪಡಿ ಮಾಡ್ಬಹುದು

ಭಾರತದ ಚುನಾವಣಾ ಆಯೋಗದಿಂದ 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರಿಗೆ ನೀಡುವ ಈ ಮತದಾರರ ಗುರುತಿನ ಚೀಟಿಯೂ ಅಧಿಕೃತ ಗುರುತಿನ ದಾಖಲೆಯಾಗಿದೆ. ಇದು ದಾಖಲೆ ಮಾತ್ರವಲ್ಲ, ಭಾರತೀಯನೆಂಬ ಅಧಿಕೃತ ಗುರುತು ಇದಾಗಿದೆ. ಆದರೆ, ವೋಟ್ ಹಾಕಲು ಮತದಾರರ ಗುರುತಿನ ಚೀಟಿ (Voter ID) ಅತ್ಯಗತ್ಯ. ಈ ಗುರುತಿನ ಚೀಟಿಯಲ್ಲಿ ಹೆಸರು, ವಿಳಾಸ ಅಥವಾ ಜನ್ಮದಿನಾಂಕದಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಈ ತಿದ್ದುಪಡಿಗೆ ನೀವು ಕಚೇರಿಗೆ ಅಲೆಯಬೇಕಾಗಿಲ್ಲ. ಮನೆಯಲ್ಲಿದ್ದುಕೊಂಡೇ ಚುನಾವಣಾ ಆಯೋಗದ ಅಧಿಕೃತ ಜಾಲತಾಣದ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು.

ವೋಟರ್ ಐಡಿ ವಿವರಗಳನ್ನು ತಿದ್ದುಪಡಿ ಮಾಡುವುದು ಹೇಗೆ?

ಹಂತ 1: ವೋಟರ್ಸ್ ಸರ್ವಿಸಸ್ ಪೋರ್ಟಲ್ ಗೆ (https://voters.eci.gov.in/) ಭೇಟಿ ನೀಡಿ. ಅಗತ್ಯವಿದ್ದರೆ ನಿಮ್ಮ ಖಾತೆಗೆ ಲಾಗಿನ್ ಆಗಿ.

ಹಂತ 2: ತಿದ್ದುಪಡಿ ಅಥವಾ ಸಂಬಂಧಿತ ಸೇವೆಯ ವಿಭಾಗದಲ್ಲಿ ನಮೂನೆ 8 ಆಯ್ಕೆ ಮಾಡಿ. ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ಸೇರಿದಂತೆ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ತಿದ್ದುಪಡಿ ಮಾಡಬೇಕಾದ ವಿವರವನ್ನು ಭರ್ತಿ ಮಾಡಿ. ತಿದ್ದುಪಡಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳಾದ ಆಧಾರ್ ಕಾರ್ಡ್, ಜನ್ಮ ದಿನಾಂಕ ಪ್ರಮಾಣಪತ್ರ, ವಿಳಾಸದ ಪುರಾವೆಗಳ ಸ್ಪಷ್ಟವಾದ ಪ್ರತಿಯನ್ನು ಅಪ್ಲೋಡ್ ಮಾಡಿ.

ಇದನ್ನೂ ಓದಿ: ಕಸ್ಟಮರ್ ಕೇರ್ ನಂಬರ್​ಗೆ ಆನ್​ಲೈನ್​ನಲ್ಲಿ ಸರ್ಚ್ ಮಾಡುತ್ತೀರಾ? ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳಬಹುದು, ಹುಷಾರ್..! ಎಸ್​ಬಿಐ ಅಲರ್ಟ್

ಹಂತ 4: ನಮೂದಿಸಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ. ನಿಮಗೆ ದೊರೆಯುವ ಸ್ವೀಕೃತಿ ಸಂಖ್ಯೆಯನ್ನು ಇಟ್ಟುಕೊಳ್ಳಿ. ಈ ನಂಬರ್ ಬಳಸಿ ಸ್ಟೇಟಸ್ ಪರಿಶೀಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language