Hashtagintro

ಸಿಂಪಲ್ ಫೋಟೋ ಹಂಚಿಕೊಂಡು ‘ಇದೇ ನನ್ನ ಮೆಟರ್ನಿಟಿ ಫೋಟೋಶೂಟ್’ ಎಂದ ಸಮಂತಾ

ಸಿಂಪಲ್ ಫೋಟೋ ಹಂಚಿಕೊಂಡು ‘ಇದೇ ನನ್ನ ಮೆಟರ್ನಿಟಿ ಫೋಟೋಶೂಟ್’ ಎಂದ ಸಮಂತಾ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಹಾಗೂ ಅವರ ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಅವರು ತಮ್ಮ ಮೊದಲ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆಯೇ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ವಿಭಿನ್ನ ಫೋಟೋ ಹಾಗೂ ಅದಕ್ಕೆ ನೀಡಿದ ಕ್ಯಾಪ್ಷನ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸಿಂಪಲ್ ಆಗಿದ್ದರೂ ಕೂಡ ಇದನ್ನು ಸಮಂತಾ ಅವರು ಮೆಟರ್ನಿಟಿ ಫೋಟೋಶೂಟ್ ಎಂದು ಕರೆದಿದ್ದಾರೆ.

ಸಾಮಾನ್ಯವಾಗಿ ನಟಿಯರು ಗರ್ಭಿಣಿಯಾದಾಗ ಅದ್ದೂರಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಳ್ಳುವುದು ವಾಡಿಕೆ. ಆದರೆ ಸಮಂತಾ ಅತ್ಯಂತ ಸರಳವಾಗಿ ತಮಾಷೆಯ ಶೈಲಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಪ್ರಿಂಟೆಡ್ ಟಾಪ್ ಹಾಗೂ ಬಿಳಿ ಟ್ರೌಸರ್ ಧರಿಸಿ, ಸನ್ ಗ್ಲಾಸ್ ಹಾಕಿಕೊಂಡು ಸೋಫಾದ ಮೇಲೆ ಆರಾಮವಾಗಿ ಕುಳಿತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ತಮ್ಮ ಹೊಟ್ಟೆಯ ಮೇಲೆ ಎರಡೂ ಕೈಗಳನ್ನಿಟ್ಟುಕೊಂಡು ವಿಶ್ರಮಿಸುತ್ತಿರುವ ಈ ಫೋಟೋಗೆ, ‘ಇದನ್ನೇ ನನ್ನ ಮೆಟರ್ನಿಟಿ ಶೂಟ್ ಎಂದು ಪರಿಗಣಿಸಿ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ, ಸಮಂತಾ ಮತ್ತು ರಾಜ್ ನಿಡಿಮೋರು ದಂಪತಿ ಡಿಸೆಂಬರ್ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಇತ್ತೀಚೆಗಷ್ಟೇ ರಾಜ್ ನಿಡಿಮೋಡು ಅವರು ಹುಟ್ಟಲಿರುವ ಮಗುವಿಗಾಗಿ ಬೇಬಿ ಮಾನಿಟರ್ ಫ್ಲೋರ್ ಸ್ಟ್ಯಾಂಡ್ ಜೋಡಿಸುತ್ತಿರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದರು. ಅವರು ತಂದೆಯ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗುತ್ತಿರುವುದನ್ನು ತೋರಿಸಿದ್ದರು.

 

View this post on Instagram

 

A post shared by Samantha (@samantharuthprabhuoffl)

‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ್ದ ಸಮಂತಾ, ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದರು. ‘ನನ್ನ ಪ್ರಸ್ತುತ ಪರಿಸ್ಥಿತಿಯಿಂದಾಗಿ ಮಾ ಇಂಟಿ ಬಂಗಾರಂ ಸಿನಿಮಾದ ನಂತರ ನಾನು ನಟನೆಯಿಂದ ಸಣ್ಣ ವಿರಾಮ ತೆಗೆದುಕೊಳ್ಳಬೇಕಾಗಿದೆ. ಆ ನಂತರ ಮತ್ತೆ ಹೊಸ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದೇನೆ’ ಎಂದು ಹೇಳಿದ್ದರು.

ಇದನ್ನೂ ಓದಿ: ನಟಿ ಸಮಂತಾ ಸೀಮಂತ ಶಾಸ್ತ್ರ; ಇಲ್ಲಿವೆ ಸುಂದರ ಫೋಟೋಸ್

ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡಿಮೋರು 2025ರ ಡಿಸೆಂಬರ್ 1ರಂದು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಸರಳವಾಗಿ ವಿವಾಹವಾಗಿದ್ದರು. 2024ರಲ್ಲಿ ಬಂದ ‘ಸಿಟಾಡೆಲ್: ಹನಿ ಬನಿ’ ವೆಬ್ ಸೀರೀಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಅವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಮಂತಾ, ಈ ಗರ್ಭಧಾರಣೆಯು ತಮಗೆ ಹಾಗೂ ರಾಜ್‌ಗೆ ನಿಜಕ್ಕೂ ಅಚ್ಚರಿ ತಂದಿದೆ ಎಂದು ಹಂಚಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language