Hashtagintro

ಸೈಲೆಂಟ್ ಆಗಿದ್ದ ಸೈನಿಕ ಈಗ ವೈಲೆಂಟ್: ಹೆಚ್‌ಡಿಕೆ ವಿರುದ್ಧ ಯೋಗೇಶ್ವರ್ ವಾಗ್ದಾಳಿ, ಡಿಕೆಶಿ ಪರ ಬ್ಯಾಟಿಂಗ್!

ಸೈಲೆಂಟ್ ಆಗಿದ್ದ ಸೈನಿಕ ಈಗ ವೈಲೆಂಟ್: ಹೆಚ್‌ಡಿಕೆ ವಿರುದ್ಧ ಯೋಗೇಶ್ವರ್ ವಾಗ್ದಾಳಿ, ಡಿಕೆಶಿ ಪರ ಬ್ಯಾಟಿಂಗ್!

ಬೆಂಗಳೂರು, ನವೆಂಬರ್ 19: ಕಳೆದ ಕೆಲ ತಿಂಗಳಿಂದ ರಾಜಕೀಯವಾಗಿ ಮೌನವಾಗಿದ್ದ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಇದೀಗ ಮತ್ತೆ ಸಕ್ರಿಯರಾಗಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಒಂದೆಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಬ್ಯಾಟ್ ಬೀಸುತ್ತಿರುವ ಯೋಗೇಶ್ವರ್, ಮತ್ತೊಂದೆಡೆ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಇತ್ತೀಚೆಗೆ ರಾಮನಗರದಲ್ಲಿ ಮಾತನಾಡಿದ್ದ ಸಿ.ಪಿ. ಯೋಗೇಶ್ವರ್, ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಮಾಡುತ್ತಿರುವ ಟೀಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತಿದ್ದರು. ಇಬ್ಬರನ್ನೂ ಜೋಡೆತ್ತುಗಳು ಎಂದು ಕರೆಯಲಾಗುತ್ತಿತ್ತು. ಆದರೆ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಕುಮಾರಸ್ವಾಮಿ ಅವರು ಕೀಳುಮಟ್ಟದ ಟೀಕೆಗಳನ್ನು ನಿಲ್ಲಿಸಬೇಕು. ಸರ್ಕಾರಕ್ಕೆ ಸಹಕಾರ ನೀಡದಿದ್ದರೂ ಪರವಾಗಿಲ್ಲ, ರಾಷ್ಟ್ರ ರಾಜಕಾರಣ ಮಾಡಲಿ ಎಂದು ಯೋಗೇಶ್ವರ್ ತಿರುಗೇಟು ನೀಡಿದ್ದರು. ಈ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದರು.

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ವಾಗ್ದಾಳಿ

ಇನ್ನು ಚನ್ನಪಟ್ಟಣದಲ್ಲಿ ಮಾತನಾಡುವಾಗಲೂ ಯೋಗೇಶ್ವರ್ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ‘ಗೊಡ್ಡು ಹಸುವಿನಂತೆ’ ಎಂದು ಟೀಕಿಸಿರುವ ಅವರು, ಚನ್ನಪಟ್ಟಣಕ್ಕೆ ಏನನ್ನೂ ಕೊಡುಗೆಯಾಗಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಏಳು ವರ್ಷಗಳ ಕಾಲ ಚನ್ನಪಟ್ಟಣದ ಶಾಸಕರಾಗಿದ್ದರೂ, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಖಾಸಗಿ ಬಸ್ ನಿಲ್ದಾಣದ ಬಗ್ಗೆ ಗಮನ ಹರಿಸಿಲ್ಲ. ಚನ್ನಪಟ್ಟಣಕ್ಕೆ ಶಾಶ್ವತ ಅಭಿವೃದ್ಧಿಯ ಕೊಡುಗೆ ಏನು ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿ ವಿಚಾರವನ್ನಿಟ್ಟುಕೊಂಡು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಡಿಕೆಶಿ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಯೋಗೇಶ್ವರ್ ಮುಕ್ತ ಮಾತು

ಇದೇ ವೇಳೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮ್ಮ ನಡುವೆ ಈ ಹಿಂದೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವು ಎಂಬುದನ್ನೂ ಯೋಗೇಶ್ವರ್ ಒಪ್ಪಿಕೊಂಡಿದ್ದಾರೆ. ಆದರೆ, ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. ಮುನಿಸಿಕೊಂಡರೆ ನಷ್ಟ ನಮಗೇ ಹೊರತು ಬೇರೆಯವರಿಗಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

.liveTvWebbx {
background: #fff;
margin-bottom: 10px;
}

.liveTvWebbx span {
display: flex;
align-items: center;
justify-content: center;
background: #dc0000;
padding: 5px 0;
}

.liveTvWebbx span a {
color: #fff;
font-size: 22px;
display: flex;
align-items: center;
justify-content: center;
font-weight: 600;
line-height: 28px;
text-decoration: none;
}
.liveTvWebbx span a:hover{color:#fff;}
.liveTvWebbx span a svg {
width: 2rem;
height: 2rem;
margin-right: 5px;
display: inline-block;
flex-shrink: 0;
vertical-align: middle;
fill: none;
stroke: #fff;
stroke-width: 2;
stroke-linecap: round;
stroke-linejoin: round;
transform-origin: center;
animation: livePulse 1.3s ease-in-out infinite;
}

@keyframes livePulse {
0% {
transform: scale(1);
opacity: 1;
}

50% {
transform: scale(1.08);
opacity: 1;
}

100% {
transform: scale(1);
opacity: 1;
}
}

.liveTvWebbx iframe,
.liveTvWebbx amp-iframe {
width: 100%; height: auto; aspect-ratio: 16 / 9; display: block; border: none;
}


LIVE TV

document.addEventListener(‘DOMContentLoaded’, function () {

let liveTV = document.querySelector(‘.live-tv-tracking’);

if (liveTV) {
liveTV.addEventListener(‘click’, function () {

if (typeof dataLayer !== ‘undefined’) {
dataLayer.push({
‘event’: ‘article_live_tv_click’,
‘widget_name’: ‘article_live_tv’,
‘click_location’: ‘article’
});
}

});
}

});

ಒಟ್ಟಿನಲ್ಲಿ, ಕೆಲ ತಿಂಗಳುಗಳಿಂದ ಮೌನವಾಗಿದ್ದ ಸಿ.ಪಿ. ಯೋಗೇಶ್ವರ್ ಇದೀಗ ರಾಜಕೀಯವಾಗಿ ಮತ್ತೆ ಸಕ್ರಿಯರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಪರವಾಗಿ ಮಾತನಾಡುತ್ತಾ, ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ರಾಮನಗರ ಮತ್ತು ಚನ್ನಪಟ್ಟಣದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language